ಮಧ್ಯಪ್ರದೇಶದಲ್ಲಿ ಸುಪ್ರಿಂ ಕೋಟಿನ ನಿರ್ಣಯವನ್ನು ತಪ್ಪಾಗಿ ವ್ಯಾಖ್ಯಿಸಿ ಸರ್ದಾರ್ ಸರೋವರ ಆಣೆಕಟ್ಟಿನ ಗೇಟ್ಗಳನ್ನು ಮುಚ್ಚಲಾಗಿದೆ. ಜುಲೈ 31ರ ನಂತರ, ಈ ಆಣೆಕಟ್ಟಿನಿಂದ ಸಂತ್ರಸ್ತರಾಗುವವವರನ್ನು ಅಲ್ಲಿಂದ ಸ್ಥಳಾಂತರಿಸುವ ಕೆಲಸವನ್ನು ಅವರಿಗೆ ಸರಿಯಾದ ಪುನರ್ವಸತಿಯನ್ನು ಒದಗಿಸಿದ ನಂತರವೇ ಮತ್ತು ಅವರಿಗೆ ಪರಿಹಾರ ನೀಡಿದ ನಂತರವೇ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು.
ಈ ಯೋಜನೆಯಿಂದ ಸಂತ್ರಸ್ತರಾಗುವ 40,000 ಕುಟುಂಬಗಳಿಗೆ ಮರುವಸತಿಯ ವ್ಯವಸ್ಥೆಗಳು ಇನ್ನೂ ಪೂರ್ಣಗೊಂಡಿಲ್ಲ. ರೈತರಿಗೆ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕೃಷಿ ಕೂಲಿಕಾರರು, ಅಂಗಡಿ ಇಟ್ಟುಕೊಂಡವರು, ಮೀನುಗಾರರಿಗಂತೂ ಯಾವುದೇ ವ್ಯವಸ್ಥೆ ಮಾಡಿಲ್ಲ.
ರಾಜಕೀಯ ಕಾರಣದಿಂದಾಗಿ, ಗುಜರಾತ್ ವಿಧಾನಸಭಾ ಚುನಾವಣೆಗಳ ಒತ್ತಡದಿಂದಾಗಿ 40,000 ಕುಟುಂಬಗಳನ್ನು ಈ ರೀತಿ ಬಲಿಗೊಡಲಾಗುತ್ತಿದೆ ಎಂಬುದು ಸ್ಪಷ್ಟ ಎಂದಿರುವ ಸಿಪಿಐ(ಎಂ), ಮೇಧಾ ಪಾಟ್ಕರ್ ನೇತೃತ್ವದ ಆಣೆಕಟ್ಟು ಸಂತ್ರಸ್ಥರ ಹೋರಾಟಕ್ಕೆ ಸೌಹಾರ್ಧ ವ್ಯಕ್ತಪಡಿಸಿದೆ.
ಮರುವಸತಿ ಮತ್ತು ಪರಿಹಾರ ಶರತ್ತುಗಳನ್ನು ಪೂರೈಸುವ ವರೆಗೆ ಯಾರನ್ನೂ ಅಲ್ಲಿಂದ ಸ್ಥಳಾಂತರಿಸಬಾರದು ಮತ್ತು ಆಣೆಕಟ್ಟಿನ ಗೇಟುಗಳನ್ನು ತೆರೆದಿಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.