ಬಿಹಾರದ ಹೆಚ್ಚಿನ ಜಿಲ್ಲೆಗಳಲ್ಲಿ ಕೋಮುವಾದಿ ಗಲಭೆಗಳು ಮತ್ತು ಇತರ ಘಟನೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಿತಿಶ್ ಕುಮಾರ್’ಮಹಾಗಟ್ ಬಂಧನ್’ಗೆ ವಿಶ್ವಾಸದ್ರೊಹ ಮಾಡಿ ಬಿಜೆಪಿ ರಾಜ್ಯ ಸರಕಾರದೊಳಕ್ಕೆ ಬಂದಂದಿನಿಂದ ಇಂತಹ ಕೋಮುವಾದಿ ಧ್ರುವೀಕರಣಕ್ಕೆ ಅಧಿಕೃತ ಕೃಪಾಪೋಷಣೆ ಸಿಗುತ್ತಿದೆ. ಕೇಂದ್ರಿಯ ಮಂತ್ರಿಗಳು ದೇಶದೆಲ್ಲೆಡೆಗಳಲ್ಲಿ-ಬಿಹಾರ, ಬಂಗಾಲ, ಕರ್ನಾಟಕ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿ- ಗಲಭೆಗಳನ್ನು ಸೃಷ್ಟಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಮಾರ್ಚ್ 28ರಿಂದ 30 ರವರೆಗೆ ಸಭೆ ಸೇರಿದ ಕೇಂದ್ರ ಸಮಿತಿ ಮೂರುದಿನಗಳ ಚರ್ಚೆಗಳ ನಂತರ ಪ್ರಕಟಿಸಿದ ಹೇಳಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಮುಂದುವರೆದು ಅದು, ಬಿಜೆಪಿ ಇತ್ತಿÃಚಿನ ಉಪಚುನಾವಣೆಗಳಲ್ಲಿ ತೀವ್ರ ಹೊಡೆತ ತಿಂದ ನಂತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಇಂತಹ ದಾಳಿಗಳನ್ನು ನಡೆಸಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದೆ ಎಂಬುದು ಸ್ಪಷ್ಟ ಎಂದಿದೆ.
ಪಶ್ಚಿಮ ಬಂಗಾಲದಲ್ಲಿ ಆರೆಸ್ಸೆಸ್ ನೇತೃತ್ವದ ಸಂಘÀಟನೆಗಳು ಮತ್ತು ಬಿಜೆಪಿ ರಾಮನವಮಿಯನ್ನು ಹಿಂಸಾತ್ಮಕ ರೀತಿಯಲ್ಲಿ ಆಚರಿಸಿದ ರೀತಿಯಿಂದಾಗಿ ಆ ರಾಜ್ಯದ ಹಲವು ಭಾಗಗಳಲ್ಲಿ ಕೋಮುವಾದಿ ಗಲಭೆಗಳು ಆರಂಭವಾಗಿವೆ. ಕಳೆದ ವರ್ಷದಿಂದ ಈ ಆಚರಣೆಯ ಒಂದು ಹೊಸ ಲಕ್ಷಣವೆಂದರೆ ಶಸ್ತ್ರಾಸ್ತ್ರಗಳ ಬಹಿರಂಗ ಪ್ರದರ್ಶನ. ಇದು ದೇಶದ ಇತರೆಡೆಗಳಲ್ಲಿ ಹಿಂದುತ್ವ ಶಕ್ತಿಗಳು ಹರಿಯಬಿಟ್ಟಿರುವ ಕೋಮುವಾದಿ ಧ್ರುವೀಕರಣದ ದುಷ್ಟ ಪ್ರಯತ್ನಗಳ ಭಾಗ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೆಷಿಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ 131 ದೊಂಬಿ ಕೇಸುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಇದು ಈ ದೊಂಬಿಗಳಿಂದ ಸಂಕಷ್ಟಕ್ಕಿÃಡಾದವರನ್ನು ಹೆಚ್ಚಿನ ಅಪಾಯಗಳಿಗೆ ಮತ್ತು ಅನಿಶ್ಚಿತತೆಗಳಿಗೆ ತೆರೆದು ಕೊಟ್ಟಿದೆ. ಕಾನೂನನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವ ಬದಲು ರಾಜ್ಯ ಸರಕಾರ ಇಂತಹ ಕ್ರಿಮಿನಲ್ಗಳಿಗೆ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಿದ್ದಕ್ಕಾಗಿ ಇನಾಮು ಕೊಡುತ್ತಿದೆ ಎಂದು ಖೇದ ವ್ಯಕ್ತಪಡಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಬಿಜೆಪಿಯ ಇಂತಹ ಪ್ರಯತ್ನಗಳನ್ನು ಬಲವಾಗಿ ಖಂಡಿಸುತ್ತ, ಸರಕಾರಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಾನೂನನ್ನು ಎತ್ತಿ ಹಿಡಿಯಬೇಕು ಮತ್ತು ತಪ್ಪಿತಸ್ಥರನ್ನು, ದ್ವೆಷ ಹರಡುತ್ತಿರುವ ಕೇಂದ್ರ ಮಂತ್ರಿಗಳನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.
ತ್ರಿಪುರಾ ಹಿಂಸಾಚಾರ-ಅವಿರತವಾಗಿ ಸಾಗಿದೆ
ತ್ರಿಪುರಾದಲ್ಲಿ ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಆರೆಸ್ಸೆಸ್-ಬಿಜೆಪಿ ಚುನಾವಣೋತ್ತರ ಹಿಂಸಾಚಾರ ನಿಲ್ಲದೆ ಮುಂದುವರೆಯುತ್ತಿದೆ. ಸುಮಾರು ಒಂದು ಸಾವಿರ ಎಡ ಕಾರ್ಯಕರ್ತರ ಮೇಲೆ ದೈಹಿಕವಾಗಿ ಗುರಿಯಿಡಲಾಗಿದೆ. 1699 ಮನೆಗಳನ್ನು ಲೂಟಿ ಮಾಡಲಾಗಿದೆ, 450ಕ್ಕೂ ಹೆಚ್ಚು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ, 800ಕ್ಕೂ ಹೆಚ್ಚು ಪಕ್ಷದ ಕಚೇರಿಗಳ ಮೇಲೆ ದಾಳಿ, ಲೂಟಿ ಮಾಡಲಾಗಿದೆ, ಸುಟ್ಟು ಹಾಕಲಾಗಿದೆ ಮತ್ತು 134 ಎಡ ಸಾಮೂಹಿಕ ಸಂಘಟನೆಗಳ ಕಚೇರಿಗಳನ್ನು ಬಿಜೆಪಿ ಆಕ್ರಮಿಸಿಕೊಂಡಿದೆ. ಎಡ ಕಾರ್ಯಕರ್ತರನ್ನು ಮನಬಂದಂತೆ ಬಂಧಿಸುವುದು ಮತ್ತು ಸುಳ್ಳು ಕೇಸುಗಳನ್ನು ಹೇರುವುದು ಮುಂದುವರೆದಿದೆ.
ಸಿಪಿಐ(ಎಂ) ಕೇಂದ್ರ ಸಮಿತಿ ತ್ರಿಪುರಾದ ಘಟಕದೊಂದಿಗೆ ಮತ್ತು ಈ ದಾಳಿಗಳನ್ನು ವೀರೋಚಿತವಾಗಿ ಎದುರಿಸುತ್ತಿರುವ ಸಂಗಾತಿಗಳೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸಿದೆ ಮತ್ತು ಈ ರಾಜ್ಯದಲ್ಲಿ ಸಿಪಿಐ(ಎಂ) ಮತ್ತು ಎಡ ಬೆಂಬಲಿಗರ ಮೇಲೆ ಆರೆಸ್ಸೆಸ್/ಬಿಜೆಪಿ ದಾಳಿಗಳ ವಿರುದ್ಧ ದೇಶವ್ಯಾಪಿ ಸೌಹಾರ್ದಕ್ಕೆ ಕರೆ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳು ಎಡ ಬೆಂಬಲಿಗರಿಗೆ ಕಿರುಕುಳ ಕೊಡುವುದು, ಬೆದರಿಸುವ ಬದಲು ದೇಶದ ಕಾನೂನನ್ನು ಎತ್ತಿ ಹಿಡಿಯಬೇಕು ಎಂದು ಅದು ಕರೆ ನೀಡಿದೆ.
ಕರ್ನಾಟಕದಲ್ಲಿ ಚುನಾವಣೆ
ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆಗಳನ್ನು ಪ್ರಕಟಿಸಿದ್ದು, ಈ ರಾಜ್ಯದಲ್ಲಿನ ರಾಜಕೀಯ ಸನ್ನಿವೇಶವನ್ನು ಕೇಂದ್ರ ಸಮಿತಿ ಚರ್ಚಿಸಿತು. ಈ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಿಪಿಐ(ಎಂ) ಅಭ್ಯರ್ಥಿಗಳ ಪಟ್ಟಿಗೆ ಕೇಂದ್ರ ಸಮಿತಿ ಮಂಜೂರಾತಿ ನೀಡಿತು.
ರೈತರ ಹೋರಾಟಗಳು-ಬಿಜೆಪಿಯ ವಿಶ್ವಾಸದ್ರೊಹ
ಮಹಾರಾಷ್ಟç: ಅಖಿಲ ಭಾರತ ಕಿಸಾನ್ ಸಭಾ ಸಂಘಟಿಸಿದ್ದ ಕಿಸಾನ್ ಲಾಂಗ್ ಮಾರ್ಚ್ ರಾಷ್ಟçವ್ಯಾಪಿ ಪ್ರಭಾವ ಬೀರಿದೆ. ಮಹಾರಾಷ್ಟç ರಾಜ್ಯ ಸರಕಾರ ಈ ಹೋರಾಟದಲ್ಲಿ ಎತ್ತಿದ ಫಲದಾಯಕ ಬೆಲೆಗಳು, ಪೆನ್ಶನ್, ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿ, ಸಾಲಗ್ರಸ್ತ ರೈತರಿಗೆ ಸಾಲಮನ್ನಾ ಮುಂತಾದ ಬೇಡಿಕೆಗಳ ಮೇಲೆ ಮಹಾರಾಷ್ಟç ಸರಕಾರ ಒಂದು ಲಿಖಿತ ಒಪ್ಪಂದಕ್ಕೆ ಬರುವಂತೆ ಮಾಡಲಾಯಿತು.
ಈ ಲಾಂಗ್ ಮಾರ್ಚ್ ಸುಮಾರು 25000 ರೈತರೊಂದಿಗೆ ಮಾರ್ಚ್ 6ರಂದು ಆರಂಭವಾಯಿತು. ಅದು ಮಾರ್ಚ್ 12ರಂದು ಮುಂಬೈ ತಲುಪುವ ವೇಳೆಗೆ 50,000ನ್ನೂ ಮೀರಿತ್ತು. ಈ ಹೋರಾಟದ ಒಂದು ಸಕಾರಾತ್ಮಕ ಸಂಗತಿಯೆಂದರೆ ಮಹಾರಾಷ್ಟçದ ಎಲ್ಲ ಜನವಿಭಾಗಗಳಿಂದ, ಮುಂಬೈಯ ಮೇಲ್ವರ್ಗಗಳಿಂದಲೂ ಸಹಾನುಭೂತಿಪರ ಸ್ಪಂದನೆಯನ್ನು ಪಡೆಯಿತು. ಹಲವು ಸಂಘಟನೆಗಳು ತಾವೇ ಮುಂದೆ ಬಂದು ಆಹಾರ, ನೀರು, ಚಪ್ಪಲಿಗಳು ಮತ್ತು ವೈದ್ಯಕೀಯ ನೆರವು ನೀಡಿದವು. ಈ ಲಾಂಗ್ ಮಾರ್ಚ್ಗೆ ದೊರೆತ ವ್ಯಾಪಕ ಮಾಧ್ಯಮ ಕವರೇಜ್ ಕೂಡ ಸಹಾನುಭೂತಿಪರ ಸ್ಪಂದನೆ ಗಳಿಸುವಲ್ಲಿ ಒಂದು ಪಾತ್ರವನ್ನು ವಹಿಸಿತು.
ರಾಜಸ್ತಾನ: ರಾಜಸ್ತಾನದಲ್ಲಿ ರೈತ ಹೋರಾಟ ಬಿಜೆಪಿ ಸರಕಾರದಿಂದ ತೀವ್ರ ದಮನವನ್ನು ಎದುರಿಸಿತು. ದೊಡ್ಡ ಪ್ರಮಾಣದಲ್ಲಿ ಬಂಧನಗಳು ನಡೆದವು, ನಮ್ಮ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಯಿತು. ಸಪ್ಟಂಬರ್ 2017ರಲ್ಲಿ ನಡೆಸಿದ ಹೋರಾಟದಿಂದಾಗಿ ನೀಡಿದ ಭರವಸೆಯನ್ನು ಈಡೇರಿಸದೆ ರಾಜ್ಯಸರಕಾರ ವಿಶ್ವಾಸದ್ರೊÃಹ ಬಗೆಯಿತು. ಈ ವರ್ಷ ಫೆಬ್ರುವರಿಯಲ್ಲಿ ಕೊನೆಗೂ ಸರಕಾರ ರಾಜಸ್ತಾನದ ಶೇಖಾವತಿ ಪ್ರದೇಶವನ್ನು ಅಸ್ತವ್ಯಸ್ತಗೊಳಿಸಿದ ಮತ್ತು ಇಡೀ ರಾಜ್ಯವನ್ನು ತಟ್ಟಿದ ದೀರ್ಘ ಹೋರಾಟದ ನಂತರ ಒಪ್ಪಬೇಕಾಗಿ ಬಂತು.
ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ-ಮತ್ತೊಂದು ಹಗರಣ
ಬಿಜೆಪಿ ಆಳ್ವಿಕೆಯಲ್ಲಿ ಪರೀಕ್ಷೆಗಳಿಗೆ ಸಂಬಂಧಪಟ್ಟ ವಿವಿಧ ಹಗರಣಗಳು ಆಗಾಗ ಬಯಲಾಗುತ್ತಿವೆ. ವ್ಯಾಪಂ ಮತ್ತು ಎಸ್ಎಸ್ಸಿ ಹಗರಣಗಳ ನಂತರ ಈಗ 10ನೇ ಮತ್ತು 12ನೇ ತರಗತಿಯ ಸಿಬಿಎಸ್ಇ(ಕೇಂದ್ರಿಯ ಮಾಧ್ಯಮಿಕ ಪರೀಕ್ಷಾ ಮಂಡಳಿ) ಪರೀಕ್ಷೆಗಳ ಇನ್ನೊಂದು ಹಗರಣ ಬೆಳಕಿಗೆ ಬಂದಿದೆ. ಇದು ಈ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ತಟ್ಟುವ ಹಗರಣ. ಪ್ರಶ್ನೆಪತ್ರಿಕೆಗಳು ಸೋರಿವೆ ಎಂಬುದನ್ನು ಸಿಬಿಎಸ್ಇ ಒಪ್ಪಿಕೊಂಡಿದೆ. ಇದು ಹತ್ತನೇ ತರಗತಿಯ 16.38 ಲಕ್ಷ ವಿದ್ಯಾರ್ಥಿಗಳು ಮತ್ತು ಹನ್ನೆರಡನೇ ತರಗತಿಯ 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ತಟ್ಟಿದೆ.
ಸಿಬಿಎಸ್ಇ ಸುಮಾರು ಎರಡು ವರ್ಷಗಳ ವರೆಗೂ ಮುಖ್ಯಸ್ಥರಿಲ್ಲದೆ ಇತ್ತು. ಈ ಮಹತ್ವದ ಸಂಸ್ಥೆಗೆ 2017ರಲ್ಲಷ್ಟೆÃ ಗುಜರಾತಿನಿಂದ ಒಬ್ಬರನ್ನು ಸಿಇಒ(ಮುಖ್ಯ ಕಾರ್ಯಕಾರಿ ಅಧಿಕಾರಿ)ರನ್ನು ನೇಮಿಸಲಾಯಿತು.
ಈ ವಿದ್ಯಾರ್ಥಿಗಳಿಗೆ ಸಂಕಟ ತರುವುದಕ್ಕೆ ಹೊಣೆಯಾದ ಎಲ್ಲರನ್ನೂ ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.
ಅವಿಶ್ವಾಸ ಠರಾವು-ಬಿಜೆಪಿ ಇಬ್ಬಂದಿತನ ಬಯಲು
ಎರಡು ವಾರಗಳು ಕಳೆದರೂ ಲೋಕಸಭೆ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷ ಮಂಡಿಸಿರುವ ಅವಿಶ್ವಾಸ ಠರಾವುಗಳನ್ನು ಪರಿಶೀಲಿಸದಂತೆ ತಡೆಯಲಾಗಿದೆ. ತೆಲುಗು ದೇಶಂ ಪಕ್ಷ ಆಂಧ್ರಪ್ರದೇಶಕ್ಕೆ ಆಶ್ವಾಸನೆ ನೀಡಿದ ವಿಶೇಷ ಸ್ಥಾನಮಾನವನ್ನು ನೀಡಲು ಬಿಜೆಪಿ ನಿರಾಕರಿಸಿದ್ದರಿಂದ ಎನ್ಡಿಎ ಮೈತ್ರಿಕೂಟದಿಂದ ಹೊರಗೆ ಬಂದಿತು. ಈ ವಿಷಯದ ಮೇಲೆ ವೈಎಸ್ಆರ್ ಕಾಂಗ್ರೆಸ್ ಬಿಜೆಪಿಯಿಂದ ತನ್ನನ್ನು ದೂರವಿರಿಸಿಕೊಂಡಿತು. ಇತರ ಪ್ರತಿಪಕ್ಷಗಳೂ ಸ್ವತಂತ್ರವಾಗಿ ಅವಿಶ್ವಾಸ ಠರಾವುಗಳನ್ನು ಮಂಡಿಸಿವೆ. ಸಿಪಿಐ(ಎಂ) ಈ ಕುರಿತ ಚರ್ಚೆಯಲ್ಲಿ ಸರಕಾರದ ಸರ್ವತೋಮುಖ ವಿಫಲತೆ ಮತ್ತು ಸಂಸದೀಯ ಜವಾಬುದಾರಿಕೆಯಿಂದ ತಪ್ಪಿಸಿಕೊಳ್ಳುವುದನ್ನು ಎತ್ತಿ ತೋರುವುದಾಗಿ ಹೇಳಿದೆ.
ಸಂಸತ್ತಿನ ಕಲಾಪಗಳನ್ನು ನಡೆಸುವಲ್ಲಿ ಬಿಜೆಪಿಯ ಇಬ್ಬಂದಿತನ ಮತ್ತು ಅದರ ಪ್ರಜಾಪ್ರಭುತ್ವ-ವಿರೋಧಿ ಚಾರಿತ್ರ್ಯ ಸಂಪೂರ್ಣವಾಗಿ ಬಯಲಾಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ. ಏಕೆಂದರೆ ಅದೇ ಲೋಕಸಭೆಗೆ ಸದನದಲ್ಲಿ ವ್ಯವಸ್ಥೆಇಲ್ಲದಿದ್ದಾಗ ಯಾವುದೇ ಚರ್ಚೆಯಿಲ್ಲದೆ ಗದ್ದಲಗಳ ನಡುವೆಯೇ ಭಾರತದ ಕ್ರೊÃಡೀಕೃತ ನಿಧಿಯಿಂದ 10ಲಕ್ಷ ಕೋಟಿ ರೂ.ಗಳನ್ನು ಬಳಸಲು ಸರಕಾರಕ್ಕೆ ಅನುಮತಿ ನೀಡುವ ಹಣಕಾಸು ಮಸೂದೆಯನ್ನು ಪಾಸು ಮಾಡಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಮತ್ತು ಜವಾಬುದಾರಿಕೆಯನ್ನು ಬುಡಮೇಲು ಮಾಡಿರುವ ರೀತಿಯಿದು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.
ಕಾರ್ಪೊರೇಟ್ಗಳ ಪರವಾದ ಹೊಸ ಕಾರ್ಮಿಕ ಕಾನೂನುಗಳು
ಖಾಸಗೀ ವಲಯದಾದ್ಯಂತ ನಿಗದಿತ ಅವಧಿಯ ಉದ್ಯೊಗ ಎಂಬುದನ್ನು ತರಲು ನಿರ್ಧರಿಸಿರುವುದನ್ನು ಸಿಪಿಐ(ಎಂ) ಕೇಂದ್ರಸಮಿತಿ ಬಲವಾಗಿ ಖಂಡಿಸಿದೆ. ಈ ಮೂಲಕ ಇನ್ನು ಮುಂದೆ ದುಡಿಯುವ ಜನಗಳಿಗೆ ಯಾವುದೇ ಕಾಯಂ ಉದ್ಯೊÃಗ ಮತ್ತು ಕೆಲಸದ ಭದ್ರತೆಯ ಸಾಧ್ಯತೆಗಳೇ ಇಲ್ಲದಂತೆ ಮಾಡಲಾಗಿದೆ. ಇದರಿಂದ ಸಾರಾಸಗಟು ಕಾಂಟ್ರಾಕ್ಟಿÃಕರಣ ನಡೆಯುವಂತೆ ಮಾಡಲಾಗಿದೆ. ಕಾರ್ಮಿಕವರ್ಗ ಹೋರಾಟಗಳ ಮೂಲಕ ಗಳಿಸಿದ ಹಕ್ಕುಗಳನ್ನು ಕಳ್ಳತನದಿಂದ ವಿದೇಶಿ ಮತ್ತು ದೇಶೀ ಕಾರ್ಪೊರೇಟ್ಗಳ ಹಿತ ಸಾಧಿಸಲಿಕ್ಕಾಗಿ ಬದಲಿಸಲಾಗುತ್ತಿದೆ. ಕಾರ್ಮಿಕ ಸಂಘಗಳು ಇದನ್ನು ವಿರೋಧಿಸಿ ಯೋಜಿಸಿರುವ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಕೇಂದ್ರ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
ಹಣಕಾಸು ಆಯೋಗ-ಪರಿಶೀಲನಾ ಶರತ್ತುಗಳ ಪರಿಷ್ಕರಣೆ
15ನೇ ಹಣಕಾಸು ಆಯೋಗದ ಪರಿಶೀಲನೆಗೆ ವಿಧಿಸಿರುವ ಶರತ್ತುಗಳನ್ನು ಪರಿಷ್ಕರಿಸಬೇಕು ಎಂದು ಸಿಪಿಐ(ಎಂ) ಕೇಂದ್ರಸಮಿತಿ ಆಗ್ರಹಿಸಿದೆ. ಈಗಾಗಲೇ ದಕ್ಷಿಣದ ರಾಜ್ಯಗಳ ಹಣಕಾಸು ಮಂತ್ರಿಗಳು ತಮ್ಮ ರಾಜ್ಯಗಳಿಗೆ ಪ್ರತಿಕೂಲವಾಗಿ ತಟ್ಟುವ ಪ್ರಶ್ನೆಯನ್ನು ಎತ್ತಿದ್ದು ಇವನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅದು ಹೇಳಿದೆ.
ಪರಿಶಿಷ್ಟ ಜಾತಿ/ಬುಡಕಟ್ಟುಗಳನ್ನು ಕುರಿತ ತೀರ್ಪಿಗೆ ಸವಾಲು
ಸುಪ್ರಿಂ ಕೋರ್ಟಿನ ಪೀಠವೊಂದು ದೌರ್ಜನ್ಯ ತಡೆ ಕಾನೂನಿನ ಅಂಶಗಳನ್ನು ದುರ್ಬಲಗೊಳಿಸುವ ತೀರ್ಪನ್ನು ನೀಡಿದೆ. ಈ ತೀರ್ಪು ಪ್ರತಿದಿನ ದಲಿತರ ಮೇಲೆ ಜಾತಿ ದಮನ, ಕಿರುಕುಳ ಮತ್ತು ಜಾತಿ ಅತ್ಯಾಚಾರ ನಡೆಸಲಾಗುತ್ತಿದೆ ಎಂಬ ವಾಸ್ತವವನ್ನು ಉಪೇಕ್ಷಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಈ ಕಾಯ್ದೆಯ ಅಡಿಯಲ್ಲಿ ಆಪಾದನೆಗೊಳಗಾಗುವವರ ಬಂಧನ ಮತ್ತು ವಿಚಾರಣೆ ಸುಮಾರಾಗಿ ಅಸಾಧ್ಯವೇ ಆಗುವಂತೆ ಈ ತೀರ್ಪು ಮಾಡಿದೆ ಎಂದು ಹೇಳಿದೆ.
ಒಬ್ಬ ಸಾರ್ವಜನಿಕ ಸೇವಕನಿಗೆ ನಿರೀಕ್ಷಣಾ ಜಾಮಿನು ಪಡೆಯಲು ಇದ್ದ ನಿರ್ಬಂಧಗಳನ್ನು ತೆಗೆದು ಆತನ ಮೇಲಧಿಕಾರಗಳ ಮಂಜೂರಾತಿ ನಂತರವಷ್ಟೆ ಕ್ರಮ ವಹಿಸಲು ಸಾಧ್ಯವಾಗುವಂತೆ ಮಾಡಲಾಗಿದೆ. ಕೇಂದ್ರ ಸರಕಾರ ಈ ತೀರ್ಪಿಗೆ ಸವಾಲು ಹಾಕಬೇಕು, ಈ ತೀರ್ಪಿನ ಮರುಪರಿಶೀಲನೆ ನಡೆಸುವಂತೆ ಸುಪ್ರಿಂ ಕೊರ್ಟಿನ ದೊಡ್ಡ ಪೀಠವೊಂದಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.
ಖಾಸಗಿತನದ ಉಲ್ಲಂಘನೆ ತಡೆಯಲು ಒಂದು ಕಾನೂನು ಚೌಕಟ್ಟು
ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲದ ವೇದಿಕೆಗಳಲ್ಲಿನ ಮಾಹಿತಿಗಳನ್ನು ಮತದಾರರ ಮೇಲೆ ಪ್ರಭಾವ ಬೀರಲು ಬಳಸಲಾಗುತ್ತಿದೆ ಎಂದು ಇತ್ತಿÃಚೆಗೆ ಬಯಲಿಗೆ ಬಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಮತ್ತು ವ್ಯಕ್ತಿಯ ಖಾಸಗಿತನಕ್ಕೆ ಕುತ್ತು ಬಂದಿರುವುದನ್ನು ತೋರಿಸಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ. ಈ ರೀತಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಳಸುವ ಮಾಹಿತಿಗಳನ್ನು ಮಾರಿದ್ದಕ್ಕಾಗಿ ಫೇಸ್ಬುಕ್ ಸಾರ್ವಜನಿಕ ಕ್ಷಮೆ ಕೇಳಿದೆ. ತುರ್ತಾಗಿ ಹೊಸ ಕಾನೂನುಗಳನ್ನು ತಂದು ನಾಗರಿಕರ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಮುಂದಾಗಬೇಕು, ನಮ್ಮ ದೇಶದಲ್ಲಿ ಒಂದು ಮೂಲಭೂತ ಹಕ್ಕಾಗಿರುವ ಖಾಸಗಿತನದ ರಕ್ಷಣೆಗೆ ಒಂದು ಕಾನೂನು ಸಂರಚನೆಯನ್ನು ತುರ್ತಾಗಿ ರೂಪಿಸಬೇಕು ಎಂದು ಕೇಂದ್ರ ಸಮಿತಿ ಆಗ್ರಹಿಸಿದೆ.
ಈಗ ಬಯಲಾಗಿರುವ ಸಂಗತಿಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗೂಗಲ್ನೊಂದಿಗೆ ಕೈಜೋಡಿಸುವ ಬಗ್ಗೆ ಮತ್ತು ಫೇಸ್ಬುಕ್ನ್ನು ತನ್ನ ಸಂದೇಶ ಪಸರಿಸುವುÀದಕ್ಕೆ ಬಳಸುವ ಬಗ್ಗೆ ತನ್ನ ಕಣ್ನೊÃಟವನ್ನು ಗಂಭೀರವಾಗಿ ಮರುಪರಿಶೀಲಿಸಬೇಕು ಎಂದೂ ಕೇಂದ್ರ ಸಮಿತಿ ಆಗ್ರಹಿಸಿÀದೆ. ಏಕೆಂದರೆ ಈ ವೇದಿಕೆಗಳು ಮತದಾರರ ಮಾಹಿತಿಗಳನ್ನು ಕ್ರೊಡೀಕರಿಸಿ ಅವನ್ನು ಹಣಬಲÀವಿರುವ ಪಕ್ಷಗಳಿಗೆ ಚುನಾವಣೆಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ಹೊರಗುತ್ತಿಗೆ ನೀಡಲು ಬಳಸಬಹುದು. ಇದು ನಮ್ಮ ಪ್ರಜಾಪ್ರಭುತ್ವದ ಸಾರವನ್ನೆÃ ಬುಡಮೇಲು ಮಾಡುತ್ತದೆ ಎಂದು ಅದು ಹೇಳಿದೆ.
ಪ್ರಧಾನ ಮಂತ್ರಿಗಳ ಆಪ್ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಅವುಗಳ ದುರುಪಯೋಗಕ್ಕೆ ಬಳಕೆಯಾಗುತ್ತಿದೆ ಎಂಬ ಗಂಭೀರ ಆಪಾದನೆಗಳಿವೆ. ಇಂತಹ ಕಾರ್ಯಾಚರಣೆಗಳನ್ನು ಸಂಬಂಧಪಟ್ಟ ಕಂಪನಿಗಳು ಹೇಗೆ ನಡೆಸುತ್ತಿವೆÉ ಹಾಗೂ ಅವರ ಗಿರಾಕಿಗಳು ಯಾರು ಎಂಬುದನ್ನು ಕಂಡು ಹಿಡಿಯಲು ಒಂದು ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂದು ಕೇಂದ್ರ ಸಮಿತಿ ಆಗ್ರಹಿಸಿದೆ.
ಸಿಪಿಐ(ಎಂ)ನ 22ನೇ ಮಹಾಧಿವೇಶನ
ಪೊಲಿಟ್ಬ್ಯುರೊ ಸಲ್ಲಿಸಿದ ರಾಜಕೀಯ-ಸಂಘಟನಾತ್ಮಕ ವರದಿಯ ಕರಡನ್ನು ಕೇಂದ್ರ ಸಮಿತಿ ಚರ್ಚಿಸಿತು. ಇದನ್ನು ಹೈದರಾಬಾದಿನಲ್ಲಿ ಎಪ್ರಿಲ್ 18 ರಿಂದ 22ರವರೆಗೆ ನಡೆಯಲಿರುವ 22ನೇ ಮಹಾಧಿವೇಶನದಲ್ಲಿ ಮಂಡಿಸಲಾಗುವುದು.
ಕೇಂದ್ರ ಸಮಿತಿ ಮಹಾಧಿವೇಶನದ ಸಿದ್ಧತೆಗಳ ಬಗ್ಗೆ ತೆಲಂಗಾಣ ರಾಜ್ಯ ಸಮಿತಿಯ ವರದಿಗಳನ್ನು ಆಲಿಸಿತು.