ಇಂಡೋನೇಶ್ಯಾ ಕಮ್ಯುನಿಸ್ಟರ ನರಮೇಧ

ಸೆಪ್ಟೆಂಬರ್ 30 1965

ಈ ದಿನ ಇಂಡೋನೇಶ್ಯಾದ ಮಿಲಿಟರಿ 10 ಲಕ್ಷ ಕಮ್ಯನಿಸ್ಟ್ ಸದಸ್ಯರು ಬೆಂಬಲಿಗರ ನರಮೇಧ ಆರಂಭವಾಗಿತ್ತು. ಆಗಿನ ಸುಕರ್ಣೊ ಸರಕಾರದ ವಿರುದ್ಧ ಕ್ಷಿಪ್ರಕ್ರಾಂತಿಗೆ ಕೆಲವು ಬಲಪಂಥಿಯ ಹಿರಿಯ ಮಿಲಿಟರಿ ಅಧಿಕಾರಿಗಳು ವಿಫಲ ಪ್ರಯತ್ನ ನಡೆಸಿದರು. ಆ ಆರು ಮಿಲಿಟರಿ ಅಧಿಕಾರಿಗಳ ಕೊಲೆಯಾಯಿತು.

ಈ ಘಟನೆಗೆ ಕಮ್ಯನಿಸ್ಟ್ ಪಕ್ಷದ ಪಿತೂರಿ ಕಾರಣ ಎಂಬ ಗೊಬೆಲ್ಸ್ ನಾಚುವಂತಹ ಅಪಪ್ರಚಾರ ನಡೆಸಿ ಮುಂದಿನ 6 ತಿಂಗಳುಗಳಲ್ಲಿ 10 ಲಕ್ಷ ಕಮ್ಯುನಿಸ್ಟ್ ಸದಸ್ಯರು ಬೆಂಬಲಿಗರನ್ನು ಬೇಟೆಯಾಡಿ ಚಿತ್ರಹಿಂಸೆ ಕೊಡಲಾಯಿತು, ಅತ್ಯಾಚಾರಕ್ಕೆ ಒಳಪಡಿಸಲಾಯಿತು, ಕೊಲ್ಲಲಾಯಿತು. ಇದನ್ನು ಸಿಐಎ ತನ್ನ ಮಿಲಿಟರಿ ಬೆಂಬಲಿಗರನ್ನು ಬಳಸಿ ಸಂಘಟಿಸಿತ್ತು.

ಈ ಬಗ್ಗೆ ಆಗಲೂ ಆ ಮೇಲೂ ಮಾನವ ಹಕ್ಕುಗಳ ದಮನದ ಬಗ್ಗೆ  ಬೊಬ್ಬೆ ಹೊಡೆಯುವ ಯಾವ ಪಾಶ್ಚಿಮಾತ್ಯ ದೇಶಗಳೂ ಸಂಘಟನೆಗಳೂ ದಿವ್ಯಮೌನ ವಹಿಸಿವೆ.

Leave a Reply

Your email address will not be published. Required fields are marked *