ಮೋದಿ ಸರಕಾರದ ವಿನಾಶಕಾರಿ ನೋಟು ರದ್ಧತಿಗೆ ಎರಡು ವರ್ಷ

ಈಗಲೂ ಜೇಟ್ಲಿಯಿಂದ ನಾಚಿಕೆಗೆಟ್ಟ ಸಮರ್ಥನೆ

ಈ ನವಂಬರ್ ೭, ನೋಟುರದ್ಧತಿಯ ಎರಡನೇ ವಾರ್ಷಿಕದ ದಿನ. ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ,  ಪ್ರಧಾನ ಮಂತ್ರಿ ಮೋದಿ ನಮ್ಮ ಆರ್ಥಿಕದ ಮೇಲೆ ಮತ್ತು ನಮ್ಮ ಜನಗಳ ಮೇಲೆ ಹೇರಿದ ಈ ವಿನಾಶದಿಂದ ಭಾರತೀಯ ಆರ್ಥಿಕ ವ್ಯವಸ್ಥೆ ಈಗಲೂ ಕೂಡ ಚೇತರಿಸಿಕೊಂಡಿಲ್ಲ ಎಂದು ಹೇಳಿದೆ.

ಅದು ಲಕ್ಷಾಂತರ ರೂ.ಗಳಷ್ಟು ಕಪ್ಪು ಹಣವನ್ನು ಹೊರಗೆಳೆಯುತ್ತದೆ, ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತದೆ ಎಂಬುದು ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗಿದೆ. ತದ್ವಿರುದ್ಧವಾಗಿ, ನಿಷೇಧಕ್ಕೆ ಒಳಗಾದ ನೋಟುಗಳಲ್ಲಿ ೯೯.೪%ದಷ್ಟು ವ್ಯವಸ್ಥೆಯೊಳಕ್ಕೆ ಮರಳಿ ಬಂದಿವೆ. ನಿಜ ಹೇಳಬೇಕೆಂದರೆ, ನೋಟುರದ್ಧತಿ ಕಪ್ಪು ಹಣವನ್ನು ಬಿಳಿ ಮಾಡುವ ದಾರಿಯಾಗಿ ಬಿಟ್ಟು ಅತ್ಯಂತ ಭ್ರಷ್ಟರಿಗೆ ನೆರವಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಪೊಲಿಟ್‌ ಬ್ಯುರೊ ಹೇಳಿದೆ.

ಮತ್ತೊಂದೆಡೆಯಲ್ಲಿ, ಪ್ರತಿದಿನ ನಗದು ವ್ಯವಹಾರಗಳನ್ನೇ ಅವಲಂಬಿಸಿದ್ದ ಕೋಟ್ಯಂತರ ಜನರು  ವಿಧ್ವಂಸಗೊಂಡಿದ್ದಾರೆ. ಅಸಂಘಟಿತ ವಲಯದಲ್ಲಿ ೩೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ. ಅದೇ ರೀತಿಯಲ್ಲಿ, ಸಣ್ಣ ಮತ್ತು ಮಧ್ಯಮ  ಪ್ರಮಾಣದ ಉದ್ದಿಮೆಗಳು ತಮ್ಮ  ಆದಾಯಗಳಲ್ಲಿ ಅಪಾರ ನಷ್ಟಗಳನ್ನು ಅನುಭವಿಸಬೇಕಾಗಿ ಬಂತು. ಆ ವೇಳೆಯಲ್ಲಿ ಮೋದಿಯವರು,  ನಿಧಿಗಳು  ಸಿಗದೆ ಭಯೋತ್ಪಾದನೆಯ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ ಎಂದು ಹೇಳಿಕೊಂಡರು. ತದ್ವಿರುದ್ಧವಾಗಿ, ಅಧಿಕೃತ ಮಾಹಿತಿ ಭಯೋತ್ಪಾದನೆಯ ದಾಳಿಗಳು ದ್ವಿಗುಣಗೊಂಡವು ಎಂದು ಹೊರಗೆಡಹುತ್ತವೆ.

ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾದ ಈ ಹೊಲಸಿಗೆ ಅಷ್ಟೇ ಕಾರಣರಾದ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ನಡೆಸಿರುವ ನೋಟುರದ್ಧತಿಯ ನಾಚಿಕೆಗೆಟ್ಟ ಸಮರ್ಥನೆಯನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ.

ಈಗ ದೇಶಾದ್ಯಂತ ನಡೆಸಿರುವ ಪ್ರಚಾರ ಕಾರ್ಯದಲ್ಲಿ ಪಕ್ಷದ ಘಟಕಗಳು ಈ ನೋಟುರದ್ಧತಿ ವಿನಾಶದ ಸಂಗತಿಗಳನ್ನು ಜನಗಳ ನಡುವೆ ಒಯ್ಯುತ್ತವೆ  ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *