ಡಿಸೆಂಬರ್ 3, 1984
ಭೋಪಾಲದಲ್ಲಿದ್ದ ಅಮೆರಿಕನ್ ಕಂಪನಿ ಯೂನಿಯನ್ ಕಾರ್ಬೈಡ್ನ ಸ್ಥಾವರದಲ್ಲಿ 40 ಟನ್ ವಿಷಕಾರಿ ಅನಿಲ ಎಂಐಸಿ ಸೋರಿ ತಕ್ಷಣವೇ 3000 ಮಂದಿಯ ಸಾವು ಉಂಟಾಯಿತು. ಮುಂದಿನ ಮೂರು ದಿನಗಳಲ್ಲಿ ಸಾವಿ ಸಂಖ್ಯೆ 8000ಕ್ಕೇರಿತು. ನಂತರ ಅದು 20,000ಕ್ಕೇರಿತು. ಸುಮಾರು 2 ಲಕ್ಷ ಮಂದಿ ನಗರ ಬಿಟ್ಟೋಡಬೇಕಾಯಿತು. ಬದುಕುಳಿದವರಲ್ಲಿ ಸುಮಾರು 5.2ಲಕ್ಷ ಮಂದಿಯ ಬದುಕನ್ನು ಇದು ನರಕ ಮಾಡಿ ಬಿಟ್ಟಿದೆ.
ಕ್ಯಾನ್ಸರ್, ಕ್ಷಯ, ಜನನಾಂಗಗಳ ಸಮಸ್ಯೆಗಳು, ದೃಷ್ಟಿ ಮಾಂದ್ಯ, ಹಸಿವು ಹೀನತೆ ಹೀಗೆ ಹಲವಾರು ಕಾಯಲೆಗಳು ಇವರನ್ನು ಬಾಧಿಸುತ್ತಲೇ ಇವೆ. ಹಿರೋಶಿಮಾ ಅಣುಬಾಂಬು ದುರಂತವನ್ನು ನೆನಪಿಸುವ ಅತಿದೊಡ್ಡ ಕೈಗಾರಿಕಾ ಅನರ್ಥ ಎಂದು ದಾಖಲಾಗಿದೆ.
ಇನ್ನೊಂದೆಡೆಯಲ್ಲಿ ಇದು ಭಾರತದ ಆಳುವ ಮಂದಿ ಅಮೆರಿಕಾದ ಆಳುವ ಮಂದಿಯೆದುರು ಮಂಡಿಯೂರಿದ ನ್ಯಾಯದ ಅತಿದೊಡ್ಡ ಅಣಕ ಎಂದೂ ದಾಖಲಾಗಿದೆ.