ಏಪ್ರಿಲ್ 09, 2016ರಂದು ಜಂಟಿ ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ
ಜೂನ್ ಮೊದಲ ವಾರದಲ್ಲಿ ಎಡ ಪಕ್ಷಗಳ ಬ್ರಹತ್ ರ್ಯಾಲಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋದಿ ಬಜೆಟ್‍ಗಳನ್ನು ಮತ್ತು ಕೋಮುವಾದ ಹಾಗೂ ಜಾತಿವಾದವನ್ನು ವಿರೋದಿಸಿ, ರೈತರು, ಕೂಲಿಕಾರರು ಮತ್ತು ಕಾರ್ಮಿಕರ ಹಿತಾಸಕ್ತಿಗಳಿಗಾಗಿ, ಜನತೆಯ ಸಂರಕ್ಷಣೆಗಾಗಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಜಂಟಿ ರ್ಯಾಲಿಯನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಯೋಜಿಸಲು ರಾಜ್ಯದ 05 ಎಡಪಕ್ಷಗಳು ನಿರ್ಧರಿಸಿವೆ.
ಅವು ಏಪ್ರಿಲ್ 05, 2016ರಂದು ಇಎಂಎಸ್ ಭವನದಲ್ಲಿ ಸಭೆ ಸೇರಿ, ಈ ಕುರಿತ ಕಾರ್ಯಕ್ರಮವನ್ನು ರೂಪಿಸಿವೆ. ಬೆಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ರ್ಯಾಲಿಯ ಪೂರ್ವದಲ್ಲಿ ರಾಜ್ಯದಾದ್ಯಂತ ಜಂಟಿ ರಾಜಕೀಯ ಪ್ರಚಾರ ಜಾಥಾವನ್ನು ಮೇ ತಿಂಗಳಾದ್ಯಂತ ಸಂಘಟಿಸಲು ನಿರ್ಣಯಿಸಿವೆ. ಇದಕ್ಕೆ ಪೂರ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಂಟಿ ಸಮಾವೇಶಗಳನ್ನು ಏರ್ಪಡಿಸಲು ಸಹ ನಿರ್ಧರಿಸಿವೆ.
ಎಡ ಪಕ್ಷಗಳ ಸಭೆಯು, ರಾಜ್ಯದ ಜನತೆಯ ಹಿತರಕ್ಷಣೆಯಲ್ಲಿ ಎಡಪಕ್ಷಗಳ ಪಾತ್ರ ಮುಂಚೂಣಿಯಲ್ಲಿರುವುದನ್ನು ಗಮನಿಸಿ ಅದನ್ನು ಮತ್ತಷ್ಠು ಬಲಪಡಿಸಿ ವಿಸ್ತಾರಗೊಳಿಸಲು ಚರ್ಚಿಸಿತು. ದೇಶದಾದ್ಯಂತ ಜನತೆಯ ಹಿತಗಳನ್ನು ಮತ್ತು ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಘೋರವಾಗಿ ವಿಫಲವಾಗಿರುವ ಆರ್‍ಎಸ್‍ಎಸ್ ನೇತೃತ್ವದ ಬಿಜೆಪಿಯು ಮತ್ತು ಅದರ ಕೇಂದ್ರ ಸರಕಾರವು ಜನತೆಯ ಪ್ರತಿರೋಧವನ್ನು ಎದುರಿಸಲಾಗದೇ ಜನತೆಯನ್ನು ವಿಭಜಿಸಿ ಆಳುವ ಪ್ರಯತ್ನವನ್ನು ಗಂಭಿರವಾಗಿ ಮುಂದುವರೆಸಿರುವುದನ್ನು ಸಭೆಯು ಖಂಡಿಸಿತು.
ಭಾರತದ ಸಂವಿಧಾನದ ಪೀಠಿಕೆಯೇ ಹೇಳಿರುವಂತೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿಧಿಸಿರುವ, ಒಂದು ಸಾರ್ವಭೌಮ , ಪ್ರಜಾಸತ್ತಾತ್ಮಕ , ಜಾತ್ಯಾತೀತ ಮತ್ತು ಸಮಾಜವಾದಿ ಗಣರಾಜ್ಯವಾಗಿ ಭಾರತ ರಚನೆಗೊಂಡಿದ್ದು, ಪ್ರಭುತ್ವವು ಅದರಲ್ಲಿರುವ ಪ್ರಭುತ್ವದ ಧೋರಣೆಯ ಕುರಿತ ನಿರ್ದೇಶಕ ಸೂತ್ರಗಳಲ್ಲಿ ಅಡಕವಾಗಿರುವ ಕರ್ತವ್ಯಗಳನ್ನು ಈಡೇರಿಸಬೇಕು ಎಂದು ಆದೇಶ ನೀಡಿದೆ. ಹೀಗಿರುವಾಗ, ಪ್ರಭುತ್ವದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಅದರ ನೇತಾರ ಸಂಘ ಪರಿವಾರ ಜನತೆಯ ಹಿತಗಳನ್ನು ಮರೆತು, ಈಗ ದೇಶದಾದ್ಯಂತ ಎಬ್ಬಿಸಿರುವ ‘ರಾಷ್ಟ್ರ-ವಿರೋಧ’ದ ಪ್ರಶ್ನೆ ಸಂವಿಧಾನದ ಪೀಠಿಕೆ ಮತ್ತು ಪ್ರಭುತ್ವದ ಧೋರಣೆಯ ನಿರ್ದೇಶಕ ಸೂತ್ರಗಳಿಗೆ ವಿರುದ್ಧವಾದದ್ದು ಎಂದು ಸಭೆ ಅಭಿಪ್ರಾಯ ಪಟ್ಟಿತು.
ಹೈದರಾಬಾದ್ ಹಾಗೂ ದೆಹಲಿ ಜವಾಹರ್‍ಲಾಲ್‍ನೆಹರು ವಿಶ್ವವಿದ್ಯಾನಿಲಯಗಳ ವಿದ್ಯಾಮಾನಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಬಿಜೆಪಿ ಹಾಗೂ ಸಂಘ ಪರಿವಾರದ ಅಹಿತಕರ ನಡೆಗಳು ಖಂಡನೀಯವಾಗಿವೆ. ಕೋಮುವಾದಿ ಶಕ್ತಿUಳು ಬಲಪಂಥೀಯ ಆಡಳಿತದ ಮೇಲೆ ನಿರ್ಣಾಯಕ ಪ್ರಭಾವ ಹೊಂದಿರುವುದನ್ನು ಇವು ಮರಳಿ ಸಾಬೀತುಪಡಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಇಲ್ಲಿನ ಸನ್ನಿವೇಶ ಬಹಳವಾಗಿಯೇನೂ ಭಿನ್ನವಾಗಿಲ್ಲ ಎಂದು ಎಡಪಕ್ಷಗಳು ಪರಿಗಣಿಸಿವೆ. ರಾಜ್ಯ ಸರಕಾರಕ್ಕೆ ಕೂಡಾ ರಾಜ್ಯದಲ್ಲಿನ ಕೋಮುವಾದಿ ತಿಕ್ಕಾಟಗಳನ್ನು ಮತ್ತು ಚಟುವಟಿಕೆಗಳನ್ನು ರಾಜ್ಯದ ಅಭಿವೃದ್ದಿ ಹಾಗೂ ಜನತೆಯ ಹಿತಾಸಕ್ತಿಯಿಂದ ತಡೆಯುವ ಗಂಭೀರ ಉದ್ದೇಶ ಕಾಣುತ್ತಿಲ್ಲ ಅಥವಾ ಅದಕ್ಕೆ ಕಾರಣರಾದವರನ್ನು ಶಿಕ್ಷಿಸುವ ಸಾಮಥ್ರ್ಯ ಇದ್ದಂತಿಲ್ಲ. ಈ ಕುರಿತ ಸರಕಾರದ ಮೆದು ಧೋರಣೆ ಖಂಡನೀಯವಾಗಿದೆ.
ಮೈಸೂರು ಜಿಲ್ಲೆಯ ಸ್ವತಃ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಸಂಘÀ ಪರಿವಾರಕ್ಕೆ ಸಂಬಂಧಪಟ್ಟ ಶ್ರೀಯುತ ರಾಜು ಎಂಬವರ ಖಂಡನಾರ್ಹ ಕೊಲೆಯ ನಂತರ ಉಂಟಾದ ಗಲಭೆಯ ಸ್ಥಿತಿ ಇದಕ್ಕೊಂದು ತಾಜಾ ಉದಾಹರಣೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ದೇವಸ್ಥಾನದ ಉತ್ಸವದ ಪ್ರಶ್ನೆಯಲ್ಲಿ ಅಲ್ಲಿಯ ಜಿಲ್ಲಾ ಕಮಿಶನರ್‍ರವರ ಬೆಂಬಲಕ್ಕೆ ನಿಲ್ಲದಿರುವುದರಿಂದ ರಾಜ್ಯದ ಆಡಳಿತದ ಜಾತ್ಯಾತೀತ ಸ್ವರೂಪಕ್ಕೆ ಧಕ್ಕೆ ಬಂದಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜಿಲ್ಲಾ ಕಮಿಶನರ್ ಅವರ ಹೆಸರನ್ನು ಮುದ್ರಿಸಿದ್ದು ಒಂದು ತಪ್ಪು ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಹೈಕೋರ್ಟಿನ ಮುಂದೆ ಹೇಳಿರುವುದು ರಾಜ್ಯ ಆಡಳಿತದ ವಿಫಲತೆಯನ್ನು ಬಯಲಿಗೆಳೆದಿದೆ.
ದೇಶದಾದ್ಯಂತ ದಲಿತರ ಮೇಲಿನ ದೌರ್ಜನ್ಯಗಳು ಮುಂದುವರೆದಿರುವಂತೆಯೇ, ಅವುಗಳನ್ನು ರಾಜ್ಯದಲ್ಲಿಯೂ ಅವ್ಯಾಹತವಾಗಿ ಮುಂದುವರೆಯಲು ಬಿಡಲಾಗಿದೆ. ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್‍ಡಿ ದೇವೇಗೌಡರ ಸ್ವಕ್ಷೇತ್ರ ಮತ್ತು ಅವರ ಪ್ರಭಾವಿ ಪುತ್ರ ಹೆ ಡಿ ರೇವಣ್ಣನವರ ಶಾಸನಸಭಾ ಕ್ಷೇತ್ರವಾದ ಹೊಳೆ ನರಸೀಪುರದ, ಸಿಗರೇನಹಳ್ಳಿಯ ದಲಿತರಿಗೆ ಈಗಲೂ ಸಾಮೂಹಿಕ ಬಹಿಷ್ಕಾರ ಮುಂದುವರೆದಿದೆ. ದಲಿತರು ಮತ್ತು ಎಡಚಳುವಳಿಗಾರರ ಒತ್ತಾಯದ ಮೇರಗೆ ದಲಿತರ ಹಕ್ಕುಗಳ ಸಂರಕ್ಷಣೆಗೆ ಮುಂದಾದ ಜಿಲ್ಲಾ ಆಡಳಿತದ ಕ್ರಮದ ಮೇಲೆ ಹೆಚ್‍ಡಿ ರೇವಣ್ಣ ಮತ್ತು ಆತನ ಬೆಂಬಲಿಗರು ಸದರಿ ಗ್ರಾಮದಲ್ಲಿ ದಲಿತರಿಗೆ ಪ್ರವೇಶದ ಹಕ್ಕನ್ನು ನಿರಾಕರಿಸಿ ಧಾಳಿನಡೆಸಿರುವುದು ಖಂಡನೀಯವಾಗಿದೆ. ತಕ್ಷಣವೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದೆ.
ರಾಜ್ಯ ಸರಕಾರ ತನ್ನ ಸ್ವಂತ ಕಾರ್ಮಿಕ ಇಲÁಖೆಯು, ಕಾರ್ಮಿಕರಿಗೆ ಕನಿಷ್ಠ ವೇತನವನ್ನು 10,000ರೂಪಾಯಿಗಳ ಸುತ್ತಲೂ ನಿಗದಿಸಲು ಉದ್ದೇಶಿಸಿದ್ದ ಕ್ರಮವನ್ನು ರಕ್ಷಿಸಿಕೊಳ್ಳುವಲ್ಲಿಯೂ ಘೋರವಾಗಿ ವಿಫಲವಾಗಿದೆ. ಈ ಮೂಲಕ ಮುಖ್ಯಮಂತ್ರಿಗಳು ಈ ಕುರಿತು ಕಾರ್ಮಿಕ ಸಂಘಗಳ ಜೊತೆಗಿನ ಏಪ್ರಿಲ್ 12, 2016ರಂದು ಜರುಗಿದ ಮಾತುಕತೆಯಲ್ಲಿ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿದಂತಾಗಿದೆ. ಕೆಲ ಶಕ್ತಿಶಾಲಿ ಮಂತ್ರಿಗಳು ರೂಪಿಸಿಕೊಂಡ ಶಕ್ತಿ ಕೂಟವು ಕಾರ್ಮಿಕ ಇಲಾಖೆಯು ನಿಗದಿಸುವ ಕನಿಷ್ಠ ವೇತನದ ಹೆಚ್ಚಳದ ವಿರುದ್ಧ, ಕಾರ್ಯನಿರ್ವಹಿಸುವಂತಾಗಿರುವುದು ತೀವ್ರ ಖಂಡನೀಯ ಬೆಳವಣಿಗೆಯಾಗಿದೆ ಮತ್ತು ತೀವ್ರ ಬೆಲೆ ಏರಿಕೆಗಳ ಈ ದಿನಗಳಲ್ಲಿ ರಾಜ್ಯದ ಕಾರ್ಮಿಕರ ಈ ಕುರಿತ ಹಕ್ಕೊತ್ತಾಯವು ಕಡೆಗಣಿಸಲ್ಪಡುವಂತಾಗಿದೆ.
ರಾಜ್ಯದ ರೈತರು ಮತ್ತು ಕೃಷಿ ಕೂಲಿಕಾರರು ಅತ್ಯಂತ ಯಾತನೆಯ ಮತ್ತು ಸಂಕಷ್ಠಮಯ ವಾತಾವರಣದ ಒತ್ತಡದಲ್ಲಿ ಬದುಕುತ್ತಿದ್ದಾರೆ. ಅವರ ಸಂಕಷ್ಠಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಡೆಗಣಿಸಿವೆ. ಬರಗಾಲ, ಅತೀವೃಷ್ಟಿ, ಬೆಳೆವೈಪಲ್ಯ, ಸಾಲನೀಡಿದ ಬಡ್ಡಿಸಾಹುಕಾರರ ತೀವ್ರ ಶೋಷಣೆ, ಗ್ರಾಮಗಳಲ್ಲಿ ಉದ್ಯೋಗ ಲಭ್ಯವಿರದಂತಾಗಿರುವುದು, ಉದ್ಯೋಗ ಖಾತ್ರಿ ಯೋಜನೆಯು ಭ್ರಷ್ಠರ ಪಾಲಾಗಿರುವುದು ಎಲ್ಲವೂ ಒಂದೆಡೆ ರೈತರನ್ನು ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದೆ. ಕೃಷಿಕೂಲಿಕಾರರನ್ನು ಹಸಿವಿನ ಸಾವುಗಳಿಗೆ ಮತ್ತು ನಗರಗಳ ಕಡೆ ವಲಸೆಯ ಯಾತನಾಮಯ ಜೀವನದೆಡೆ ದೂಡಿದೆ.
ರಾಜ್ಯದಾದ್ಯಂತ ಸರಕಾರಿ ಜಮೀನುಗಳಲ್ಲಿ ಸಾಗುವಳಿಯಲ್ಲಿ ತೊಡಗಿರುವ ಬಡ ರೈತರ ಹಿತಗಳನ್ನು ಕಡೆಗಣಿಸಿ ಅವರನ್ನು ಒಕ್ಕಲೆಬ್ಬಿಸಲು ಕ್ರಮವಹಿಸುವ ಮತ್ತು ವಸತಿಹೀನರಿಗೆ ಉಚಿತ ನಿವೇಶನ ಒದಗಿಸಲು ಕ್ರಮವಹಿಸದ ರಾಜ್ಯ ಸರಕಾರ ಕಾರ್ಪೋರೇಟ್ ಕಂಪೆನಿಗಳಿಗೆ ಉಚಿತವಾಗಿ ಲಕ್ಷಾಂತರ ಜಮೀನು ಒದಗಿಸಲು ಮತ್ತು ದೊಡ್ಡ ದೊಡ್ಡ ಭೂಕಬಳಿಕೆದಾರರನ್ನು ರಕ್ಷಿಸಲು ಮುಂದಾಗುವ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ.
ಅದೇ ರೀತಿ, ಲೋಕಾಯುಕ್ತವನ್ನು ದುರ್ಬಲಗೊಳಿಸುವ ಮತ್ತು ಅದಕ್ಕಾಗಿ ಏಸಿಬಿ ರಚಿಸುವ ಕ್ರಮಗಳನ್ನು ಎಡ ಪಕ್ಷಗಳ ಸಭೆ ಖಂಡಿಸಿ ವಿರೋಧಿಸಿದೆ.
ಇಂತಹ ಎಲ್ಲಾ ವಿಚಾರಗಳನ್ನು ಜನತೆಯ ನಡುವೆ ಕೊಂಡೂಯ್ಯಲು ಮತ್ತು ಮುಂಬರುವ ದಿನಗಳಲ್ಲಿ ಭಾರೀ ಪ್ರತಿರೋಧವನ್ನು ರೂಪಿಸಲು ಎಡ ಪಕ್ಷಗಳು ನಿರ್ಧರಿಸಿವೆ. ಇದರ ಭಾಗವಾಗಿಯೇ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಜಿ.ವಿ. ಶ್ರೀರಾಮರೆಡ್ಡಿ, ಕಾರ್ಯದರ್ಶಿಗಳು, ಸಿಪಿಐ(ಎಂ)
ಪಿ.ವಿ. ಲೋಕೇಶ್, ಕಾರ್ಯದರ್ಶಿಗಳು, ಸಿಪಿಐ
ಜಿ. ಆರ್.ಶಿವಶಂಕರ್, ರಾಜ್ಯಾಧ್ಯಕ್ಷರು, ಎಐಎಫ್‍ಬಿ
ರಾಧಾಕೃಷ್ಣ, ಕಾರ್ಯದರ್ಶಿಗಳು, ಎಸ್‍ಯುಸಿಐ(ಸಿ)
ಮಾರುತಿ, ರಾಜ್ಯ ಮುಖಂಡರು, ಸಿಪಿಐ(ಎಂಎಲ್)