‘ಹಸಿವು ಜಾಥಾ’ ಹುತಾತ್ಮರ ದಿನ

ಅಗಸ್ಟ್ 31, 1959  

ಪಶ್ಚಿಮ ಬಂಗಾಳದಲ್ಲಿ 1959ರಲ್ಲಿ ವಿಪರೀತ ಆಹಾರ ಬೆಲೆ ಏರಿಕೆ ವಿರುದ್ಧ ಹಲವು ತಿಂಗಳುಗಳ ಕಾಲ ತೀವ್ರ ಚಳುವಳಿ ನಡೆಯಿತು. ಅದರ ಅಂತಿಮ ಘಟ್ಟವಾಗಿ ಈ ದಿನ ನಡೆದ ದೊಡ್ಡ ಜಾಥಾ ಸಂಘಟಿಸಲಾಯಿತು.

“ಭೂಖ್ ಮಿಶಿಲ್’ ಎಂದು ಪ್ರಸಿದ್ಧವಾದ ಈ ಜಾಥಾ ಕಾ.ಜ್ಯೋತಿಬಸು ನಾಯಕತ್ವದಲ್ಲಿ ಶಹೀದ್‍ಮೀನಾರ್ ಮೈದಾನದಿಂದ ಹೊರಟು ರೈಟರ್ಸ್ ಬಿಲ್ಡಿಂಗ್‍ನತ್ತ ಹೊರಟಿತ್ತು.

ರೈಟರ್ಸ್ ಬಿಲ್ಡಿಂಗ್‍ನಲ್ಲಿ ಜಾಥಾವನ್ನು ತಡೆದು ಪೋಲಿಸ್ ಮಾಡಿದ ಬರ್ಬರ ಲಾಠಿ ಚಾರ್ಜ್‍ನಲ್ಲಿ 80 ಚಳುವಳಿಗಾರರು ಸತ್ತರು. ಪೋಲಿಸರು ಲಾಠಿ ಹೊಡೆತಕ್ಕೆ ಬಿದ್ದವರ ತಲೆಗೆ ಒದ್ದು, ಕಾಂಗ್ರೆಸ್ ಸರಕಾರ ಪ್ರಭುತ್ವದ ದಮನದ ಅತ್ಯಂತ ಕ್ರೂರ ಪ್ರದರ್ಶನ ನಡೆಸಿತ್ತು.

ಆ ದಿನವನ್ನು ಇಂದಿಗೂ ‘ಹುತಾತ್ಮರ ದಿನ’ವಾಗಿ ಆಚರಿಸಲಾಗುತ್ತದೆ.

Leave a Reply

Your email address will not be published. Required fields are marked *