ನೋಟು : ರಾಜ್ಯಸಭೆಯಲ್ಲಿ ಸೀತಾರಾಮ್ ಯೆಚೂರಿಯವರ ಭಾಷಣದಿಂದ…

ನೀವು 500ರೂಪಾಯಿ, 1000 ರೂಪಾಯಿ ನೊಟುಗಳನ್ನು ನಿಲ್ಲಿಸಿದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಭಾವಿಸಿದ್ದೀರಾ? ಈಗ 2000 ರೂಪಾಯಿ ನೋಟುಗಳೊಂದಿಗೆ ಅದು ದುಪ್ಪಟ್ಟಾಗುತ್ತದೆ. ಸಣ್ಣ ಮೀನುಗಳು ಸಾಯುತ್ತಿವೆ, ಅತ್ತ ದೊಡ್ಡ ಮೊಸಳೆಗಳು ಮಜಾ ಮಾಡುತ್ತಿವೆ. ಅನಾಣ್ಯೀಕರಣ ಪ್ರಧಾನಿಗಳು ಮೊಸಳೆಗಳನ್ನು ಕೊಲ್ಲಲು ಕೆರೆಯನ್ನು ಬರಿದು ಮಾಡಿದಂತೆ, ಮೊಸಳೆಗಳು ನೆಲದ ಮೇಲೆಯೂ ಬದುಕಬಲ್ಲವು ಎಂಬ ಅರಿವಿಲ್ಲದೆ.

ಪ್ರಧಾನಿಗಳು ಕ್ರೆಡಿಟ್‍ ಕಾರ್ಡ್‍ನಿಂದ ಪಾವತಿ ಮಾಡಿ ಎನ್ನುತ್ತಾರೆ. ಒಬ್ಬ ಟ್ರಕ್‍ಡ್ರೈವರ್ ಹೆದ್ದಾರಿಯ ಲೈನ್ ದಾಬಾದಲ್ಲಿ ಕ್ರೆಡಿಟ್ ಕಾರ್ಡ್‍ನಿಂದ ಪಾವತಿ ಮಾಡಲು ಹೇಗೆ ಸಾಧ್ಯ?

ಬಂಗಾಲ ಮತ್ತು ದಾರ್ಜಿಲಿಂಗ್‍ನಲ್ಲಿ ಚಹಾ ತೋಟದ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಸ್ಸಾಂನಲ್ಲಿ ಉಪಚುನಾವಣೆಗಳು ಇರುವುದರಿಂದ ಚಹಾ ಅಲ್ಲಿ ಚಹಾ ತೋಟ ಕಾರ್ಮಿಕರಿಗೆ ವಿನಾಯ್ತಿ ಕೊಡುತ್ತಿದ್ದೀರಿ. ಅವರಿಗೆ ವಿನಾಯ್ತಿ ಕೊಡುತ್ತಿರುವುದು ಒಳ್ಳೆಯದೇ. ಆದರೆ ಎಲ್ಲ ಬಂಗಾಲ ಮತ್ತು ದಾರ್ಜಿಲಿಂಗ್‍ನ ಚಹಾತೋಟದ ಕಾರ್ಮಿಕರಿಗೂ ಏಕೆ ಕೊಡಬಾರದು?

ಈಗ ನಮ್ಮ ಪ್ರಧಾನಿಗಳು ಪೇಟಿಎಂನಂತೆ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಜಯಹಿಂದ್ ಬದಲು ಜಿಯೋ ಹಿಂದ್ ಎಂದು ಮಾತಾಡುತ್ತಿದ್ದಾರೆ. ಈಗೇನಾಗುತ್ತಿದೆ ಇಲ್ಲಿ?

ದೇಶದಲ್ಲಿ 86% ವ್ಯವಹಾರಗಳು ನಗದಿನಲ್ಲೆ ನಡೆಯುತ್ತಿರುವಾಗ, ಅವೆಲ್ಲ ಬಿಳಿ ಹಣವಾಗಿರುವಾಗ, ನಾವು ನಗದುರಹಿತ ಆರ್ಥಿಕದ ಬಗ್ಗೆ ಹೇಗೆ ಮಾತಾಡಲು ಸಾಧ್ಯ? ಇಂದು ದೇಶ ಕೇವಲ 14% ನಗದು ವ್ಯವಹಾರದ ಮೇಲೆಯೇ ಬದುಕುವಂತಾಗಿದೆ.

ನಮ್ಮ ಪ್ರಧಾನ ಮಂತ್ರಿಗಳು 95% ಕಪ್ಪು ಹಣ ಸಾಗರದಾಚೆಯಲ್ಲಿದೆ, ತೆರಿಗೆ ತಪ್ಪಿಸುವ ಪ್ರದೇಶಗಳಲ್ಲಿವೆ  ಎಂದು 2014ರ ಚುನಾವಣೆಗಳ ಸಮಯದಲ್ಲಿ ಹೇಳುತ್ತಿದ್ದರು. 15 ಲಕ್ಷ ತಂದು ಕೊಡುವುÀದಾಗಿಯೂ ಭರವಸೆ ಕೊಟ್ಟರು. ಆಗ  ಅದನ್ನು ಹೇಳಿದ ಅವರೇ ಈಗೇನು ಮಾಡುತ್ತಿದ್ದಾರೆ?

ಭ್ರಷ್ಟಾಚಾರಕ್ಕೆ ಪೂರೈಕೆಯಾಗುವುದನ್ನು ನೀವು ತಡೆಯದಿದ್ದರೆ ನೀವು ಅದನ್ನು ಎದುರಿಸಲಾರಿರಿ. ನಾನು ಹಲವು ಬಾರಿ ಹೇಳಿದ್ದೇನೆ, ಈಗಲೂ ಹೇಳುತ್ತೇನೆ, ಎಲ್ಲ ಪಾರ್ಟಿಗಳಿಗೂ ಕಾರ್ಪೊರೇಟ್ ಹಣ ಬರುವುದು ನಿಲ್ಲಬೇಕು.

ನೀವು ಬ್ಯಾಂಕುಗಳಿಗೆ ಕರೆನ್ಸಿ ವಿನಿಮಯಕ್ಕೆ ಅವಕಾಶÀ ಕೊಟ್ಟಿದ್ದೀರಿ, ಆದರೆ ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ಕೊಟ್ಟಿಲ್ಲ. ಬಹುಪಾಲು ಗ್ರಾಮೀಣ ಜನರು ವ್ಯವಹಾರ ನಡೆಸುವ ಈ ಬ್ಯಾಂಕುಗಳಲ್ಲಿ ವಾಪಾಸು ಮಾಡದ ಸಾಲಗಳ ಪ್ರಮಾಣ 1% ಕ್ಕಿಂತಲೂ ಕಡಿಮೆ. ಅವಕ್ಕೆ ಏಕೆ ಅವಕಾಶ ಕೊಟ್ಟಿಲ್ಲ? ಅತಿ ಶ್ರೀಮಂತರು ವ್ಯವಹಾರ ನಡೆಸಬಹುದು, ಬಡವರಿಗೆ ಸಾಧ್ಯವಿಲ್ಲ ಎಂದು ನಿಮ್ಮ ಅರ್ಥವೇ?

ಗ್ರಾಮೀಣ ಪ್ರದೇಶದಲ್ಲಿ 80.8% ಮಂದಿಗೆ ಬ್ಯಾಂಕ್ ಖಾತೆಗಳಿಲ್ಲ, ಅವರು ಯಾವ ಬ್ಯಾಂಕಿಗೆ ಹೋಗಬೇಕು ಎನ್ನುತ್ತಾರೆ ಪ್ರಧಾನ ಮಂತ್ರಿಗಳು?

ಪಶ್ಚಿಮ ಬಂಗಾಲದಲ್ಲಿ ನಿಮ್ಮ ಘಟಕ ಪ್ರಕಟಣೆಯ ಸ್ವಲ್ಪವೇ ಮೊದಲು ಬ್ಯಾಂಕಿಗೆ ಹೋಗಿ ಹಣವನ್ನು ಠೇವಣಿ ಮಾಡಬಹುದು. ಇದರ ತನಿಖೆ ಆಗಬೇಕು. ಈ ಬಗ್ಗೆ ಒಂದು ಜಂಟಿ ಸಂಸದೀಯ ಸಮಿತಿ ರಚನೆಯಾಗಲಿ.

Leave a Reply

Your email address will not be published. Required fields are marked *