ಜುಲೈ 8 1914
ದಂತ ಕತೆಯಾದ ಕ್ರಾಂತಿಕಾರಿ ಕಮ್ಯುನಿಸ್ಟ್ ನಾಯಕ, ಜನತೆಯ ಜನಪ್ರಿಯ ನಾಯಕ, ಕಾರ್ಮಿಕ ವರ್ಗದ ನಾಯಕ, ಭಾರತದ ಯಾವುದೇ ರಾಜ್ಯದಲ್ಲಿ ಅತ್ಯಂತ ದೀರ್ಘ ಕಾಲ ಆಳಿದ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆ, ಸಿಪಿಐ(ಎಂ) ಸ್ಥಾಪಕ ಸದಸ್ಯ ಮತ್ತು ಮೊದಲ ಪೊಲಿಟ್ ಬ್ಯುರೊ ಸದಸ್ಯ, ದೇಶದ ಎಡ ನಾಯಕರಲ್ಲೇ ಮಹತ್ವದ ಸ್ಥಾನ ಹೊಂದಿದ್ದವರು. ಅವರ ನಾಯಕತ್ವದಲ್ಲಿ ಭೂಸುಧಾರಣೆಗಳ ಮತ್ತು ತಳಮಟ್ಟದಲ್ಲಿ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಜಾಸತ್ತಾತ್ಮಕ ವಿಕೇಂದ್ರೀಕೃತ ಆಡಳಿತದ ಜಾರಿ ಆಯಿತು.