ಸೆಪ್ಟೆಂಬರ್ 3, 1947
ಅಗಸ್ಟ್ 15 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಮಹಾರಾಜರು ರಾಜ್ಯದ ಜನತೆಗೆ ಸ್ವಾತಂತ್ರ್ಯ ನೀಡಲಿಲ್ಲ. ರಾಜ್ಯವನ್ನು ಸ್ವತಂತ್ರ ರಾಷ್ಟ್ರವಾಗಿ ತಾವೇ ಆಳುವುದಾಗಿ ಘೋಷಿಸಿದರು. ಹೀಗಾಗಿ ಪ್ರಜಾತಂತ್ರ ಸ್ಥಾಪನೆಗಾಗಿ ಮಹಾರಾಜರ ವಿರುದ್ಧ `ಮೈಸೂರು ಚಲೋ’ ಚಳವಳಿ ಆರಂಭಿಸಬೇಕಾಯಿತು.
ಈ ಚಳವಳಿ 1947 ಸೆಪ್ಟೆಂಬರ್ 3 ರಿಂದ 24 ರವರೆಗೂ ನಡೆಯಿತು. ಈ ಚಳವಳಿಯಲ್ಲಿ ರಾಜ್ಯಾದ್ಯಂತ 37 ಜನರು ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಮೈಸೂರು ನಗರದಲ್ಲೇ ಮೂರು ಜನ ಗುಂಡಿಗೆ ಎದೆ ಒಡ್ಡಿದರು…
`ಮೈಸೂರು ಚಲೋ’ ಚಳುವಳಿಯಲ್ಲಿ ಕಾರ್ಮಿಕರು ದೊಡ್ಡ ರೀತಿಯಲ್ಲಿ ಭಾಗವಹಿಸಿದರು. ಇದರ ಭಾಗವಾಗಿ ಹಮ್ಮಿಕೊಂಡಿದ್ದ `ಮೈಸೂರು ಚಲೋ’ ಚಳುವಳಿಯಲ್ಲಿ ಬಿನ್ನಿ ಮಿಲ್ ಮತ್ತು ಇತರ ಕಾರ್ಮಿಕರು ಭಾಗವಹಿಸದಂತೆ ಮ್ಯಾನೇಜ್ ಮೆಂಟು ಮತ್ತು ಸರಕಾರದ ಪ್ರತಿನಿಧಿಗಳು ಶತಪ್ರಯತ್ನ ಮಾಡಿದರು.
ಅದನ್ನು ಧಿಕ್ಕರಿಸಿ ಸೆಪ್ಟೆಂಬರ್ 1 ರಂದು 1947ರಂದು `ಮೈಸೂರು ಚಲೋ’ ಚಳುವಳಿಯ ಜಾಥಾವನ್ನು ಚಿಕ್ಕಲಾಲ್ ಬಾಗಿನಲ್ಲಿ ಬೀಳ್ಕೊಡಲು ಸಂಘಟಿಸಿದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಬೀದಿಗಳನ್ನು ತುಂಬಿ ಬಂದು ಭಾಗವಹಿಸಿದ್ದರು. ಕೆಜಿಎಫ್ ಗಣಿ ಕಾರ್ಮಿಕರು ಈ ರಾಜಕೀಯ ಬೇಡಿಕೆಗಾಗಿ 18 ದಿನಗಳ ಮುಷ್ಕರ ನಡೆಸಿದ್ದು ಚಾರಿತ್ರಿಕ ಘಟನೆ.