ಚಾರಿತ್ರಿಕ ಮಹಿಳಾ ಗೋಡೆ : ಕೇರಳದ ಮಹಿಳೆಯರಿಗೆ ಅಭಿನಂದನೆ

ಜನವರಿ 1ರಂದು ಚಾರಿತ್ರಿಕ ಮಹಿಳಾ ಗೋಡೆಯನ್ನು ನಿರ್ಮಿಸಿದ ಕೇರಳದ ಮಹಿಳೆಯರನ್ನು ಮತ್ತು ಎಲ್ಲ 176 ಸಾಮಾಜಿಕ ಹಾಗೂ ಸಾಮೂಹಿಕ ಸಂಘಟನೆಗಳನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿನಂದಿಸಿದೆ.

ಜಾತಿ/ಸಮುದಾಯಗಳ ಸೀಮೆಗಳನ್ನು ಮೀರಿ ನಿಂತು ಎಲ್ಲ ಜನವಿಭಾಗಗಳ 55 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದ ಈ ಮಹಿಳಾ ಗೋಡೆ ಮಹಿಳಾ ಹಕ್ಕುಗಳು ಮತ್ತು ಸುಧಾರಣೆ ಕುರಿತಂತೆ ಕೇರಳದ ನವೋತ್ಥಾನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಒಂದು ಬಲವಾದ ಐಕ್ಯತೆಯ ಸಂದೇಶವನ್ನು ಸಾರಿದೆ.

Millions of women joined hands along a highway in Kerala to form a "women's wall" on January 1. For participants, the goal is gender equality.

ಆರೆಸ್ಸೆಸ್ ನೇತೃತ್ವದ ಕೋಮುವಾದಿ ಬಲಪಂಥೀಯ ಶಕ್ತಿಗಳು ದೇಶಾದ್ಯಂತ ಪ್ರತಿಗಾಮೀ ಮನುವಾದಿ ತತ್ವ-ಸಿದ್ಧಾಂತಗಳನ್ನು ಹೇರಲು ಪ್ರಯತ್ನಿಸುತ್ತಿರುವಾಗ, ಮಹಿಳಾ ಗೋಡೆ ಒಂದು ವ್ಯಾಪಕವಾದ ಮಹತ್ವವನ್ನು ಹೊಂದಿದೆ, ಅದು ಮನುವಾದಿ ತತ್ವಗಳನ್ನು ಹೇರುವ ಎಲ್ಲ ಪ್ರಯತ್ನಗಳಿಗೆ ಒಂದು ವ್ಯಾಪಕವಾದ ಪ್ರತಿರೋಧಕ್ಕೆ ಉತ್ತೇಜನೆ ನೀಡುತ್ತದೆ.

Leave a Reply

Your email address will not be published. Required fields are marked *