ಸಕ್ರಿಯ ಕಾರ್ಯಕರ್ತರ ಮೇಲೆ ದುಷ್ಟರೀತಿಯಲ್ಲಿ ಗುರಿಯಿಡುವ ಮೋದಿ ಸರಕಾರ ಮತ್ತು ರಾಜ್ಯಗಳ ಬಿಜೆಪಿ ಸರಕಾರಗಳ ಕೆಲಸ ತೀವ್ರಗೊಳ್ಳುತ್ತಿದೆ. ಭೀಮ -ಕೋರೆಗಾಂವ್ ಕೇಸಿನಲ್ಲಿ ಹೆಸರಾಂತ ಬುದ್ಧಿಜೀವಿ ಆನಂದ ತೇಲ್ತುಂಬ್ಡೆ ಯವರೊಡನೇ ವರ್ತಿಸುತ್ತಿರುವ ರೀತಿ ಇದನ್ನು ದೃಢಪಡಿಸಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ತೇಲ್ತುಂಬ್ಡೆಯವರ ಮೇಲೆ ಈ ಕೇಸಿನಲ್ಲಿ ಸುಳ್ಳು ಆರೋಪ ಹೊರಿಸಲಾಗಿದೆ. ಆ ಘಟನೆಯ ಸ್ಥಳದಲ್ಲಿ ಅವರು ಇರಲೇ ಇಲ್ಲ. ಇವರು ಒಬ್ಬ ಹಿರಿಯ ಪ್ರಾಧ್ಯಾಪಕರು ಮತ್ತು ವಿಮರ್ಶಾತ್ಮಕ ಪ್ರಶಂಸೆ ಗಳಿಸಿರುವ ಹಲವು ಕೃತಿಗಳ ಲೇಖಕರೂ ಆಗಿದ್ದಾರೆ.
ಈ ಹಿಂದೆ ಈ ಸರಕಾರಗಳ ಧೋರಣೆಗಳನ್ನು /ಚಟುವಟಿಕೆಗಳನ್ನು ಟೀಕಿಸುವ ಮತ್ತು ಅಸಮ್ಮತಿಯ ದನಿಯೆತ್ತಿದವರ ಮೇಲೆ ನಗರ ನಕ್ಸಲೀಯರು ಎಂಬ ಮಿಥ್ಯಾರೋಪದ ಹಣೆ ಪಟ್ಟಿ ಹಚ್ಚಿ ಇಂತಹ ದಾಳಿಗಳು ನಡೆದಿವೆ. ಅಸ್ಸಾಂನ ಗೌರವಾನ್ವಿತ ಹಿರಿಯ ಬುದ್ಧಿಜೀವಿ ಹಿರೇನ್ ಗೋಹೆನ್ ಮತ್ತಿತರರ ಮೇಲೆ ಅವರು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ರಾಷ್ಟ್ರದ್ರೋಹದ ಆರೋಪ ಹೊರಿಸಲಾಗಿದೆ. ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಸಾರ್ವಜನಿಕ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರಿಗೆ ಇಂತಹ ಕಿರುಕುಳ ಕೊಡುತ್ತಿರುವುದನ್ನು ಖಂಡಿಸಿದೆ, ಆನಂದ್ ತೇಲ್ತುಂಬ್ಡೆಯವರ ವಿರುದ್ಧ ಹಾಕಿರುವ ಸುಳ್ಳು ಕೇಸನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.