ಅಗಸ್ಟ್ 11, 1908
ಬಂಗಾಳದ ಪ್ರಖರ ಯುವ ಕ್ರಾಂತಿಕಾರಿಯಾಗಿದ್ದ ಖುದಿರಾಮ ಬೋಸ್ ರನ್ನು ಗಲ್ಲಿಗೇರಿಸಿದ ದಿನ. ಅವರು 19 ವರ್ಷ ತುಂಬಿರದ ಅತ್ಯಂತ ಕಿರಿಯ ವಯಸ್ಸಿನ ಹುತಾತ್ಮ. ಮಿಡ್ನಾಪುರ ಜಿಲ್ಲೆಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಖುದಿರಾಮ ಅರೊಬಿಂದೊ ಘೋಷ್ ಅವರ ಸ್ಫೂರ್ತಿಯಿಂದ ಬ್ರಿಟಿಶರ ವಿರುದ್ಧ ಸಶಸ್ತ್ರ ಹೋರಾಟವನ್ನು ಸೇರಿದರು. ಅವರಿಗೆ ನೀಡಿದ ಗಲ್ಲು ಶಿಕ್ಷೆಯ ತೀರ್ಪು ಬಂದ ದಿನವೂ, ಮತ್ತು ಗಲ್ಲಿಗೇರಿಸಿದ ದಿನವೂ ಅದರ ವಿರುದ್ಧವೂ, ಕೊಲ್ಕತ್ತದಲ್ಲಿ ಭಾರೀ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು.