ನಿರಂಕುಶ ವ್ಯವಸ್ಥೆಯಾಗುತ್ತಿರುವ ಆಧಾರ್ ಕಡ್ಡಾಯ ಕೊನೆಗಾಣಿಸಿ

ಆಧಾರ್ ಒಂದು ಸರ್ವಾಧಿಕಾರಶಾಹಿ ಸರ್ಕಾರದ ಕೈಗಳಲ್ಲಿ ದಮನದ ಮತ್ತೊಂದು ಅಸ್ತ್ರವಾಗುತ್ತಿದೆ.ಕಳೆದ 5 ವರ್ಷಗಳಿಂದ ಇದರ  ವಿರುದ್ಧ ಹೂಡಿರುವ ಅರ್ಜಿಗಳು ಸುಪ್ರಿಂ ಕೋರ್ಟ್ ಮುಂದೆ ಬಾಕಿಯಾಗುಳಿದಿವೆ. ನ್ಯಾಯಾಲಯ ಈ ಜೀವನ್ಮರಣ ಪ್ರಶ್ನೆಯನ್ನು ಪರಿಶೀಲಿಸುವಲ್ಲಿ ಉದಾಸೀನವಾಗಿದೆ. ಈ ಅವಧಿಯಲ್ಲಿ ಸರ್ಕಾರ ಆಧಾರನ್ನು ಒಂದು  ನಿರಂಕುಶ, ಕಡ್ಡಾಯ ವ್ಯವಸ್ಥೆಯಾಗಿ ಮಾಡುವತ್ತ ಮುಂದೊತ್ತಿಕೊಂಡು ಬಂದಿದೆ. ಈಗ ರಚಿಸಿರುವ  ಐವರು ನ್ಯಾಯಾಧೀಶರ ಸಂವಿಧಾನ ಪೀಠ ಈ ವಿಷಯದಲ್ಲಿ ಸಾಧ್ಯವಾದಷ್ಟು ಬೇಗನೇ ತೀರ್ಪು ಕೊಡಬೇಕಾಗಿದೆ. ಏಕೆಂದರೆ ಇದು ಜನಗಳಿಗೆ  ಮತ್ತು ದೇಶದಲ್ಲಿ ಪ್ರಜಾಸತ್ತಾತ್ಮಕ  ಸ್ವಾತಂತ್ರö್ಯಗಳಿಗೆ ಒಂದು ಜೀವನ್ಮರಣ ಸಂಗತಿಯಾಗಿದೆ.

“ಟ್ರಿಬ್ಸೂನ್” ಪತ್ರಿಕೆ ಜನವರಿ 4 ರಂದು ಪ್ರಕಟಿಸಿದ ತನಿಖಾ ವರದಿಯಲ್ಲಿ ಹೇಗೆ ತನ್ನ ವರದಿಗಾರರಿಗೆ 100 ಕೋಟಿ ಆಧಾರ್ ಸಂಖ್ಯೆಗಳ ವಿವರಗಳು ಸುಲಭದಲ್ಲಿ ಲಭ್ಯವಾದವು ಎಂದು ಪ್ರಕಟಿಸಿತು. ಅವರು 500 ರೂ. ಪೇಟಿಎಂ ಮುಖಾಂತರ ಪಾವತಿಸಿದಾಗ ಒಂದು ಗೇಟ್‌ವೇ ಸೃಷ್ಟಿಯಾಗಿ  ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆದರು. ಅದನ್ನು ಬಳಸಿ  ಆಕೆ ‘ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ’ (ಯುಐಡಿಎಐ)ನಲ್ಲಿ ಅಂದರೆ ಆಧಾರ್‍ ನಲ್ಲಿ ದಾಖಲಿಸಿಕೊಂಡ ಯಾವುದೇ ವ್ಯಕ್ತಿಯ ಹೆಸರು, ಪೋಟೊ, ದೂರವಾಣಿ ಸಂಖ್ಯೆ ಇಮೇಲ್ ಪಡೆಯುವುದು ಸಾಧ್ಯವಾಗಿದೆ.
ಬಯೋಮೆಟ್ರಿಕ್(ಬೆರಳುಗಳು, ಕಣ್ಣುರೆಪ್ಪೆ ಮುಂತಾದ ದೈಹಿಕ ) ಮಾಹಿತಿ ಲಭ್ಯವಾಗದಿದ್ದರೂ ಈ ಸ್ಫೋಟಕ ಪ್ರಕಟಣೆ ತಮ್ಮ ಅಧಾರ್ ಮಾಹಿತಿಗಳು ಅಭೇದ್ಯ ಎಂಬ ಯುಐಎಡಿಐ ಮತ್ತು ಕೇಂದ್ರ ಸರ್ಕಾರದ ನಿಲುವು ಸುಳ್ಳೆಂದು ಸಾಬೀತು ಮಾಡಿದೆ.

ಯುಪಿಎ ಸರ್ಕಾರ ಈ ಆಧಾರ್  ಯೋಜನೆಯನ್ನು ಪ್ರಾರಂಭಿಸಿತು. ಆಗಲೇ ಸಿಪಿಐ(ಎಂ) ಈ ವಿಷಯದಲ್ಲಿ ಹಲವಾರು ಆಕ್ಷೇಪಗಳನ್ನು ಎತ್ತಿತ್ತು. ಅವುಗಳಲ್ಲಿ ಒಂದು,  ಎರಡು ಅಮೇರಿಕನ್ ಕಂಪನಿಗಳು ಇದಕ್ಕೆ ಬೇಕಾದ ತಂತ್ರಾಂಶ ವಿನ್ಯಾಸವನ್ನು ಸಿದ್ಧಪಡಿಸಿದ್ದು ಮತ್ತು ಅವುಗಳೊಂದಿಗಿನ ಕಾಂಟ್ರಾಕ್ಟ್ ಪ್ರಕಾರ ಆ ಸಂಸ್ಥೆಗಳಿಗೆ ಸಂಗ್ರಹಿಸಿದ್ದ  ಎಲ್ಲ ಮಾಹಿತಿಕೋಶ ಲಭ್ಯವಾಗಿರುತ್ತದೆ.  ಆದ್ದರಿಂದ ಈಗಾಗಲೇ ಆಧಾರ್ ಕಾರ್ಡುದಾರರ ಮಾಹಿತಿಕೋಶ ಅಮೇರಿಕನ್ ಭದ್ರತಾ ಸಂಸ್ಥೆಗಳೊಂದಿಗೆ ಸಂಪರ್ಕ ಇರುವ ಈ ಎರಡು ಅಮೆರಿಕನ್ ಕಂಪನಿಗಳಿಗೆ  ಲಭ್ಯವಾಗಿದೆ.

ಈ ರೀತಿ ಸಂಗ್ರಹಿಸಿದ ಬೃಹತ್ ಪ್ರಮಾಣದ ಮಾಹಿತಿಕೋಶ ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಗೆ ಬಳಕೆಗೆ ದೊರೆಯುತ್ತದೆ ಎಂಬುದು ಮತ್ತೊಂದು ಆಕ್ಷೇಪಣೆ. ಈಗಾಗಲೇ ಸರ್ಕಾರದ ವೆಬ್ ಸೈಟ್‌ಗಳಲ್ಲಿ ಆಧಾರ್ ವಿವರಗಳು ಕಾಣಿಸುತ್ತಿರುವ  ಹಲವಾರು ನಿದರ್ಶನಗಳಿವೆ. ಟ್ರಿಬ್ಸೂನ್ ತನಿಖಾ ವರದಿ ‘ಆಧಾರ್’ ಭದ್ರತಾ ವ್ಯವಸ್ಥೆಯನ್ನು ಎಷ್ಟು ಸುಲಭವಾಗಿ ಬೇಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ಅಧಾರ್ ಬಯೋಮೆಟ್ರಿಕ್ ಮಾಹಿತಿಯ ದುರುಪಯೋಗವಾಗಿರುವ ಇನ್ನೊಂದು ಆಘಾತಕಾರಿ ನಿದರ್ಶನ ಕಳೆದ ತಿಂಗಳು ಹೊರಬಂದಿದೆ. ‘ಏರ್‌ಟೆಲ್’ ದೂರವಾಣಿ ನೆಟ್‌ವರ್ಕ್ ಸಂಸ್ಥೆಗೆ ಅದರ ಗ್ರಾಹಕರ ಮೊಬೈಲ್‌ಗಳನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲು ಅಧಿಕಾರ ನೀಡಲಾಗಿತ್ತು. ಅದು ಹಾಗೆ  ಮಾಡುವಾಗಲೇ ಗ್ರಾಹಕರ ಒಪ್ಪಿಗೆಯಿಲ್ಲದೇ ‘ಏರಟೆಲ್ ಪೇಮೆಂಟ್ ಬ್ಯಾಂಕ್’ನಲ್ಲಿ ಖಾತೆಯನ್ನು ತೆರೆಯಲು ದೊಡ್ಡ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಂಡಿದೆ.  ಫಲಾನುಭವಿಗಳ ಖಾತೆಗೆ ನೇರ ಪಾವತಿ ವ್ಯವಸ್ಥೆಯಲ್ಲಿ ಸಬ್ಸಿಡಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈಗಿರುವ ನಿಯಮಗಳ ಪ್ರಕಾರ ಪ್ರಕಾರ ಗ್ಯಾಸ್ ಸಿಲಿಂಡರ್‌ಗೆ ಸಿಗಬೇಕಿರುವ ಸಬ್ಸಿಡಿ ಮುಂತಾದವುಗಳನ್ನು ಅವರ ಹೆಸರಿನಲ್ಲಿ ತೆರೆದ ಇತ್ತೀಚಿನ ಬ್ಯಾಂಕಿನ ಖಾತೆಗೆ ಸಂದಾಯ ಮಾಡಲಾಗುತ್ತಿದೆ.

ಈ ಪ್ರಕಾರ ಏರಟೆಲ್ ಪೇಮೆಂಟ್ ಬ್ಯಾಂಕ್ ಇಂತಹ ಸಬ್ಸಿಡಿಗಳಿಂದ 190 ಕೋಟಿ ರೂ. ಹಣವನ್ನು ತನ್ನ ಗ್ರಾಹಕರ ಬ್ಯಾಂಕ್ ಖಾತೆಗಳಿಂದ  ಸಂಗ್ರಹಿಸಿದೆ.  ಇದು ಗ್ರಾಹಕರು ತಮ್ಮ ಮಾಮೂಲಿ ಖಾತೆಗೆ ಬರಬೇಕಿದ್ದ ಸಬ್ಸಿಡಿ ಸಂದಾಯವಾಗದಿದ್ದಾಗ ಬೆಳಕಿಗೆ ಬಂದಿರುತ್ತದೆ. ವಿಶಿಷ್ಟ ಗುರುತು ಪ್ರಾಧಿಕಾರ ಈಗ ಏರಟೆಲ್ ಪೇಮೆಂಟ್ ಬ್ಯಾಂಕ್ ನ್ನು ಅಮಾನತ್ತುಗೊಳಿಸಿ 2.5 ಕೋಟಿ ರೂ. ದಂಡವನ್ನು ವಿಧಿಸಿದೆ. ಆದರೆ ಈ ಮೋಸದ ಪ್ರಮಾಣವನ್ನು ಗುರುತು ಪ್ರಾಧಿಕಾರ ಕನಿಷ್ಟಕ್ಕಿಳಿಸಿದೆ.

ಸಿಪಿಐ(ಎಂ) ಮೊದಲಿಂದಲೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ರೇಷನ್, ಮತ್ತು ಸಾಮಾಜಿಕ ಭದ್ರತಾ ಸೌಕರ್ಯಗಳಿಗೆ ಆಧಾರ್ ಕಡ್ಡಾಯಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತ ಬಂದಿದೆ. ರೇಷನ್ ಸಾಮಗ್ರಿಗಳನ್ನು ಇದರಲ್ಲಿ ಬಯೋ ಮೆಟ್ರಿಕ್ ದಾಖಲಾತಿಯ ಮೂಲಕವೇ ಪಡೆಯಬೇಕಿದೆ. ರಾಜಸ್ಥಾನ್, ಜಾರ್ಖಂಡ್, ತೆಲಂಗಾಣದಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿರುವುದರಿಂದ ಲಕ್ಷಾಂತರ ಕುಟುಂಬಗಳು ರೇಷನ್ ಪಡೆಯುವುದರಿಂದ ವಂಚಿತರಾಗಿದ್ದಾರೆ. ರೇಷನ್ ಅಂಗಡಿಗಳಲ್ಲಿ ಬೆರಳಚ್ಚು ಗುರುತಿಸುವ ಯಂತ್ರಗಳು ಕೆಲಸ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಹಲವಾರು ಪ್ರಕರಣಗಳಲ್ಲಿ ರೇಷನ್ ಕಾರ್ಡಗಳನ್ನು ಆಧಾರನೊಂದಿಗೆ ಜೋಡಿಸಿರುವುದಿಲ್ಲ.

ಪರಿಣಾಮವಾಗಿ ಜಾರ್ಖಂಡ್‌ನ 11 ವರ್ಷದ ಸಂತೋಷಿ ಕುಮಾರಿ ಹಸಿವಿನಿಂದ ಸತ್ತ ದಾರುಣ ಘಟನೆ ನಡೆದಿದೆ. ಉತ್ತರಪ್ರದೇಶ ಮತ್ತಿತರ ಕಡೆಗಳಿಂದ ಇಂತಹ ಸಾವುಗಳ ಇತರ ವರದಿಗಳೂ ಬಂದಿವೆ. ಹೀಗೆ ರೇಶನ್‌ಗಾಗಿ ಆಧಾರ ಕಡ್ಡಾಯ ದೇಶದ ಬಡ ನಾಗರಿಕರ ಆಹಾರ ಭದ್ರತೆಗೆ   ಮಾರಕವಾಗಿರುತ್ತದೆ.

ಸರ್ಕಾರ ಈಗ ಆಧಾರ್ ಒತ್ತಾಯವನ್ನು ಜೀವನದ ಎಲ್ಲ ವಲಯಗಳಿಗೆ, ಹುಟ್ಟು, ಸಾವು, ನೋಂದಣಿಗೂ ವಿಸ್ತರಿಸುತ್ತಿದೆ. ಇದು ಎಂತಹ ಮಟ್ಟ ಮುಟ್ಟಿದೆಯೆಂದರೆ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ  ರೋಗಿಯನ್ನು ದಾಖಲು ಮಾಡಿಕೊಳ್ಳಲು ಕೂಡ  ಆಧಾರ್ ಕಾರ್ಡ್ ಕೇಳುತ್ತಾರೆ. ಆಧಾರ್ ಗುರುತು ಇಲ್ಲದಿದ್ದಲ್ಲಿ ವ್ಯಕ್ತಿಗಳು ನಾಗರಿಕರಾಗಿ ಉಳಿಯುವುದಿಲ್ಲ, ಅಸ್ತಿತ್ವ ರಹಿತರಾಗುತ್ತಾರೆ.

ಆಧಾರ್ ಒಂದು ಸರ್ವಾಧಿಕಾರಶಾಹಿ ಸರ್ಕಾರದ ಕೈಗಳಲ್ಲಿ ದಮನದ ಮತ್ತೊಂದು ಅಸ್ತçವಾಗುತ್ತದೆ. ನಾಗರೀಕರ ಖಾಸಗಿತನ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿ ಅವರ ಮೇಲೆ ಮೇಲೆ ನಿಗಾ ಇಡಲು ಸೌಕರ್ಯ ಮಾಡಿಕೊಡುತ್ತದೆ.  ಸರ್ಕಾರ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರದ ಧೋರಣೆ ಟ್ರಿಬ್ಸೂನ್ ಪತ್ರಿಕೆ ವರದಿಗಾರರ ಮೇಲೆ ಆಧಾರ್ ಭದ್ರತೆಯನ್ನು ಬೇಧಿಸಿದರೆಂದು ಮೊಕದ್ದಮೆ  ದಾಖಲಿಸಿರುವುದರಿಂದ ವ್ಯಕ್ತವಾಗುತ್ತದೆ.

ಆಧಾರ್ ದೋಷಪೂರ್ಣವಾದ ಅಪರಿಪೂರ್ಣ ವ್ಯವಸ್ಥೆ ಎಂದು  ಒಪ್ಪಿಕೊಳ್ಳುವುದರ ಬದಲು ಅದು ಸಂದೇಶವಾಹಕರ ಬೇಟೆಗೇ ಇಳಿದಿವೆ, ಪತ್ರಿಕಾ ಸ್ವಾತಂತ್ರ್ಯಯದ  ಮೇಲೆ ಹಲ್ಲೆ ಮಾಡುತ್ತಿವೆ.

ಈ ಕುರುಡುಗಲ್ಲಿಯಿಂದ ಹೊರಬರುವ ಏಕೈಕ ದಾರಿಯೆಂದರೆ ಎಲ್ಲ ಮೂಲಭೂತ ಸೇವೆಗಳಿಗೂ  ಆಧಾರ್ ಕಡ್ಡಾಯ ಮಾಡುವುದನ್ನು ನಿಲ್ಲಿಸುವುದು. ಸರ್ಕಾರ ಬ್ಯಾಂಕ್ ಖಾತೆಗಳಿಗೂ ಮತ್ತು ಮೊಬೈಲ್‌ಗೂ ಆಧಾರ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು.

ಕಳೆದ 5 ವರ್ಷಗಳಿಂದ ಆಧಾರ್ ವಿರುದ್ಧ ಹೂಡಿರುವ ಅರ್ಜಿಗಳು ಸುಪ್ರಿಂ ಕೋರ್ಟ್ ಮುಂದೆ ಬಾಕಿಯಾಗುಳಿದಿವೆ. ನ್ಯಾಯಾಲಯ ಈ ಜೀವನ್ಮರಣ ಪ್ರಶ್ನೆಯನ್ನು ಪರಿಶೀಲಿಸುವಲ್ಲಿ ಉದಾಸೀನವಾಗಿದೆ. ಈ ಅವಧಿಯಲ್ಲಿ ಸರ್ಕಾರ ಆಧಾರನ್ನು ಒಂದು  ನಿರಂಕುಶ, ಕಡ್ಡಾಯ ವ್ಯವಸ್ಥೆಯಾಗಿ ಮಾಡುವತ್ತ ಮುಂದೊತ್ತಿಕೊಂಡು ಬಂದಿದೆ. ಒಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು  ನವೆಂಬರ್ 2017 ರಲ್ಲಿ ರಚಿಸಲಾಗಿದೆ.

ಅದೀಗ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ನ್ಯಾಯಾಲಯ ಈ ವಿಷಯದಲ್ಲಿ ಸಾಧ್ಯವಾದಷ್ಟು ಬೇಗನೇ ತೀರ್ಪು ಕೊಡಬೇಕಾಗಿದೆ. ಏಕೆಂದರೆ ಇದು ಜನಗಳಿಗೆ  ಮತ್ತು ದೇಶದಲ್ಲಿ ಪ್ರಜಾಸತ್ತಾತ್ಮಕ  ಸ್ವಾತಂತ್ರ್ಯಯಗಳಿಗೆ ಒಂದು ಜೀವನ್ಮರಣ ಸಂಗತಿಯಾಗಿದೆ.

Leave a Reply

Your email address will not be published. Required fields are marked *