ಜವಹರಲಾಲ್ ನೆಹರೂ ವಿಶ್ವದ್ಯಾಲಯದಲ್ಲಿ ಬಯೋಟೆಕ್ನಾಲಜಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ನಜೀಬ್ ಎಬಿವಿಪಿ ಉಪಟಳದ ನಂತರ ಕಾಣೆಯಾಗಿ ತಿಂಗಳಾಗುತ್ತ ಬಂದರೂ ಆತನನ್ನು ಪತ್ತೆ ಹಚ್ಚಲು ವಿಫಲರಾಗಿರುವ ದಿಲ್ಲಿ ಪೊಲೀಸರು ಅದನ್ನು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಎಳೆದಾಡಿದ್ದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.
ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರನ್ನೂ ಮತ್ತು ಮಗನ ಪತ್ತೆ ಯಾಗದ ನೋವಿನಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಜೀಬ್ ತಾಯಿಯನ್ನು ಕೂಡ ರಸೆಯ ವರೆಗೆ ಎಳೆದೊಯ್ದು ಬಂಧಿಸಿದ ಘಟನೆ ವರದಿಯಾಗಿದೆ. ಈ ಪೋಲೀಸರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ದಿಲ್ಲಿ ಪೋಲೀಸ್ ನೇರವಾಗಿ ಕೇಂದ್ರ ಸರಕಾರದ ಅಡಿಯಲ್ಲಿದ್ದಾರೆ. ಪೋಲೀಸ್ ಆಯುಕ್ತರು ಕಾಣೆ ಯಾದ ವಿದ್ಯಾರ್ಥಿಯ ಬಗ್ಗೆ ಕ್ರಿಮಿನಲ್ ನಿರ್ಲಕ್ಷ್ಯ ತೋರಿದ್ದಾರೆ. ಇಂತಹ ಘಟನೆಗಳು ನಡೆವಾಗ ಕೇಂದ್ರ ಗೃಹ ಮಂತ್ರಿಗಳು ರಾಜಧಾನಿಯಲ್ಲಿ ಮೌನವಾಗಿ ಕೂತಿದ್ದಾರೆ. ಅವರು ತಕ್ಷಣ ಮಧ್ಯಪ್ರವೇಶಿಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.