ನವೆಂಬರ್ 24, 1859
ಜೀವಶಾಸ್ತ್ರದಲ್ಲಿ ಕ್ರಾಂತಿಯನ್ನೇ ತಂದ ಚಾರ್ಲ್ಸ್ ಡಾರ್ವಿನ್ ಅವರ “ಜೀವಿಗಳ ಉಗಮ” ಗ್ರಂಥ ಈ ದಿನ ಪ್ರಕಟವಾಯಿತು. ಡಾರ್ವಿನ್ ಅವರ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ಜೀವಶಾಸ್ತ್ರದಲ್ಲಿ ವಿಕಾಸವಾದದ ಸಿದ್ದಾಂತವನ್ನು ಮಂಡಿಸಿದ ಪ್ರಮುಖ ಗ್ರಂಥ. 150 ವರ್ಷಗಳ ನಂತರವೂ ಕೆಲವು ವಿವರಗಳು, ಪುರಾವೆಗಳಲ್ಲಿ ಬದಲಾವಣೆಗಳಾಗಿದ್ದರೂ, ಕಾಲದ ಪರೀಕ್ಷೆ ಗೆದ್ದ ಸಿದ್ದಾಂತ.
ಜೀವಶಾಸ್ತ್ರದಲ್ಲಿ ಮಾತ್ರವಲ್ಲ, ಜೀವಜಗತ್ತು ಹೇಗೆ ಉಗಮವಾಗಿ ವಿಕಾಸವಾಯಿತು ಎಂದು ನಿರೂಪಿಸುವ ಮೂಲಕ ಜಗತ್ತನ್ನು ಸೃಷ್ಟಿಸಿದ್ದು ದೇವರು ಎಂಬ ಧಾರ್ಮಿಕ ನಂಬಿಕೆಗಳಿಗೆ ಬಲವಾದ ಏಟು ಕೊಟ್ಟ ಗ್ರಂಥ. ಈಗಲೂ ಡಾರ್ವಿನ್ ಅವರ “ಜೀವಿಗಳ ಉಗಮ”ವನ್ನು ಕಲಿಸಬಾರದು ಎಂದು ಉಗ್ರ ಧಾರ್ಮಿಕ ಸಂಘಟನೆಗಳು ಅಮೆರಿಕದಲ್ಲೂ ಒತ್ತಾಯಿಸುವುದು ಅದರ ಪ್ರಭಾವವನ್ನು ಸೂಚಿಸುತ್ತದೆ.