ಭೀಮ ಕೊರಗಾಂವ್: ಪೀಡಿತರ ರಕ್ಷಣೆಗೆ ಬಂದವರ ಮೇಲೆ ಸ್ವೇಚ್ಛಾಚಾರಿ ಕ್ರಮ

ಭೀಮ-ಕೊರೆಗಾಂವ್ ಸಮರದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಬಹುದೊಡ್ಢ ಸಂಖ್ಯೆಯಲ್ಲಿ ನೆರೆದಿದ್ದ ದಲಿತರ ಮೇಲೆ ವ್ಯಾಪಕ ಹಿಂಸಾಚಾರದ ಪ್ರಕರಣದ ನಂತರ ಮಹಾರಾಷ್ಟ್ರ ಪೋಲೀಸರು ಈಗ ಕೈಗೊಂಡಿರುವ ಕ್ರಮಗಳಿಗೆ  ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿರೋಧ ವ್ಯಕ್ತಪಡಿಸಿದೆ.

ಸ್ವತಃ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಈ ಆಚರಣೆಯನ್ನು ಆರಂಭಿಸಿದ್ದರು. ಅದು ಈಗ ಮಹಾರಾಷ್ಟ್ರದಾದ್ಯಂತ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಬಿಟ್ಟಿದೆ.

ಆ ದಿನ ನೆರೆದವರ ಮೇಲೆ ಹಿಂಸಾಚಾರ ನಡೆಸಿದವರನ್ನು ಹಿಡಿದು ಶಿಕ್ಷಿಸುವ ಬದಲು ಬಿಜೆಪಿ ನೇತೃತ್ವದ ಸರಕಾರ ಹಿಂಸಾಚಾರಕ್ಕೆ ಒಳಗಾದವರನ್ನು ರಕ್ಷಿಸಲು ಹೊರಟವರ ಮೇಲೆಯೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಂತಹ ಕಠಿಣ ಕಾನೂನನ್ನೂ ಪ್ರಯೋಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಸರಕಾರದ ಇಂತಹ ಸ್ವೇಚ್ಛಾಚಾರದ ಕ್ರಮಗಳು ಅನ್ಯಾಯವನ್ನು ಅನುಭವಿಸುತ್ತಿರುವವರಲ್ಲಿಮತ್ತಷ್ಟು ಪರಕೀಯ ಭಾವ ಉಂಟಾಗಲು, ಸರಕಾರದ ಇಬ್ಬಗೆ ನೀತಿಯಿಂದ ಮತ್ತಷ್ಟು ನೋವುಣ್ಣುವಂತೆ ಮಾಡಲು ಕಾರಣವಾಗುತ್ತವೆ. ಇದನ್ನು ಪ್ರಜಾಪ್ರಭುತ್ವ ಮನೋಭಾವದ ಮತ್ತು ನ್ಯಾಯದ ಆಶಯ ಇಟ್ಟುಕೊಂಡಿರುವ ಎಲ್ಲರೂ ಪ್ರತಿಭಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಮನವಿ ಮಾಡಿದೆ.

ಮಹಾರಾಷ್ಟ್ರ ಸರಕಾರ ಇಂತಹ ಸೇಡಿನ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅದು ಆಗ್ರಹಿಸಿದೆ.

Leave a Reply

Your email address will not be published. Required fields are marked *