ಅಗಸ್ಟ್ 20, 1921
ಈ ದಿನದಂದು ಕೇರಳದ ಮಲಪ್ಪುರಂನ ಒಂದು ಹಳ್ಳಿಯಲ್ಲಿ ಖಿಲಾಫತ್ ಚಳುವಳಿಯ ಒಬ್ಬ ನಾಯಕನನ್ನು ಪೋಲೀಸರು ಬಂಧಿಸಲು ಬಂದಾಗ ಮಾಪಿಳ್ಳೆಗಳು (ಮುಸ್ಲಿಂ ರೈತ ಸಮುದಾಯಕ್ಕೆ ಸೇರಿದ ಜನ) ಅವರನ್ನು ತಡೆದರು. ಅದರಿಂದ ಆರಂಭವಾದ ಘರ್ಷಣೆ ಹಲವು ದಿನಗಳ ಕಾಲ ನಡೆಯಿತು.
ಹೆಚ್ಚೆಚ್ಚು ರೈತರು ಸೇರಿದಂತೆ ಸರಕಾರ ಮತ್ತು ಹಿಂದೂ ಜಮೀನುದಾರರ ವಿರುದ್ಧ ಪೂರ್ಣ ಪ್ರಮಾಣದ ದಂಗೆಗೆ ಎಡೆ ಮಾಡಿತು. ದಂಗೆ ತಾರಕಕ್ಕೇರಿದಾಗ 30 ಸಾವಿರ ಸಶಸ್ತ್ರ ರೈತರು (ಹಿಂದೂ ಮುಸ್ಲಿಮರು ಸೇರಿದಂತೆ) ಭಾಗವಹಿಸಿದ್ದರು.
ಬ್ರಿಟಿಶರು ಬರೆದ ಇತಿಹಾಸದಲ್ಲಿ ಹೇಳುವಂತೆ ಇದು ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಕೋಮು ಸಂಘರ್ಷ ಆಗಿರಲಿಲ್ಲ. ಜಮೀನುದಾರರ ದಮನದ ವಿರುದ್ಧ ರೈತರ ಹೋರಾಟವಾಗಿತ್ತು. ಬ್ರಿಟಿಶರು ಈ ದಂಗೆಯನ್ನು ಅತ್ಯಂತ ಬರ್ಬರ ರೀತಿಯಲ್ಲಿ ದಮನ ಮಾಡಿದರು.