ಪಿಡಿಪಿ-ಬಿಜೆಪಿ ಮೈತ್ರಿ ಭಂಗ: ಬಿಜೆಪಿಯ ರಾಜಕೀಯ ವಿಫಲತೆಯ ಸಂಕೇತ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿ ಸರಕಾರದಿಂದ ಹೊರಬರುವ ನಿರ್ಧಾರ  ಈ ರಾಜ್ಯದಲ್ಲಿ ಈಗಿನ ನಿದಿಷ್ಟ ಕ್ಷಣದಲ್ಲಿ ಹೆಚ್ಚಿನ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುವ ಸಂಭವವಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ನಿಲುವಿನ ಸಂಪೂರ್ಣ ರಾಜಕೀಯ ವಿಫಲತೆಯನ್ನು ತೋರಿಸುತ್ತದೆ ಎಮದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಆರಂಭದಿಂದಲೇ ಈ ಮೈತ್ರಿ ಅಸಂಗತವಾಗಿತ್ತು. ಇದು ಯಾವುದೇ ವಿಷಯದಲ್ಲಿ ಎಂದೂ ಒಂದೇ ರೀತಿಯ ನಿಲುವು ಹೊಂದಿರದ, ಕೇವಲ ಅಧಿಕಾರದ ಲಾಭಗಳನ್ನು ಹಂಚಿಕೊಳ್ಳಲು ಒಟ್ಟುಗೂಡಿದ ಶಕ್ತಿಗಳ ಒಂದು ಪಕ್ಕಾ ಸಮಯಸಾಧಕ ಕೃತ್ಯವಾಗಿತ್ತು.

ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಸರಕಾರದ ಎಲ್ಲ ನಿರ್ಧಾರಗಳಲ್ಲಿ ಭಾಗಿಯಾಗಿತ್ತು. ಆದ್ದರಿಂದ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವಲ್ಲಿ ಹಾಗೂ ಜನಗಳಲ್ಲಿ ಪರಕೀಯ ಭಾವ ಆಳಗೊಳ್ಳುವಲ್ಲಿ ಅದರ ತನ್ನ ಕೊಡುಗೆಯ ಹೊಣೆಗಾರಿಕೆಯಿಂದ ಅದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ರಾಜ್ಯಸರಕಾರದ ಒಂದು ಭಾಗವಾಗಿ ಮತ್ತು ಕೇಂದ್ರ ಸರಕಾರದಲ್ಲಿ  ಅಧಿಕಾಧದಲ್ಲಿದ್ದು ಬಿಜೆಪಿ 1)ವಿಶ್ವಾಸ ಕುದುರಿಸುವ ಕ್ರಮಗಳನ್ನು ಮತ್ತು 2)ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ಸಮಗ್ರ ಸಂವಾದದ ಮುತುವರ್ಜಿ ವಹಿಸಿ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವ ಭರವಸೆಯನ್ನು ಕಾಶ್ಮೀರದ ಜನತೆಗೆ ನೀಡಿತ್ತು. ಕೇಂದ್ರ ಗೃಹ ಮಂತ್ರಿಗಳು ಸಪ್ಟಂಬರ್‍ 2017ರಲ್ಲಿ ಕಣಿವೆಗೆ ಸರ್ವ ಪಕ್ಷ ನಿಯೋಗವೊಂದರ ಭೇಟಿಯ ನಂತರ ಸಾರ್ವಜನಿಕವಾಗಿ ಪ್ರಕಟಿಸಿದ  ಈ ಎರಡು ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ.

ಈ ಭರವಸೆಗಳ ಡೇರಿಕೆಗೆ ಪ್ರಾಮಾಣಿಕತೆಯಿಂದ ಮುಂದಾಗಿದ್ದರೆ ಪರಿಸ್ಥಿತಿಯನ್ನು ಉತ್ತಮಪಡಿಸಬಹುದಾಗಿತ್ತು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಬಿಜೆಪಿ ಕೇಂದ್ರ ಸರಕಾರ ಮೊದಲಿಗೆ ಏಕಪಕ್ಷೀಯವಾಗಿ ಕದನ ವಿರಾಮ ಪ್ರಕಟಿಸಿತು. ನಂತರ ಅದನ್ನು ಹಿಂತೆಗೆದುಕೊಂಡಿತು.

ಇಂತಹ ಸನ್ನಿವೇಶದಲ್ಲಿ, ರಾಜ್ಯವನ್ನು ಇನ್ನಷ್ಟು ಹೆಚ್ಚಿನ ಅನಿಶ್ಚಿತತೆಯತ್ತ ನೂಕುವುದು, ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಸಾಧ್ಯತೆ ಜನಗಳಲ್ಲಿ ಆಳಗೊಳ್ಳುತ್ತಿರುವ ಪರಕೀಯ ಭಾವದ ಪ್ರಶ್ನೆಯನ್ನು ಎದುರಿಸಲು ನೆರವಾಗುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *