ಅಕ್ಟೋಬರ್ 23-27, 1946
ಅಂಬಲಪುಳ ಮತ್ತು ಚೇರ್ತಾಲದ ಕಾರ್ಮಿಕರು ಟ್ರಾವಂಕೂರು ರಾಜನ ದಿವಾನರ ದುರಾಢಳಿತ, ಅಮೆರಿಕನ್ ಮಾದರಿ ಸರಕಾರದ ವಿರುದ್ಧ ಮತ್ತು ಸಾರ್ವತ್ರಿಕ ಮತದಾನದ ಹಕ್ಕಿಗಾಗಿ ನಡೆಸಿದ ಚಾರಿತ್ರಿಕ ಹೋರಾಟಕ್ಕೆ ಇಂದು 70ನೇ ವಾರ್ಷಿಕೋತ್ಸವದ ಸಂಭ್ರಮ.
ಇದು ಭಾರತದ ದುಡಿಯುವ ಜನತೆಯ ಸ್ವಾತಂತ್ರ್ಯ ಹೋರಾಟದ ಅಮೋಘ ಅಧ್ಯಾಯಗಳಲ್ಲಿ ಒಂದು. 250 ರಷ್ಟು ಕಮ್ಯುನಿಸ್ಟ್ ಹೋರಾಟಗಾರರು ತಮ್ಮ ಬಲಿದಾನ ಕೊಟ್ಟ ಹೋರಾಟ. ಸಾವಿರದಷ್ಟು ಜನ ಈ ಹೋರಾಟದಲ್ಲಿ ಮಡಿದರು ಎನ್ನಲಾಗಿದೆ. ಈ ಅಮೋಘ ಹೊರಾಟದ ಪ್ರಭಾವದಿಂದಾಗಿಯೇ ಆ ಮೇಲೆ ಟ್ರಾವಂಕೂರು ರಾಜ ಜೂನ್ 1947ರಲ್ಲಿ ಸ್ವಾತಂತ್ರ್ಯ ಘೋಷಣೆ ಮಾಡಿದರೂ, ಕೊನೆಗೆ ಜನತೆಯ ಒತ್ತಡಕ್ಕೆ ಮಣಿದು ಭಾರತ ಒಕ್ಕೂಟಕ್ಕೆ ಸೇರಬೇಕಾಯಿತು.