ನವೆಂಬರ್ 16, 1933
1917ರಲ್ಲಿ ರಷ್ಯನ್ ಕ್ರಾಂತಿಯಾಗಿ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ಅಮೇರಿಕಾ ರಷ್ಯಾದ ಜತೆ ರಾಜ ತಾಂತ್ರಿಕ ಸಂಬಂಧ ಕಡಿದುಕೊಂಡಿತ್ತು. ರಷ್ಯಾದ ಹೊಸ ಸರಕಾರಕ್ಕೆ ಮಾನ್ಯತೆಯನನು ಕೊಟ್ಟಿರಲಿಲ್ಲ. ಯುರೋಪಿನ ಹಾಗೂ ಜಗತ್ತಿನ ಪ್ರಮುಖ ದೇಶಗಳು ರಷ್ಯಕ್ಕೆ ಮಾನ್ಯತೆ ಕೊಟ್ಟಿದ್ದು. ಅಮೇರಿಕಾ ರಷ್ಯಾವನ್ನು ಮಾನ್ಯ ಮಾಡಿದ ಹೆಚ್ಚು ಕಡಿಮೆ ಕೊನೆಯ ದೇಶವಾಗಿತ್ತು.
1933ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ರೂಸ್ ವೆಲ್ಟ್ ಈ ನಿರ್ಧಾರ ಕೈಗೊಂಡರು. ಹಿಂದಿನ ರಷ್ಯನ್ ಝಾರ್ ಸರಕಾರದ ಒಪ್ಪಂದಗಳು ಹಾಗೂ ಸಾಲಗಳನ್ನು ಹೊಸ ಸರಕಾರ ಮಾನ್ಯ ಮಾಡದ್ದು ಬರಿಯ ನೆಪವಾಗಿತ್ತು. 1930-31ರ ಮಹಾ ಕುಸಿತ ಅಮೇರಿಕಾದ ಈ ನಿರ್ಧಾರಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.