ಇಸ್ರೇಲಿನೊಂದಿಗೆ ‘ವ್ಯೂಹಾತ್ಮಕ ಭಾಗೀದಾರಿಕೆ’: ಪ್ಯಾಲೇಸ್ತೈನ್ ಪ್ರಭುತ್ವದ ಚಕಾರವಿಲ್ಲ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಕುರಿತಂತೆ ಭಾರತದ ದೀರ್ಘಕಾಲದ ನಿಲುವಿನಲ್ಲಿ ಬಿರುಕಿನ ಸಂಕೇತವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಟೀಕಿಸಿದೆ. ಇಸ್ರೇಲ್ ಪ್ಯಾಲೆಸ್ತೈನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಶಕ್ತಿ ಎಂಬುದು ಭಾರತದ ಬಹಳ ಕಾಲದ ಕಣ್ಣೋಟ ಎಂಬುದನ್ನು ಸಿಪಿಐ(ಎಂ) ನೆನಪಿಸಿದೆ.

ಇಸ್ರೇಲಿನೊಂದಿಗೆ ಜಂಟಿ ಹೇಳಿಕೆಯಲ್ಲಿ ಒಂದು ‘ವ್ಯೂಹಾತ್ಮಕ ಭಾಗೀದಾರಿಕೆ’ಯ ಪ್ರಕಟಣೆಯಿದೆ. ಇದು ವ್ಯೂಹಾತ್ಮಕ ಮೈತ್ರಿಯಾಗಿದ್ದು, ಪ್ಯಾಲೆಸ್ತೈನಿ ಹೋರಾಟಕ್ಕೆ ಬೆಂಬಲವನ್ನು ಕೈಬಿಟ್ಟಂತೆಯೇ ಆಗಿದೆ. ಮೋದಿಯವರು ರಮಲ್ಲಾ ಮತ್ತು ಪ್ಯಾಲೆಸ್ತೈನಿ ಪ್ರಾಧಿಕಾರವನ್ನು ಭೇಟಿಯಾಗಲು ಹೋಗದಿರುವುದು ಇದನ್ನು ಇನ್ನಷ್ಟು ಬಲಪಡಿಸಿದೆ. ಈ ಭೇಟಿಯಾದ್ಯಂತ ಭಾರತೀಯ ಪ್ರಧಾನ ಮಂತ್ರಿಗಳು ಒಂದು ಪ್ಯಾಲೆಸ್ತೈನಿ ಪ್ರಭುತ್ವದ ಪ್ರಶ್ನೆಯ ಬಗ್ಗೆ ಚಕಾರವೆತ್ತಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ  ಹೇಳಿದೆ.

Leave a Reply

Your email address will not be published. Required fields are marked *