ಗೃಹಮಂತ್ರಿಗಳ ಬಳಿಗೆ ನಿಯೋಗ ಮತ್ತು ಮನವಿ ಪತ್ರ ಅದಕ್ಕೆ ಮೊದಲು ಜಂತರ್ ಮಂತರ್ ನಲ್ಲಿ ಜುನೈದನಿಗೆ ನ್ಯಾಯ ಕೊಡಿಸಿ ಎಂದು ನಡೆದ ಧರಣಿ ಕಾರ್ಯಕ್ರಮದ ಭಾಗವಾಗಿತ್ತು. ಧರಣಿಯನ್ನುದ್ದೇಶಿಸಿ ಮಾತನಾಡುತ್ತ ಬೃಂದಾ ಕಾರಟ್ ಪ್ರಸಕ್ತ ಸರಕಾರ ಹಿಂದುತ್ವ ಅಜೆಂಡಾವನ್ನು ಜಾರಿ ಮಾಡಲು ಕಟಿಬದ್ಧವಾಗಿರುವ ಆರೆಸ್ಸೆಸ್-ಬಿಜೆಪಿಯ ಜಂಟಿ ಉದ್ಯಮ. ಅಮಿತ್ ಶಾಹ ಬಡಿದು ಸಾಯಿಸುವ ಪ್ರಕರಣಗಳನ್ನು ಖಂಡಿಸುವ ಬದಲು ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಹೋಲಿಸುತ್ತಿರುವುದು ಅತ್ಯಂತ ಕ್ಷೇಪಣೀಯ, ಆಗಲೂ ಇಂತಹ ಕೃತ್ಯ ನಡೆಸಿದವರು ಸಂಘ ಪರಿವಾರದವರೇ ಎಂಬುದನ್ನು ಅವರುಮರೆತಿದ್ದಾರೆ ಎಂದು ಬಲವಾಗಿ ಟೀಕಿಸಿದರು.
ಐಕ್ಯತೆಯಿಂದ ನಾವು ಸರಕಾರ ಮತ್ತು ಪೋಲೀಸರ ವಿರುದ್ಧ ಹೆಚ್ಚು ಸುಲಭವಾಗಿ ಹೋರಾಡಬಹದು, ಆದರೆ ಜನಗಳ ಹೃದಯ ಮತ್ತು ಮನಸ್ಸುಗಳು ಒಡೆಯುವುದನ್ನು ತಡೆಯಬೇಕಾಗಿದೆ, ಏಕೆಂದರೆ ಆರೆಸ್ಸೆಸ್ಗೆ ಬೇಕಾಗಿರುವುದು ಇದೇ ಎಂದರು.
ಇನ್ನೊಬ್ಬರು ಪೊಲಿಟ್ಬ್ಯುರೊ ಸದಸ್ಯರಾದ ಹನ್ನನ್ ಮೊಲ್ಲ ಮಾತಾಡುತ್ತ ಜಾನುವಾರು ಮಾರಾಟ ನಿರ್ಬಂಧ ಅಧಿಸೂಚನೆ ರೈತರ ಜೀವನಾಧಾರವನ್ನು ಧ್ವಂಸ ಮಾಡುವ ಒಂದು ಸಾಧನ ಎನ್ನುತ್ತ ಧರಣಿಯಲ್ಲಿ ಪಾಲ್ಗೊಳ್ಳಲು ನೊಯ್ಡ ಮತ್ತು ಘಜಿಯಾಬಾದ್ನಿಂದ ದೊಡ್ಡ ಸಂಖ್ಯೆಯಲ್ಲಿ ಬಂದ ಮಾಂಸದ ವ್ಯಾಪಾರಿಗಳ ಸಂಘದ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.