ತ್ರಿಪುರಾ ಚುನಾವಣೆಗೆ ವಿಶೇಷ ವೀಕ್ಷಕರ ನೇಮಕ ಏಕೆ?

ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಸಿಪಿಐ(ಎಂ) ನಿಯೋಗ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಎಸ್‍.ರಾಮಚಂದ್ರನ್‍ ಪಿಳ್ಳ ಮತ್ತು ಬೃಂದಾ ಕಾರಟ್‍ ತ್ರಿಪುರಾದಲ್ಲಿ ಮತದಾನದ ಮುನ್ನಾದಿನ , ಫೆಬ್ರುವರಿ 17ರಂದು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾ ಚುನಾವಣೆಗೆ ವಿಶೇಷ ವೀಕ್ಷಕರ ನೇಮಕದ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದರು, ಅವರಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದರು.

ಐಟಿಬಿಪಿ( ಭಾರತ-ಟಿಬೆಟ್‍ ಗಡಿ ಪೋಲೀಸ್‍)  ಡೈರೆಕ್ಟರ್ ಜನರಲ್‍ ಆರ್‍.ಕೆ.ಪಂಚಾನಂದ ಅವರನ್ನು ಫೆಬ್ರುವರಿ 18ರಂದು ನಡೆಯುವ ತ್ರಿಪುರಾ ವಿಧಾನಸಭಾ ಚುನಾವಣೆಗೆ ವಿಶೇಷ ವೀಕ್ಷಕರಾಗಿ ನೇಮಿಸಿರುವುದು ಒಂದು ಅಸಾಮಾನ್ಯ ಸಂಗತಿಯಾಗಿ ಕಾಣಿಸುತ್ತದೆ. ಅವರು ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಲ್ಲಿ ರಾಜ್ಯ ಬಿಜೆಪಿ ಮುಖಂಡರೊಂದಿಗೆ  ಪ್ರತ್ಯೇಕವಾಗಿ ಮಾತಾಡಿದರು ಎಂದು ಸ್ಥಳೀಯ ಟಿವಿ ಚಾನೆಲ್‍ಗಳು ಸುದ್ದಿ ಪ್ರಕಟಿಸಿವೆ. ಇದು ಜನಗಳ ನಡುವೆ ಗೊಂದಲ ಉಂಟುಮಾಡಿದೆ. ಆದ್ದರಿಂದ ಮುಖ್ಯ ಚುನಾವಣಾ ಆಯುಕ್ತರು ಮಧ್ಯಪ್ರವೇಶ ಮಾಡಿ ವಿಷಯವೇನು ಎಂಬುದನ್ನು ತ್ರಿಪುರಾದ ಜನತೆಗೆ ಸ್ಪಷ್ಟಗೊಳಿಸಬೇಕು ಎಂದು ಈ ಪತ್ರದಲ್ಲಿ ಕೋರಲಾಗಿದೆ.

ಇದಕ್ಕೆ ಸ್ಪಂದಿಸಿದ ಮುಖ್ಯ ಚುನಾವಣಾ ಆಯುಕ್ತರು, ಎಲ್ಲ ರಾಜಕೀಯ ಪಕ್ಷಗಳಿಗೆ ವಿಸೇಷ ವೀಕ್ಷಕರ ನೇಮಕ ಮತ್ತು ಕೇಂದ್ರೀಯ ಚುನಾವಣಾ ಆಯೋಗ ನಿರ್ಧರಿಸಿದಂತೆ ಅವರ ಕೆಲಸದ ವ್ಯಾಪ್ತಿಯ ಬಗ್ಗೆ ಲಿಖಿತ ಮಾಹಿತಿಯನ್ನು ಕೊಡಲಾಗುವುದು ಎಂದು ಭರವಸೆ ನೀಡಿದರು , ಹಾಗೂ ವಿಶೇಷ ವೀಕ್ಷಕರು ತ್ರಿಪುರಾದ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡಿದ ಸಂದರ್ಭದ ಬಗ್ಗೆ ಒಂದು ಲಿಖಿತ ವರದಿಯನ್ನು  ಕೇಳಲಾಗುವುದು ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *