ದೇಶದ ಪ್ರಧಾನ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿನ ಇತ್ತೀಚಿನ ವಿದ್ಯಮಾನಗಳು ಕೇಂದ್ರದ ಬಿಜೆಪಿ ಸರಕಾರದ ಅಡಿಯಲ್ಲಿ ಭಾರತದಲ್ಲಿ ಸಂವಿಧಾನಿಕ ಪ್ರಾಧಿಕಾರಗಳು ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳಿಗೆ ಎಷ್ಟರ ಮಟ್ಟಿಗೆ ಹಾನಿ ಉಂಟಾಗಿದೆ ಎಂಬುದನ್ನು ತೋರಿಸುತ್ತವೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟಿಪ್ಪಣಿ ಮಾಡಿದೆ.
ಸಂಸತ್ತನ್ನೇ ಶಿಥಿಲಗೊಳಿಸುವುದು, ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮತ್ತು ಸಿಬಿಐನಂತಹ ಸಂಸ್ಥೆಗಳಲ್ಲಿ ಕೈಚಳಕ ಇವೆಲ್ಲ ಕಳಪೆ ‘ಆಳ್ವಿಕೆ’ಯಿಂದಾಗಿ ಅಲ್ಲ, ಬದಲಾಗಿ, ಭಾರತೀಯ ಸಂವಿಧಾನದ ಜಾತ್ಯತೀತ ಜನವಾದಿ ಬುನಾದಿಗಳನ್ನು ಶಿಥಿಲಗೊಳಿಸುವ ದುಷ್ಟ ಆಶಯಗಳಿಂದಾಗಿ ನಡೆಯುತ್ತಿವೆ ಎಂದಿರುವ ಪೊಲಿಟ್ಬ್ಯುರೊ ಈ ಬೆಳವಣಿಗೆಗಳು ಭಾರತೀಯ ಗಣತಂತ್ರಕ್ಕೆ ಗಂಭೀರ ಹಾನಿಯುಂಟು ಮಾಡುತ್ತಿವೆ ಎಂದು ಪರಿಗಣಿಸಬೇಕು, ಇವನ್ನು ಖಡಾಖಂಡಿತವಾಗಿ ಪ್ರತಿರೋಧಿಸಬೇಕು ಎಂದು ಹೇಳಿದೆ.
ಆರೆಸ್ಸೆಸ್-ಬಿಜೆಪಿ ನಮ್ಮ ದೇಶದ ಸಂವಿಧಾನಿಕ ವ್ಯವಸ್ಥೆಗೆ ಇನ್ನಷ್ಟು ಹಾನಿಯುಂಟು ಮಾಡದಂತೆ ತಡೆಯಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ.