ಅಕ್ಟೋಬರ್ 26, 1947
ಈ ದಿನ ಆಗಿನ ಜಮ್ಮು-ಕಾಶ್ಮೀರ ರಾಜ್ಯವನ್ನು ಅಲ್ಲಿನ ಮಹಾರಾಜ ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರಿಸಲು ಒಪ್ಪುವ ದಸ್ತಾವೇಜಿಗೆ ಸಹಿ ಹಾಕಿದರು. ಇದಕ್ಕೆ ಮೊದಲು ಆತ ಸ್ವತಂತ್ರವಾಗಿ ಇರಬಯಸಿದ್ದರು. ಆದರೆ ಅಕ್ಟೋಬರ್ 24ರಂದು ಪಾಕಿಸ್ತಾನದ ಕಡೆಯಿಂದ ಸಶಸ್ತ್ತ್ರ ಮಂದಿ ಕಾಶ್ಮೀರಕ್ಕೆ ನುಗ್ಗಿ ಬಂದಾಗ ಅವರನ್ನು ಹಿಮ್ಮೆಟ್ಟಿಸಲು ಹರಿ ಸಿಂಗ್ ನೆಹರೂ ಸರಕಾರಕ್ಕೆ ಮಿಲಿಟರಿ ಕಳಿಸಲು ಕೇಳಿದ್ದರು.
ಆದರೆ ಭಾರತದ ಒಕ್ಕೂಟಕ್ಕೆ ಸೇರದೆ ಮಿಲಿಟರಿ ಕಳಿಸಲು ಸಾಧ್ಯವಿಲ್ಲ ಎಂದಿದ್ದಕ್ಕೆ ಹರಿಸಿಂಗ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದಕ್ಕೆ ಮೊದಲು ಭಾರತವನ್ನು ಸೇರುವಂತೆ ಅಲ್ಲಿ ಶೇಖ್ ಅಬ್ದುಲ್ಲ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷವೂ ಮಹಾರಾಜನ ಮೇಲೆ ಒತ್ತಡ ಹಾಕುತ್ತಿತ್ತು.