ಕೇರಳದಲ್ಲಿ ಮಳೆ-ಪ್ರವಾಹ: ನೆರವಿಗೆ ಧಾವಿಸಲು ಮನವಿ

ಇಡೀ ಕೇರಳ ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹಗಳು ವ್ಯಾಪಕ ಹಾನಿ ಉಂಟು ಮಾಡಿವೆ. ರಾಜ್ಯದ ಎಲ್ಲಾ ಜಿಲ್ಲೆಗಳು, ಎಲ್ಲಾ ೧೬೫೪ ಹಳ್ಳಿಗಳನ್ನು ಇದು ತಟ್ಟಿದೆ. ಇತ್ತೀಚಿನ ಈ ಮಳೆ, ಪ್ರವಾಹ, ಭೂಕುಸಿತ ಮುಂತಾದವುಗಳಿಂದಲೇ ಆಗಸ್ಟ್ 15 ರ ವೇಲೆಗೆ 65 ಜನ ಪ್ರಾಣ ಕಳಕೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ.

ಈ ವರ್ಷದ ಮಳೆಗಾಲದಲ್ಲಿ ಸತ್ತವರ ಒಟ್ಟು ಸಂಖ್ಯೆ ೨೬೫ ಆಗಿದೆ. ೫೦,೦೦೦ ಕ್ಕೂ ಹೆಚ್ಚು ಮನೆಗಳು ಸಂಪುರ್ಣವಾಗಿ ನೆಲಸಮ ಆಗಿವೆ, ಒಂದೂವರೆಲಕ್ಷಕ್ಕೂ ಹೆಚ್ಚು ಜನ ಈಗ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದ ಬಹುಭಾಗಗಳಲ್ಲಿ ರಸ್ತೆ, ರೈಲು ಮತ್ತು ವಿಮಾನ ಸಾಗಾಟವನ್ನು ನಿಲ್ಲಿಸಲಾಗಿದೆ. ರಾಜ್ಯದ ಎಲ್ಲ ನದಿಗಳೂ ಉಕ್ಕಿ ಹರಿಯುತ್ತಿವೆ. 27 ಆಣೆಕಟ್ಟುಗಳನ್ನು ತೆರೆಯಬೇಕಾಗಿ ಬಂದಿದೆ.

ಹಲವು ಸಂಸ್ಥೆಗಳು ಪಾಲ್ಗೊಂಡಿರುವ ಸಂಯೋಜಿತ ರಕ್ಷಣಾ ಪ್ರಯತ್ನಗಳನ್ನು ನಡೆಸಿದ್ದರೂ ರಾಜ್ಯದ ವಿವಿಧ ಪ್ರದೇಶಗಳು ಜಲಾವೃತ್ತವಾಗಿದ್ದು ಜನರು ಅಲ್ಲೇ ಸಿಲುಕಿಕೊಂಡಿದ್ದಾರೆ. ರಾಜ್ಯ ಸರಕಾರ ಜನಗಳಿಗೆ ಎಲ್ಲರೀತಿಯ ನೆರವುಗಳನ್ನು ಒದಗಿಸುತ್ತಿದೆ. ಕೇಂದ್ರ ಸರಕಾರವೂ ಎಲ್ಲ ನೆರವು ನೀಡುವ ಭರವಸೆ ನೀಡಿದೆ. ಸೇನೆ, ನೌಕಾಪಡೆ ಮತ್ತು ವಿಮಾನಪಡೆ ಹಾಗೂ ಇತರ ಸಂಸ್ಥೆಗಳು ಕುಡ ಸಾಧ್ಯವಾದ ನೆರವುಗಳನ್ನೇಲ್ಲಾ ನೀಡುತ್ತಿವೆ.

ಇಂತಹ ಅಭೂತಪೂರ್ವ ಸನ್ನಿವೇಶವನ್ನು ಎದುರಿಸುತ್ತಿರುವ ಕೇರಳದ ಜನತೆ ಎದುರಿಸುತ್ತಿರುವಾಗ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ನೆರವಾಗಲು ತುರ್ತಾಗಿ ಉದಾರ ವಂತಿಗೆ ನೀಡಬೇಕು ಎಂದು ಸಮಸ್ತ ದೇಶದ ಜನತೆಯನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕಳಕಳಿಯಿಂದ ವಿನಂತಿಸಿಕೊಂಡಿದೆ.  ಪಕ್ಷದ ಸದಸ್ಯರು, ಹಿತೈಷಿಗಳು ಮತ್ತು ಸಾರ್ವಜನಿಕರು ತಮ್ಮ ವೈಯಕ್ತಿಕ ದೇಣಿಗೆಗಳನ್ನು ಈ ಕೆಳಗಿನ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿಗೆ ಕಳಿಸಿ ಎಂದು ಅದು ಕೇಳಿದೆ:

ಎ.ಕೆ.ಗೋಪಾಲನ್ ಭವನ, 27-29, ಭಾಯೀ ವೀರ್‌ಸಿಂಗ್ ಮಾರ್ಗ್ ನವದೆಹಲಿ-110 001.

ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಗಳನ್ನು ಪಕ್ಷದ ರಾಜ್ಯ ಸಮಿತಿಗಳು ನೇರವಾಗಿ ಕೇರಳ ಸರಕಾರದ ಮುಖ್ಯಮಂತ್ರಿ ಸಂಕಟ ಪರಿಹಾರ ನಿಧಿಗೆ ಕಳಿಸಬೇಕು ಎಂದು ಹೇಳಿದೆ.

 

https://donation.cmdrf.kerala.gov.in/

The account details for bank transfer are given below:

Bank : State Bank of India (SBI)
Account Number : 67319948232
Branch : City Branch, Thiruvananthapuram
IFSC : SBIN0070028

 

Leave a Reply

Your email address will not be published. Required fields are marked *