ನರಗುಂದ-ನವಲಗುಂದ ರೈತರ ಮೇಲೆ ಗೋಳೀಬಾರ್

ಜುಲೈ 21, 1980

ಕರ್ನಾಟಕದ ರೈತ ಚಳುವಳಿಯಲ್ಲಿ ಸ್ಮರಣೀಯ ಅಧ್ಯಾಯ, ಪ್ರಮುಖ ತಿರುವು ಎನಿಸಿಕೊಂಡ ಮಲಪ್ರಭಾ ರೈತ ಬಂಡಾಯಕ್ಕೆ ಕಿಡಿಯಾದ ಪ್ರಮುಖ ಘಟನೆ. ತಮ್ಮ ಸಮಸ್ಯೆಗಳನ್ನು ಮನವಿಗಳ ಮೂಲಕ ಈಗಾಗಲೇ ಹಲವು ತಿಂಗಳುಗಳ ಕಾಲ ಕೊಟ್ಟ ಮನವಿಗಳಿಂದ ಪ್ರಯೋಜನವಿಲ್ಲ ಎಂದು ಅರಿತ ರೈತರು ನರಗುಂದ-ನವಲಗುಂದ ಬಂದ್ ಗೆ ಕರೆ ನೀಡಿದ್ದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ರೈತರ ಜತೆ ತಹಶೀಲ್ದಾರ್‍ನ ದರ್ಪದ ವರ್ತನೆಯಿಂದ ರೊಚ್ಚಿಗೆದ್ದು ಹಿಂಸಾಚಾರ ಆರಂಭವಾಯಿತು. ಇದನ್ನು ಹತ್ತಿಕ್ಕಲು ಮಾಡಿದ ಗೋಲಿಬಾರಿನಲ್ಲಿ ಬಸಪ್ಪ ಶಿವಪ್ಪ ಲಕ್ಕುಂಡಿ ಮತ್ತು ಈರಪ್ಪ ಕಡ್ಲಕೊಪ್ಪ ಹುತಾತ್ಮರಾದರು.

Leave a Reply

Your email address will not be published. Required fields are marked *