ಜುಲೈ 29, 1946
ಆ ದಿನದಂದು ಪೋಸ್ಟ್ ಮತ್ತು ಟೆಲಿಗ್ರಾಫ್ ಕಾರ್ಮಿಕರ 18 ದಿನಗಳ ಮುಷ್ಕರಕ್ಕೆ ಸೌಹಾರ್ದ ಬೆಂಬಲ ಸೂಚಿಸಿ ಕಲ್ಕಕತ್ತಾದ ಬೀದಿಗಳಲ್ಲಿ ಹತ್ತಾರು ಸಾವಿರ ಕಾರ್ಮಿಕರು ಪ್ರದರ್ಶನ ನಡೆಸಿದರು. ಇದು ಅದುವರೆಗೆ ನಡೆದ ಕಾರ್ಮಿಕರ ಸೌಹಾರ್ದ ಬೆಂಬಲ ಮೆರವಣಿಗೆಗಳಲ್ಲಿ ಅತಿ ದೊಡ್ಡದಾಗಿತ್ತು. ಇಂತಹುದೇ ಮೆರವಣಿಗೆಗಳು ಮುಂಬಯಿ ಮತ್ತು ಮದ್ರಾಸುಗಳಲ್ಲೂ ನಡೆದವು. ಕಾ. ಕೃಷ್ಣ ಗೋಪಾಲ ಬಸು (1921-74) ಇವರ ನಾಯಕತ್ವದಲ್ಲಿ ನಡೆದ ಈ ದೀರ್ಘ ಮುಷ್ಕರ ಅಗಸ್ಟ್ 6ರಂದು ಕೊನೆಗೊಂಡಿತು. ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಈ ಮುಷ್ಕರಕ್ಕೆ ಬೆಂಬಲ ನೀಡಿದ್ದು ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡದ್ದು ವಿಶೇಷವಾಗಿತ್ತು.