ಕರ್ನಾಟಕ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲು ನಿರ್ಧರಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ರಾಜ್ಯ ಸಮಿತಿ ಸ್ವಾಗತಿಸುತ್ತದೆ. ನಮ್ಮ ಪಕ್ಷ ಸಹ ಸಾಧ್ಯವಿರುವ ಕಡೆಯಲೆಲ್ಲಾ ಈ ಕಾರ್ಯಕ್ರಮವನ್ನು ಸ್ವತಂತ್ರವಾಗಿ ಆಯೋಜಿಸಬೇಕೆಂದು ನಿರ್ಧರಿಸಿದೆ.
ಇದೇ ಸಮಯದಲ್ಲಿ ಸಂಘಪರಿವಾರ ಮುಂತಾದ ಕೋಮುವಾದಿ ಶಕ್ತಿಗಳು ಟಿಪ್ಪು ಸುಲ್ತಾನ್ ವಿರುದ್ಧ ಹಾಗೂ ಟಿಪ್ಪು ಜಯಂತಿ ದಿನಾಚರಣೆಯ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸುತ್ತಿದ್ದು, ಟಿಪ್ಪು ಜಯಂತಿಯ ದಿನದಂದು ಕೋಮು ಗಲಭೆಗಳನ್ನು ಸೃಷ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸುತ್ತಿರುವ ಅಂತಹ ಶಕ್ತಿಗಳ ವಿರುದ್ಧ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ)ದ ರಾಜ್ಯ ಸಮಿತಿ ಆಗ್ರಹ ಪಡಿಸುತ್ತದೆ.
ಜಿ.ವಿ.ಶ್ರೀರಾಮರೆಡ್ಡಿ,
ರಾಜ್ಯ ಕಾರ್ಯದರ್ಶಿ