ಮೈಸೂರು ಜಿಲ್ಲಾ ಸಮ್ಮೇಳನ: ಬಿಜೆಪಿ ಹಾಗೂ ಸಂಘ ಪರಿವಾರ ಹುಣಸೂರು ತಾಲ್ಲೂಕಿನಲ್ಲಿ ಕೋಮುಗಲಬೆ ಸೃಷ್ಠಿಮಾಡಿ ತಮ್ಮ ರಾಜಕೀಯ ಲಾಭ ಪಡೆಯಲು ಹೊರಟ್ಟಿತ್ತು. ಈ ಸಂದರ್ಭದಲ್ಲಿ ಸಿಪಿಐ(ಎಂ) ಮೈಸೂರು ಜಿಲ್ಲಾ ಸಮ್ಮೇಳನ ಕೋಮುವಾದಿಗಳನ್ನು ಧಿಕ್ಕರಿಸುವಂತೆ ಕರೆ ನೀಡಿತು. ಹುಣಸೂರು ಉಪ ವಿಭಾಗವಾಗಿದ್ದು ಇದನ್ನು ಕೇಂದ್ರವಾಗಿ ಇಟ್ಟುಕೊಂಡು ಕೋಮುಗಲಭೆ ಸೃಷ್ಠಿಸಲು ಇಲ್ಲಿನ ಸಂಸದರು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ 22ನೇ ಜಿಲ್ಲಾ ಸಮ್ಮೇಳನವು ಡಿಸೆಂಬರ್ 16-17ರಂದು ಹುಣಸೂರು ಪಟ್ಟಣದ ಅಂಬೇಂಡ್ಕರ್ ಭವನದಲ್ಲಿ ನಡೆಯಿತು.
ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಕಾಂ||ಜಗನ್ನಾಥ್ ರವರು ಧ್ವಜ ಹರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ನಂತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ವಿ.ಜಿ.ಕೆ.ನಾಯಕ್ ಅವರು ದೇಶದ ಸಾರ್ವಭೌಮತೆಯನ್ನು ಕಾಪಾಡಬೇಕಾದ ಪ್ರಧಾನ ಮಂತ್ರಿಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿ ದೇಶ ಮುನ್ನಡೆಸುತ್ತಿದ್ದಾರೆ. ಇದರ ಪಲವಾಗಿಯೇ ಸಾರ್ವಜನಿಕ ರಂಗದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಎಂದು ಆಕ್ಸೋಶ ವ್ಯಕ್ತಪಡಿಸಿದರು. ಬಲಿಷ್ಠ ಚಳುವಳಿಯೊಂದೇ ನಮ್ಮ ಸಮಸ್ಯೆಗೆ ಪರಿಹಾರ. ಆದ್ದರಿಂದ ಎಲ್ಲಾರು ಸೇರಿ ಸಂಘಟಿಸಬೇಕೆಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಕಾಂ||ಕೆ.ಬಸವರಾಜು ವಹಿಸಿದ್ದರು.
ನಂತರ ಸಮ್ಮೇಳನ ಮುನ್ನಡೆಸಲು ಕಾಂ||ಜಿ.ಜಯರಾಮ್, ಕಾಂ||ಸುನಂದ ಹೆಚ್.ಎಸ್., ಕಾಂ||ವಿ.ಬಸವರಾಜು ಕಲ್ಕುಣಿಕೆ ಇವರುಗಳು ಇರುವ ಅಧ್ಯಕ್ಷೀಯ ಮಂಡಳಿಯನ್ನು ರಚಿಸಲಾಯಿತು. ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿ ಕಾಂ||ಕೆ.ಬಸವರಾಜು ವರದಿ ಮಂಡಿಸಿದರು. ವರದಿ ಮೇಲೆ 10 ಜನ ಸಂಗಾತಿಗಳು ಚರ್ಚಿಸಿದರು. ನಂತರ ಕಾರ್ಯದರ್ಶಿಗಳು ಉತ್ತರ ನೀಡಿದರು.
ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಂಬಂದಪಟ್ಟಂತೆ ಮೈಸೂರಿನಿಂದ ಕೊಡಗಿಗೆ ರೈಲ್ವೆ ಸಂಪರ್ಕ, ಡಾ||ಎಂ.ಎಸ್.ಸ್ವಾಮಿನಾಥನ್ ಆಯೋಗ ಶೀಘ್ರವೇ ಜಾರಿ, ರೈತರ ಎಲ್ಲಾ ಸಾಲ ಮನ್ನಾ ಮಾಡಲು, ಸಾರ್ವಜನಿಕ ರಂಗದ ಕೈಗಾರಿಕಾ ರಂಗಗಳನ್ನು ಉಳಿಸಲು, ಸೌರ್ಹದ ಕರ್ನಾಟಕ ಭಾಗವಾಗಿ ನಡೆಯುವ ಮಾನವ ಸರಪಳಿ ಯಶಸ್ಸಿಗೆ, ವಸತಿ ನಿವೇಶನರಿಗೆ ಮನೆ-ನಿವೇಶನ ನೀಡಲು, ಹೆಚ್.ಡಿ.ಕೋಟೆಯ ತಾರಕ ಏತ ನೀರಾವರಿ ಅಚ್ಚುಕಟ್ಟು ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿ ಇತ್ಯಾದಿ ನಿರ್ಣಯಗಳನ್ನು ಕಾಂ||ವಿಜಯಕುಮಾರ್ ಮಂಡಿಸಿದರು. ಕಾಂ||ವಜ್ರಮುನಿ ಅನುಮೋದಿಸಿದರು. ಎಲ್ಲಾ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗಿಕರಿಸಲಾಯಿತು.
ನಾಯಕತ್ವ, ಪ್ರತಿನಿಧಿಗಳ ಆಯ್ಕೆ:
ಜಿಲ್ಲಾ ಸಮ್ಮೇಳನವು 8 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಸಮಿತಿಗೆ ಕೆ.ಬಸವರಾಜು, ಎಲ್.ಜಗನ್ನಾಥ್, ಜಿ.ಜಯರಾಮ್, ಎನ್.ವಿ. ಜಯಕುಮಾರ್, ಹೆಚ್.ಎಸ್. ಸುನಂದ, ವಿ.ಬಸವರಾಜು, ಜಗದೀಶ್ ಸೂರ್ಯ, ಬೆಳ್ತೂರು ವೆಂಕಟೇಶ್ ಜಿಲ್ಲಾ ಸಮಿತಿಗೆ ಆಯ್ಕೆಯಾದರು.
ಕಳೆದ ಎರಡು ಅವಧಿಗಳಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಜಿಲ್ಲಾ ಕಾರ್ಯದರ್ಶಿ ಕಾಂ. ಕೆ.ಬಸವರಾಜು ಮುಂದಿನ ಅವದಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಪಕ್ಷದ ರಾಜ್ಯ ಸಮ್ಮೇಳನಕ್ಕೆ ಪ್ರತಿನಿದಿಗಳಾಗಿ ಕೆ.ಬಸವರಾಜು, ಎನ್.ವಿಜಯಕುಮಾರ್, ಜಗದೀಶ್ ಸೂರ್ಯ ಮತ್ತು ವೀಕ್ಷಕರಾಗಿ ಬಾಲಾಜಿರಾವ್ ಆಯ್ಕೆಯಾದರು.
ಆಕರ್ಷಕ ಮೆರವಣಿಗೆ: ಮರುದಿನ ಡಿಸೆಂಬರ್ 17ರಂದು ಪಟ್ಟಣದ ಕಲ್ಕುಣಿಕೆಯ ರಂಗನಾಥ ಬಡಾವಣೆಯಿಂದ ಪಕ್ಷದ ಕಣ್ಣೂರು ಜಿಲ್ಲೆಯ ಇರಟಿಯ ರೆಡ್ ವಾಲೆಂಟರ್ಸ್ ಬ್ಯಾಂಡ್ ಸೆಟ್ ತಂಡದದೊಂದಿಗೆ ಮೆರವಣಿಗೆಯನ್ನು ಆರಂಭಿಸಲಾಯಿತು. ಇದೇ ಪ್ರಥಮ ಬಾರಿಗೆ ಹುಣಸೂರು ಪಟ್ಟಣದಲ್ಲಿ ರೆಡ್ ವಾಲೆಂಟÀರ್ಸ್ ತಂಡದ ಮೆರವಣಿಗೆ ಇಡೀ ಜನರ ಗಮನ ಸೆಳೆಯಲು ಸಾಧ್ಯವಾಯಿತು. ಮೆರವಣಿಗೆ ಸಾಗುವಾಗ ರಸ್ತೆ ಇಕ್ಕೆಲಗಳನ್ನು ಕುತೂಹಲದಿಂದ ಮೆರವಣಿಗೆ ವೀಕ್ಷಿಸಿ ಖುಷಿ ಪಟ್ಟು ಸೈನಿಕರಂತೆ ಮೆರವಣಿಗೆ ಇತ್ತು ಎಂದು ಜನತೆ ಪ್ರಶಂಸೆಯ ಮಾತುಗಳನ್ನಾಡಿದರು. ಭಾಗವಹಿಸಿದ ಸಂಗಾತಿಗಳಿಗೂ ಮೆರವಣಿಗೆಯಲ್ಲಿ ಸಾಗುವಾಗ ಒಂದು ರೀತಿಯ ರೋಮಾಂಚನಗೊಂಡು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ವಿಜೆಕೆ ನಾಯರ್ ಸುಮಾರು 2 ಕಿಮೀ ಹೆಜ್ಜೆ ಹಾಕಿದರು.
ಬಹಿರಂಗ ಸಭೆ: ನಗರ ಸಭೆ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ, ವಿ.ಜಿ.ಕೆ. ಮಾತನಾಡಿ ಸಂಘ ಪರಿವಾರದವರು ಹಿಂದೂಗಳ ಬಗ್ಗೆ ಗುತ್ತಿಗೆ ಪಡಿದವರಂತೆ ವರ್ತಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ದಲಿತರು ರೈತರು ಬಡವರು, ಕಾರ್ಮಿಕರು ಸಂಕಷ್ಟ ಪಡುತ್ತಿದ್ದಾರೆ. ಇವರ ಯಾವುದೇ ಸಮಸ್ಯೆ ಬಗ್ಗೆ ಚಕಾರ ಎತ್ತದ ಇವರು ದೇವರು ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಿ ಕೋಮುಗಲಭೆ ಹುಟ್ಟುಹಾಕಿ ರಾಜಕೀಯ ಲಾಭ ಗಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಪಿಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕಾಂ||ಜಿ.ರಾಮಕೃಷ್ಣ ಮಾತನಾಡಿ ಬಿಜೆಪಿಯು ಕೇಂದ್ರದಲ್ಲಿ ಆಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆಯುತ್ತ ಬಂದರೂ ಕೂಡ ಅವರು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಇದನ್ನು ಮರೆಮಾಚುವ ಸಲುವಾಗಿ ಹೊಸ ಹೊಸ ದೇವರು ಸೃಷ್ಠಿಮಾಡಿ ಭೈರವ ಮಾಲೆ, ಹನುಮ ಮಾಲೆ ಅಂತ ಹೇಳಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದ್ದಾರೆ. ಇದರ ಪರಿಣಾಮವೇ ಹುಣಸೂರಿನಲ್ಲಿ ನಡೆದ ಇಂತಹ ಒಂದು ಪ್ರಯತ್ನವಾಗಿದೆ ಎಂದು ಹೇಳಿದರು.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದಿಗೆ ಕೈಗೊಂಡಿರುವ ನಿರ್ಣಯಗಳನ್ನು ಜಾರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದೇ ಸಂಧರ್ಭದಲ್ಲಿ ಪಕ್ಷವನ್ನು ಬಲಪಡಿಸಿ ಜನಪರ ಹೋರಾಟ ಮಾಡಬೇಕಾಗಿದೆ ಎಂದರು.
ವಿ.ಬಸವರಾಜು. ಸ್ವಾಗತಿಸಿ ಜಗದೀಶ್ ಸೂರ್ಯ ನಿರೂಪಿಸಿದರು. ಬೆಳ್ತೂರು ವೆಂಕಟೇಶ್ ವಂದಿಸಿದರು. ಬಹಿರಂಗ ಸಭೆಯಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಜಿಲ್ಲಾ ಸಮಿತಿ ಸದಸ್ಯರಾದ ಶಶಿಂದ್ರನ್ ಮತ್ತು ಹೆಚ್.ಎಸ್.ಸುನಂದ, ವಿ.ಬಸವರಾಜು ಕಲ್ಕುಣಿಕೆ, ಶಶಿಕುಮಾರ್, ಬೆಳ್ತೂರು ವೆಂಕಟೇಶ್ ಇದ್ದರು.
ವರದಿ: ವಿ. ಬಸವರಾಜು ಕಲ್ಕುಣಿಕೆ