- 25 ಜುಲೈ 2005
ಒಬ್ಬ ಕಾರ್ಮಿಕನನ್ನು ಅಧಿಕಾರಿಯೊಬ್ಬ ಥಳಿಸಿದ್ದನ್ನು ಪ್ರತಿಭಟಿಸಿದ್ದ 50ಕ್ಕೂ ಹೆಚ್ಚು ಕಾರ್ಮಿಕರ ವಜಾ ವಿರುದ್ದ ಮಿಂಚಿನ ಮುಷ್ಕರವನ್ನು ದಮನ ಮಾಡಲು ಪೋಲಿಸರು ನಡೆಸಿದಕ್ರೂರ ದಾಳಿಯಲ್ಲಿ 700 ಕಾರ್ಮಿಕರು ಗಾಯಗೊಂಡರು. ಗುಡಗಾಂವ್ ಅಂದು ರಣರಂಗವಾಗಿತ್ತು. ಇದು ಹೊಂಡಾ ಮ್ಯಾನೇಜ್ ಮೆಂಟ್, ಕಾಂಗ್ರೆಸಿನ ಹೂಡಾ ಸರಕಾರಯೋಜಿಸಿದ ಕ್ರೂರ ದಾಳಿಯಾಗಿತ್ತು. ಹಲವು ತಿಂಗಳುಗಳ ಕಾಲ ನಡೆದ ಮ್ಯಾನೇಜ್ ಮೆಂಟ್/ಸರಕಾರದ ದುಷ್ಟಕೂಟ ಮತ್ತು ಕಾರ್ಮಿಕರ ನಡುವೆ ತೀವ್ರ ಸಂಘರ್ಷ, ನವ–ಉದಾರವಾದಿ ದಾಳಿಯ ವಿರುದ್ಧ ಕೈಗಾರಿಕಾ ಕಾರ್ಮಿಕರ ಹೋರಾಟದ ಹೊಸ ಸಮರಶೀಲ ಅಧ್ಯಾಯದ ಆರಂಭವಾಗಿತ್ತು.