ಏಳು ಪತ್ರಕರ್ತೆಯರು ಮುಂದೆ ಬಂದು ಕೇಂದ್ರ ಸರಕಾರದಲ್ಲಿ ರಾಜ್ಯಮಂತ್ರಿಯಾಗಿರುವ ಎಂ ಜೆ ಅಕ್ಬರ್ ವಿವಿಧ ಪತ್ರಿಕೆಗಳಲ್ಲಿ ಸಂಪಾದಕರಾಗಿದ್ದಾಗ ಅವರಿಂದ ಅನುಭವಿಸಿದ ಲೈಂಗಿಕ ಕಿರುಕುಳಗಳು ಮತ್ತು ಅವರ ಒಪ್ಪಲಾಗದ ವರ್ತನೆಯನ್ನು ನೆನಪಿಸಿಕೊಂಡಿದ್ದಾರೆ.
ಇವು ಗಂಭೀರ ಆಪಾದನೆಗಳಾಗಿರುವುದರಿಂದ ಎಂ ಜೆ ಅಕ್ಬರ್ ಮಂತ್ರಿಯಾಗಿ ಮುಂದುವರೆಯುವುದು ಅಸಮರ್ಥನೀಯ. ಅವರು ತಕ್ಕಣ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.