ಸೆಪ್ಟೆಂಬರ್ 12-13, 1948
ಭಾರತ ಸೇರಲು ನಿರಾಕರಿಸಿದ್ದ ನಿಜಾಮನಿಂದ ಹೈದರಾಬಾದ್ ವಶಪಡಿಸಿಕೊಳ್ಳಲು ಸರಕಾರ ಮಿಲಿಟರಿ ಕಳಿಸಿದ ದಿನ. ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ 3 ಸಾವಿರ ಹಳ್ಳಿಗಳನ್ನು ವಶಪಡಿಸಿಕೊಂಡಿದ್ದ ವೀರ ತೆಲಂಗಣ ರೈತರ ಹೋರಾಟವನ್ನು ದಮನ ಮಾಡಿ ಜಮೀನುದಾರರಿಗೆ ವಾಪಸು ಕೊಡಿಸುವುದು ಅವರ ನಿಜವಾದ ಉದ್ದೇಶವಾಗಿತ್ತು.
ತೆಲಂಗಾಣ ರೈತರು ಭಾರೀ ಜಮೀನುದಾರರ ಭೂಮಿ ವಶಪಡಿಸಿಕೊಂಡು ಅವರ ರಕ್ಷಣೆಗೆ ಬಂದ ನಿಜಾಮನ ರಜಾಕಾರರನ್ನು ಸೋಲಿಸಿದ್ದರು. ಮುಂದಿನ 3 ವರ್ಷಗಳ ಕಾಲ ರೈತರ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಮೇಲೆ ಮಿಲಿಟರಿ ದಮನಚಕ್ರ ನಡೆಸಿತು.