ಕರ್ನಾಟಕ ಚುನಾವಣೆಗಳು: ಬಿಜೆಪಿ ಸದ್ಯಕ್ಕಂತೂ ನಂಬರ್ ಒನ್

ಜಾಹೀರಾತು ಖರ್ಚಿನಲ್ಲೂ-ಕ್ರಿಮಿನಲ್‍ ದಾಖಲೆಯ ಅಭ್ಯರ್ಥಿಗಳಲ್ಲೂ

ಕಳೆದ ಎರಡು ವಾರಗಳು ಕರ್ನಾಟಕದ ಮಾಧ್ಯಮಗಳಿಗಂತೂ ನಿಜಕ್ಕೂ ಅಚ್ಚೇ ದಿನ್. ರಾಜ್ಯದ ಎಲ್ಲ ದೈನಿಕಗಳಲ್ಲಿ ಮುಖಪುಟಗಳ ಪ್ರತಿದಿನದ ಮಾಸ್ಟ್ ಗಳಲ್ಲೂ ಮತ್ತು ಎಲ್ಲ ಟಿವಿ ಚಾನಲ್‍ಗಳಲ್ಲೂ ಬಿಜೆಪಿ ಜಾಹೀರಾತುಗಳದ್ದೇ ದರಬಾರು. ನ್ಯೂಸ್‍ಲಾಂಡ್ರಿ ವೆಬ್‍ ಪತ್ರಿಕೆ ಕಲೆ ಹಾಕಿದ ಮಾಹಿತಿಯ ಪ್ರಕಾರ  ಬಿಜೆಪಿಯ ಒಟ್ಟು ಜಾಹಿರಾತು ಬಜೆಟ್‍ 300ಕೋಟಿ ರೂ. ಕಾಂಗ್ರೆಸ್‍ನದ್ದು 50-60 ಕೋಟಿ ರೂ. ಮತ್ತು ಜನತಾಧಳದ್ದು 10 ಕೋಟಿ ರೂ.

ಬೇರೆ ರೀತಿಯ ಚುನಾವಣಾ  ಪ್ರಚಾರಗಳು ಮೇ10 ರ ಸಂಜೆ ಮುಕ್ತಾಯಗೊಳ್ಳುತ್ತವೆ. ಆದರೆ ಇದು ಪತ್ರಿಕಾ ಜಾಹಿರಾತುಗಳಿಗೆ ಅನ್ವಯಿಸುವುದಿಲ್ಲ, ಮತದಾನದ ಬೆಳಿಗ್ಯೆಯೂ ಪತ್ರಿಕೆಗಳ ಮುಖಪುಟಗಳು ದಿನದ ಮುಖ್ಯ ಸುದ್ದಿಯ ಮೇಲೆಯೇ ‘ಸರಕಾರ ಬದಲಿಸಿ’ ಎಂಬ ಘೋಷಣೆಯನ್ನು ಮೌನವಾಗಿ ಸಾರುತ್ತವೆ!

ಇದು  ಚುನಾವಣೆಯಲ್ಲಿ ಹಣಬಲದ ಒಂದು ಸ್ಯಾಂಪಲ್‍ ಆಗಿದ್ದರೆ, ತೋಳ್ಬಲದ ಒಂದು ಸ್ಯಾಂಪಲ್‍ ನ್ನು ಇನ್ನೊಂದು ವರದಿ ಕೊಡುತ್ತದೆ. ಎಡಿಆರ್ (ಅಸೋಸಿಯೇಷನ್‍ ಫಾರ್ ಡೆಮಾಕ್ರಟಿಕ್‍ ರಿಫಾರ್ಮ್ಸ್) ವಿಶ್ಲೇಷಿಸಿರುವ ಬಿಜೆಪಿಯ 224, ಕಾಂಗ್ರೆಸಿನ 220 ಮತ್ತು ಜೆಡಿ(ಎಸ್‍)ನ 199 ಅಭ್ಯರ್ಥಿಗಳಲ್ಲಿ  ತಮ್ಮ ಮೇಲೆ ಕ್ರಿಮಿನಲ್‍ ಆಪಾದನೆಗಳಿವೆ ಎಂದು ಅಫಿಡವಿಟ್‍ಗಳಲ್ಲಿ ಹೇಳಿಕೊಂಡಿರುವ ಅಭ್ಯರ್ಥಿಗಳಲ್ಲಿ 83 ಬಿಜೆಪಿಯವರು, 59 ಕಾಂಗ್ರೆಸಿನವರು ಮತ್ತು 41 ಜೆಡಿ(ಎಸ್‍)ನವರು.  ಅಂದರೆ ಬಿಜೆಪಿಯ 37% ಅಭ್ಯರ್ಥಿಗಳು ಕ್ರಿಮಿನಲ್‍ ದಾಖಲೆಗಳನ್ನು ಹೊಂದಿದ್ದರೆ, ಕಾಂಗ್ರೆಸಿನ 27% ಮತ್ತು ಜೆಡಿ(ಎಸ್‍)ನ 21% ಅಭ್ಯರ್ಥಿಗಳು ಈ ಸಾಲಿಗೆ ಸೇರಿದವರು..

Leave a Reply

Your email address will not be published. Required fields are marked *