ಸಮ್ಮೇಳನಗಳು

ಸಿಪಿಐ(ಎಂ) ಬಹುಶಃ ಭಾರತದ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಕಟ್ಟುನಿಟ್ಟಿನಿಂದ ಆಚರಿಸುವ ಏಕಮಾತ್ರ ಪಕ್ಷ. ಇದರಲ್ಲಿ ಸಮ್ಮೇಳನಗಳು  ಪ್ರಮುಖ ಪತ್ರ ವಹಿಸುತ್ತವೆ. ಪ್ರತಿ ೩ ವರ್ಷಗಳಿಗೊಮ್ಮೆ ಶಾಖೆ (ಪಕ್ಷದ ಪ್ರಾಥಮಿಕ ಘಟಕ) ಗಳಿಂದ ಆರಂಭಿಸಿ ಎಲ್ಲ ಹಂತದ ಸಮ್ಮೇಳನಗಳು ನಡೆಯುತ್ತವೆ. ಈ ಸಮ್ಮೇಳನಗಳಲ್ಲಿ ಮೇಲಿನ ಹಂತದ ಸಮ್ಮೇಳನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಾಖೆಯಿಂದ ಆರಂಬಿಸಿ ಸ್ಥಳೀಯ, ಬ್ಲಾಕ್, ತಾಲೂಕು, ಜಿಲ್ಲಾ, ರಾಜ್ಯ ಸಮ್ಮೇಳನಗಳು ನಡೆಯುತ್ತವೆ.
ರಾಜ್ಯ ಸಮ್ಮೇಳನಗಳು ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತದೆ. ಮಹಾಧಿವೇಶನ ಪಕ್ಷದ ಅತ್ಯಂತ ಮೇಲಿನ ಮಟ್ಟದ ಸಂಘಟನೆಯಾಗಿದ್ದು, ಅದು ಪಕ್ಷದ ಕೇಂದ್ರ ಸಮಿತಿ, ಪಾಲಿಟ್ ಬ್ಯೂರೋ, ಪ್ರಧಾನ ಕಾರ್ಯದರ್ಶಿಗಳನ್ನು ಆರಿಸುತ್ತದೆ. ಮುಂದಿನ ಮಹಾಧಿವೇಶನದವರೆಗೆ ಪಕ್ಷದ ರಾಜಕೀಯ ನಿಲುಮೆ, ಸಂಘಟನಾ ಯೋಜನೆಗಳನ್ನು ನಿರ್ಧರಿಸುತ್ತದೆ. ಅದೇ ರೀತಿ ರಾಜ್ಯ ಸಮ್ಮೇಳನ ರಾಜ್ಯದಲ್ಲಿ ಪಕ್ಷದ ರಾಜಕೀಯ ನಿಲುಮೆ ಹಾಗೂ ಸಂಘಟನಾ ಯೋಜನೆಗಳನ್ನು ನಿರ್ಧರಿಸುತ್ತದೆ. ಹಿಂದಿನ ರಾಜಕೀಯ-ಸಂಘಟನಾ ಚಟುವಟಿಕೆಗಳನ್ನು ವಿಮರ್ಶಿಸಿ ವರದಿಯನ್ನು ಅಂಗೀಕರಿಸುತ್ತದೆ. ರಾಜ್ಯ ಸಮಿತಿ, ಕಾರ್ಯದರ್ಶಿ ಮಂಡಳಿ (ಸೆಕ್ರೆಟರಿಯಟ್) ಮತ್ತು ಕಾರ್ಯದರ್ಶಿಗಳನ್ನು ಆರಿಸುತ್ತದೆ.

ಪಕ್ಷದ ಇತ್ತೀಚಿನ ಅಂದರೆ 23ನೇ ಮಹಾಧಿವೇಶನ  ಏಪ್ರಿಲ್ 6-10, 2022ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಿತು. ಪಕ್ಷದ ಇತ್ತೀಚಿನ ಅಂದರೆ 23ನೇ ರಾಜ್ಯ ಸಮ್ಮೇಳನ ಗಂಗಾವತಿಯಲ್ಲಿ 2-4 ಜನವರಿ 2022ರಲ್ಲಿ ನಡೆಯಿತು.  24ನೇ ರಾಜ್ಯ ಸಮ್ಮೇಳನ ಡಿಸೆಂಬರ್ 29-31 2024ರಂದು ತುಮಕೂರಿನಲ್ಲಿ ನಡೆಯಲಿದೆ. ಪಕ್ಷದ 24ನೇ ಮಹಾಧಿವೇಶನ  ಏಪ್ರಿಲ್ 2-6, 2025ರಲ್ಲಿ ತಮಿಳುನಾಡಿನ ಮದುರೈನಲ್ಲಿ ನಡೆಯಲಿದೆ..

ಪಕ್ಷದ ರಾಜ್ಯ ಸಮ್ಮೇಳನಗಳ  ಹಾಗೂ ಮಹಾಧಿವೇಶನಗಳ  ಪ್ರಮುಖ ದಸ್ತಾವೇಜುಗಳು – ರಾಜಕೀಯ ವರದಿ, ನಿರ್ಣಯಗಳು, ಸೈದ್ಧಾಂತಿಕ ನಿರ್ಣಯಗಳು ಇತ್ಯಾದಿ – ಇದೇ ಪುಟದಲ್ಲಿ ಇರುವ “ದಸ್ತಾವೇಜುಗಳು” ವಿಭಾಗದಲ್ಲಿ ದೊರೆಯುತ್ತವೆ.

ಹಿಂದಿನ ರಾಜ್ಯ ಸಮ್ಮೇಳನಗಳು ಈ ಕೆಳಗಿನ ಸಮಯದಲ್ಲಿ ನಡೆದವು:

ಸ್ಥಳ                          ತಾರೀಕು                            ಚುನಾಯಿತ ಕಾರ್ಯದರ್ಶಿ

23 ನೇ   ಸಮ್ಮೇಳನ :  ಗಂಗಾವತಿ            ಜನವರಿ 2-4    2022                     ಕಾ.ಯು.ಬಸವರಾಜ

22 ನೇ                     :   ಮೂಡಬಿದರೆ       ಜನವರಿ 2-5    2018                   ಕಾ.ಜಿ.ವಿ.ಶ್ರೀರಾಮರೆಡ್ಡಿ

21 ನೇ                    : ಬೆಂಗಳೂರು             ಜನವರಿ 8-11    2015                            “

20 ನೇ                    : ಚಿಕ್ಕಬಳ್ಳಾಪುರ         ಜನವರಿ 8-11    2012                            “

19 ನೇ        ”           :  ಮೈಸೂರು              ಜನವರಿ 21-24 2008                 ಕಾ.ವಿ.ಜೆ.ಕೆ.ನಾಯರ್

18 ನೇ        ”            :  ಉಡುಪಿ                   ಜನವರಿ 21-24 2005               ಕಾ.ಜಿ.ಎನ್.ನಾಗರಾಜ್

17 ನೇ        ”            :  ಬಳ್ಳಾರಿ                    ಜನವರಿ 28-31 2002   ಕಾ.ಎಸ್.ಸೂರ್ಯನಾರಾಯಣ ರಾವ್

16 ನೇ        ”           :  ಕೋಲಾರ                ಡಿ. 30-31, 1997 ಜ. 1-2 1998         ಕಾ.ಪಿ.ರಾಮಚಂದ್ರ ರಾವ್

15 ನೇ        ”            :  ಗುಲ್ಬರ್ಗ                  ಫೆಬ್ರವರಿ 24-28 1995                         “

14 ನೇ        ”            :  ಮಂಗಳೂರು           ನವಂಬರ್ 11-14 1991                       “

13 ನೇ        ”            :  ಬೆಂಗಳೂರು            ನವೆಂಬರ್ 27-30, 1988                       “