ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಸೀತಾರಾಮ್ ಯೆಚುರಿಯವರನ್ನು ರಾಜ್ಯಸಭೆಯ ಮೂರನೇ ಅವಧಿಗೆ ಸೂಚಿಸಬೇಕೆನ್ನುವ ಪಶ್ಚಿಮ ಬಂಗಾಲ ರಾಜ್ಯ ಸಮಿತಿಯ ಪ್ರಸ್ತಾವವನ್ನು ತಿರಸ್ಕರಿಸಿದೆ. ಪಶ್ಚಿಮ ಬಂಗಾಲದ ಪ್ರತಿಪಕ್ಷಗಳಿಗೆ ಒಪ್ಪಿಗೆಯಾಗುವ ಒಬ್ಬ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಅಭಿಪ್ರಾಯವನ್ನು ಕೇಂದ್ರ ಸಮಿತಿ ವ್ಯಕ್ತಪಡಿಸಿತು. ಇದು ಸಾಧ್ಯವಾಗದಿದ್ದರೆ ಪಶ್ಚಿಮ ಬಂಗಾಳ ಎಡರಂಗ ಸಮಿತಿ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುತ್ತದೆ ಎಂದು ಅದು ಹೇಳಿದೆ.
ಪಶ್ಚಿಮ ಬಂಗಾಳದ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯು ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರ ಪ್ರಸಕ್ತ ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಂಡ ನಂತರ ಅವರನ್ನು ಪಶ್ಚಿಮ ಬಂಗಾಳದಿಂದ ಮತ್ತೆ ನಿಲ್ಲಿಸಬೇಕು ಎಂದು ಕೋರಿತ್ತು. ಜೂನ್ 6 ಮತ್ತು 7ರಂದು ನಡೆದ ಪೊಲಿಟ್ಬ್ಯುರೊ ಸಭೆ ಇದನ್ನು ಚರ್ಚಿಸಿ ಈ ಪ್ರಸ್ತಾವವನ್ನು ಸ್ವಿÃಕರಿಸದಿರಲು ನಿರ್ಧರಿಸಿತು. ಈ ನಿರ್ಧಾರಕ್ಕೆ ಕಾರಣಗಳು :
- ಪಶ್ಚಿಮ ಬಂಗಾಲ ವಿಧಾನ ಸಭೆಯಲ್ಲಿ ಎಡರಂಗದ ಪ್ರಸಕ್ತ ಬಲ 31 ಮಾತ್ರವಾಗಿದ್ದು ಯೆಚುರಿಯವರು 37 ಶಾಸಕರನ್ನು ಹೊಂದಿರುವ ಕಾಂಗ್ರೆಸಿನ ಬೆಂಬಲದಿಂದ ಮಾತ್ರವೇ ಆಯ್ಕೆಯಾಗಲು ಸಾಧ್ಯ. ಅಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜ್ಯಸಭೆಗೆ ಕಾಂಗ್ರೆಸಿನ ಬೆಂಬಲದಿಂದ ಹೋಗಬೇಕಾಗುತ್ತದೆ. ಇದು ಪಕ್ಷ 21ನೇ ಮಹಾಧಿವೇಶನದಲ್ಲಿ ಅಂಗೀಕರಿಸಿದ ರಾಜಕೀಯ-ಕಾರ್ಯತಂತ್ರಾತ್ಮಕ ಧೋರಣೆಗೆ ಅನುಗುಣವಾಗಿರುವಂತದ್ದಲ್ಲ.
- 1964ರಲ್ಲಿ ಸಿಪಿಐ(ಎಂ) ಸ್ಥಾಪನೆ ಯಾದಂದಿನಿಂದಲೂ, ಪ್ರಧಾನ ಕಾರ್ಯದರ್ಶಿ ಸಂಸದೀಯ ವೇದಿಕೆಗಳಲ್ಲಿ ತೊಡಗಿಕೊಳ್ಳದಿರುವುದು ಒಂದು ಸಂಘಟನಾ ಆಚರಣೆಯಾಗಿದೆ. ಏಕೆಂದರೆ ರಾಜಕೀಯ-ಸಂಘÀಟನಾತ್ಮಕ ಕರ್ತವ್ಯಗಳನ್ನು ನಿಭಾಯಿಸುವತ್ತ ಪ್ರಧಾನ ಕಾರ್ಯದರ್ಶಿ ಮುಖ್ಯವಾಗಿ ಗಮನ ನೀಡಬೇಕಾಗುತ್ತದೆ. ಕಾಮ್ರೆÃಡ್ ಸೀತಾರಾಮ್ ಯೆಚುರಿ 2015ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದಾಗ ಆಗಲೇ ರಾಜ್ಯಸಭೆಯ ಸದಸ್ಯರಾಗಿದ್ದುದರಿಂದ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಬೇಕು ಎಂದು ಪೊಲಿಟ್ಬ್ಯುರೊ ನಿರ್ಧರಿಸಿತ್ತು. ಏಕೆಂದರೆ ಆಗ ಮರುಚುನಾವಣೆ ನಡೆದಿದ್ದರೆ ಆ ಸ್ಥಾನವನ್ನು ತೃಣಮೂಲ ಕಾಂಗ್ರೆಸಿಗೆ ಉಡುಗೊರೆಯಾಗಿ ಕೊಟ್ಟಂತಾಗುತ್ತಿತ್ತು.
- ಪಕ್ಷದಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ಎರಡು ಅವಧಿಗಳ ಮಿತಿ ರೂಪಿಸಿದ್ದು ಮೂರು ದಶಕಗಳ ಹಿಂದೆ. ಸಂಸದೀಯ ವೇದಿಕೆಯಲ್ಲಿ ಕೆಲಸ ಮಾಡಲು ಹೊಸ ಮುಖಂಡರು ಬರುವಂತಾಗಬೇಕೆಂದು ಇದನ್ನು ವಿಧಿಸಲಾಗಿತ್ತು. ಇದೊಂದು ಕಟ್ಟುನಿಟ್ಟಾದ ನಿಯಮವೇನಲ್ಲ. ಆದರೆ ಮೇಲಿನ ಎರಡು ಪರಿಗಣನೆಗಳ ಹಿನ್ನೆಲೆಯಲ್ಲಿ ಈ ನಿಯಮವನ್ನು ಸಡಿಲಿಸುವ ಅಗತ್ಯವಿದೆ ಎಂದು ಅನಿಸಲಿಲ್ಲ.
ಜುಲೈ 24-26ರಲ್ಲಿ ನಡೆದ ಕೇಂದ್ರ ಸಮಿತಿಯ ಸಭೆಯ ಮುಂದೆ ಈ ನಿರ್ಧಾರವನ್ನು ಮಂಜೂರಾತಿಗಾಗಿ ಮಂಡಿಸಲಾಯಿತು. ಈ ಬಗ್ಗೆ ಚರ್ಚಿಸಿದ ನಂತರ ಕೇಂದ್ರ ಸಮಿತಿ ಪೊಲಿಟ್ಬ್ಯುರೊದ ನಿರ್ಧಾರವನ್ನು ಅನುಮೋದಿಸಿತು.