ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ), ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಮೈಸೂರು ನಗರದ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಜುಲೈ 12ರಂದು `ಇಂಡಿಯಾ ವಾಸ್ತವ-ರಾಷ್ಟ್ರೀಯತೆ’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರೊ. ಕೆ.ವಿ.ವಾಸುದೇವನ್ ಹಾಗೂ ಕಾಂ||ಎನ್.ವಿಜಯ್ಕುಮಾರ್ ಅನುವಾದಿಸಿರುವ ಕೃತಿಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ಜಿ.ಎನ್.ನಾಗರಾಜು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, “ರಾಷ್ಟ್ರೀಯತೆ ಕುರಿತು ರಚಿತವಾಗಿರುವ ಈ ಕೃತಿ ಅನನ್ಯವಾಗಿ ಮೂಡಿಬಂದಿದೆ. ನೈಜ ರಾಷ್ಟ್ರೀಯತೆ ಹಾಗೂ ಶೋಷಣೆಗೆ ಒಳಪಟ್ಟ ಜನರ ಕುರಿತು ರಚಿತವಾಗಿದ್ದು ಹುಸಿ ರಾಷ್ಟ್ರೀಯವಾದದ ಬಗ್ಗೆ ತಿಳಿಸಿಕೊಡುತ್ತದೆ. ವಸಾಹತುಶಾಹಿ ರಾಷ್ಟ್ರೀಯವಾದಕ್ಕೂ ನೈಜ ರಾಷ್ಟ್ರೀಯ ವಾದಕ್ಕೂ ಇರುವ ವ್ಯತ್ಯಾಸವನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ’’ ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಕಾಂ||ಜಿ.ವಿ.ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ವಿ.ಜೆ.ಕೆ.ನಾಯರ್, ಜಿಲ್ಲಾ ಕಾರ್ಯದರ್ಶಿ ಕಾಂ||ಕೆ.ಬಸವರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.