ನ್ಯಾಯಾಂಗ ಪ್ರಕ್ರಿಯೆಯ ನಂತರ ಸರಕಾರ ರಾಮ ಮಂದಿರವನ್ನು ಕಟ್ಟಲು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳು ಒಂದು ಸಂದರ್ಶನದಲ್ಲಿ ಘೋಷಿಸಿದ್ದಾರೆ. ಆರೆಸ್ಸೆಸ್ ಇದು ಪ್ರಧಾನ ಮಂತ್ರಿಗಳ ಒಂದು ಸಕಾರಾತ್ಮಕ ನಿಲುವು ಎಂದು ಸ್ವಾಗತಿಸಿದೆ. ಇದು ವಿಷಾದನೀಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಇದು, ನ್ಯಾಯಾಲಯದ ತೀರ್ಪು ಏನೇ ಬರಲಿ, ಸರಕಾರ ಮಂದಿರ ಕಟ್ಟಲು ಅನುಕೂಲ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸುಪ್ರಿಂ ಕೋರ್ಟಿನ ಮೇಲೆ ಒತ್ತಡ ಹಾಕುವ ಒಂದು ನಡೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಪ್ರಧಾನ ಮಂತ್ರಿಗಳು ಸಂವಿಧಾನದ ಅಡಿಯಲ್ಲಿ ತನ್ನ ಹುದ್ದೆಯ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ, ಆದ್ದರಿಂದ ಅವರು ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಬದ್ಧರಾಗಿರಲೇ ಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ನೆನಪಿಸಿದೆ.