- 19 ಅಗಸ್ಟ್ 1948
ಈ ದಿನದಂದು ಕೇರಳದ ‘ಮೊದಲ ಕಮ್ಯುನಿಸ್’್ಟ ಮತ್ತು ‘ಕಮ್ಯುನಿಸ್ಟ್ ಚಳುವಳಿಯ ಸ್ಥಾಪಕರೆಂದೇ’ ಪ್ರಖ್ಯಾತರಾದ ಕೃಷ್ಣ ಪಿಳ್ಳೆ ಅವರು ಭೂಗತರಾಗಿದ್ದಾಗ ಹಾವು ಕಡಿದು ತಮ್ಮ 42 ವರ್ಷದ ಇಳಿವಯಸ್ಸಿನಲ್ಲೇ ನಿಧನ ಹೊಂದಿದರು. ಅವರನ್ನು ಜನ ‘ಸಖಾವು’(ಸಂಗಾತಿ) ಎಂದೇ ಕರೆಯುತ್ತಿದ್ದರು. ಕೇರಳದ ಇತರ ಇಬ್ಬರು ಸ್ಥಾಪಕ ನಾಯಕರಂತೆ (ಇ.ಎಂ.ಎಸ್. ಮತ್ತು ಎ.ಕೆ.ಜಿ.) ಅವರು ಸಹ ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ನಲ್ಲ ಆರಂಭಿಸಿ, ಕಾಂಗ್ರೆಸ್ ಸೋಶಲಿಸ್ಟ್ ಪಾರ್ಟಿಯ ಮೂಲಕ ಕಮ್ಯುನಿಸ್ಟ್ ಪಕ್ಷಕ್ಕೆ ಬಂದವರು.
ಅವರು 1920ರ ದಶಕದಲ್ಲಿ ಉತ್ತರ ಭಾರತದಲ್ಲಿ ಸಾಕಷ್ಟು ಅಲೆದವರು. ನಂತರ ಕೇರಳಕ್ಕೆ ಮರಳಿ ಎಲ್ಲಾ ಪ್ರಮುಖ ಸಾಮೂಹಿಕ ಚಳುವಳಿಗಳಲ್ಲಿ – ವೈಕಂ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಗುರುವಾಯೂರು ದೇವಸ್ಥಾನ ಪ್ರವೇಶ ಚಳುವಳಿ, ರೈತ ಕಾರ್ಮಿಕರ ಸಂಘಟನೆ ಮತ್ತು ಸಮರಶೀಲ ಹೋರಾಟಗಳು, ಪುನ್ನಪ್ರ ವಯಲಾರ್ ಹೋರಾಟ, ತಿರುವಾಂಕೂರು ವಿಮೊಚನಾ ಹೋರಾಟ – ಪ್ರಧಾನ ಪಾತ್ರ ವಹಿಸಿದರು. ಇ.ಎಂ.ಎಸ್. ಅವರನ್ನು ‘ಕೇರಳ ಕಮ್ಯುನಿಸ್ಟ್ ಚಳುವಳಿಯ ಬೌದ್ಧಿಕ ಕೇಂದ್ರ’ ಮತ್ತು ‘ಅವರು ದುಡಿಯುವ ಜನರಿಂದ ಬಂದು ಅವರ ಆಕಾಂಕ್ಷೆಗಳನ್ನು ಸ್ವತಃ ಬಲ್ಲವರಾಗಿದ್ದರಿಂದ’ ತನಗಿಂತಲೂ ‘ಹೆಚ್ಚು ನಿಜವಾದ ಕಮ್ಯುನಿಸ್ಟ್ ಸ್ಪಿರಿಟ್’ಗೆ ಹತ್ತಿರವಿದ್ದವರು’ ಎಂದಿದ್ದಾರೆ.