ರಾಜ್ಯಸಭಾದ್ಯಕ್ಷರಿಗೆ ಯೆಚುರಿ ಆಗ್ರಹ
ರಾಜ್ಯಸಭಾ ಸದಸ್ಯರಾದ ಶರದ್ ಯಾದವ್ ಮತ್ತು ಅನ್ವರ್ ಅಲಿಯವರನ್ನು ರಾಜ್ಯಸಭಾಧ್ಯಕ್ಷರು ಪಕ್ಷಾಂತರದ ಆಧಾರದಲ್ಲಿ ಅನರ್ಹಗೊಳಿಸಿದ್ದಾರೆ. ಜೆಡಿ(ಯು) ಸಪ್ಟಂಬರ್ 2ಕ್ಕೆ ಈ ಕುರಿತು ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 4ರಂದು ರಾಜ್ಯಸಭಾಧ್ಯಕ್ಷರು(ಉಪರಾಷ್ಟ್ರಪತಿ
ನಿಜ, ರಾಜ್ಯಸಭಾಧ್ಯಕ್ಷರಿಗೆ ಈ ಅಧಿಕಾರ ಇದೆ. ಅವರ ಈ ಅಧಿಕಾರವನ್ನು ಪೃಶ್ನಿಸದೆ ರಾಜ್ಯಸಭೆಯ ಕಲಾಪಗಳನ್ನು ನಡೆಸುವ ಬಗ್ಗೆ ನಿಯಮಗಳನ್ನು ರೂಪಿಸಲಾಗಿದೆ. ಪಕ್ಷಾಂತರದ ನೆಲೆಯಲ್ಲಿ ಅನರ್ಹತೆ ಕುರಿತಾದ ನಿಯಮ 7ನೇ ಪರಿಚ್ಛೇದದಲ್ಲಿದೆ. ಸಭಾದ್ಯಕ್ಷರು ಅರ್ಜಿ ಪಡೆದ ಮೇಲೆ ತಾವೇ ಅದನ್ನು ನಿರ್ಧರಿಸಬಹುದು, ಅಥವ ಸಂದರ್ಭಕ್ಕೆ ಅನುಗುಣವಾಗಿ ಅಗತ್ಯವೆನಿಸಿದಲ್ಲಿ ಪ್ರಾಥಮಿಕ ತನಿಖೆಗೆ ವಿಶೇಷಾಧಿಕಾರ ಸಮಿತಿಗೆ ಕಳಿಸಬಹುದು.
ಒಂದು ದಶಕಕ್ಕ್ಕೂ ಹೆಚ್ಚು ಕಾಲ ಈ ಸಮಿತಿಯಲ್ಲಿ ಕೆಲಸ ಮಾಡಿದ ಅನುಭವವಿರುವ ಯೆಚುರಿಯವರ ಪ್ರಕಾರ ಶರದ್ ಯಾದವ್ ವಿರುದ್ಧ ಬಂದ ಅರ್ಜಿಯ ಸಂದರ್ಭ ಮತ್ತು ಸ್ವರೂಪದ ಹಿನ್ನೆಲೆಯಲ್ಲಿ ಅದನ್ನು ಈ ಸಮಿತಿಗೆ ಕಳಿಸುವ ಅಗತ್ಯವಿತ್ತು. ಅದರ ವರದಿಯ ಆಧಾರದಲ್ಲಿ ರಾಜ್ಯಸಭಾಧ್ಯಕ್ಷರು ನಿರ್ಣಯ ಕೈಗೊಳ್ಳಬೇಕಾಗಿತ್ತು.
ಶರದ್ ಯಾದವ್ ದೇಶದ ಒಬ್ಬ ಹಿರಿಯ ರಾಜಕಾರಣಿ. ಸಂಸತ್ತಿನ ಎರಡೂ ಸದನಗಳಲ್ಲಿ ಅವರು ಹನ್ನೊಂದು ಬಾರಿ ಸದಸ್ಯನಾಗಿ ಪ್ರತಿಜ್ಞೆ ಸ್ವೀಕರಿಸಿರುವವರು. ಅವರ ಹಿರಿತನವನ್ನು ಪರಿಗಣಿಸಿ ಈ ವಿಷಯದಲ್ಲಿ ಅವರು ಏನು ಹೇಳಬಯಸುತ್ತಾರೆ ಎಂಬುದನ್ನು ಅಧ್ಯಯನ ಮಾಡಬೆಕು, ಅದರ ಪ್ರಕಾರ ಈ ನಿರ್ಧಾರವನ್ನು ಮರುಪರಿಶೀ°ಸಬೇಕು ಎಂದು ಸೀತಾರಾಮ್ ಯೆಚುರಿಯವರು ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟçಪತಿ ವೆಂಕಯ್ಯ ನಾಯ್ಡುರವರನ್ನು ಆಗ್ರಹಿಸಿದ್ದಾರೆ.