ಕೃಷಿ-ಕೈಗಾರಿಕಾ ಬಿಕ್ಕಟ್ಟಿನ ನಿವಾರಣೆಗೆ ಆದ್ಯತೆ ನೀಡದ ಚುನಾವಣೆಯ ಬಜೆಟ್

ದುಡಿಯುವ ಜನತೆಗೆ ಪರ್ಯಾಯ ಹಾದಿ ತೋರದ- ಜನತೆಯ ಮೇಲೆ ಸಾಲದ ಹೊರೆ ಹೇರಿದ ರಾಜ್ಯ ಬಜೆಟ್

ರಾಜ್ಯದ ಜನತೆಯ ಮೇಲೆ 48,601 ಕೋಟಿ ಮೊತ್ತದ ಸಾಲದ ಹೊರೆಯನ್ನೇರುವ ಸಾರ್ವಜನಿಕ ಸಾಲವನ್ನೊಳಗೊಂಡ 2,೩೪,೧೫೩ ಕೋಟಿ ರೂಪಾಯಿಗಳ 2019-20 ರ ಸಾಲಿನ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.

ರೈತರ ಸಾಲ ಮನ್ನಾಕ್ಕಾಗಿ ಸುಮಾರು ೧೨,೫೦೦ ಕೋಟಿ ಹಣ ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹವಾಗಿದೆ.

ಆದರೇ ರೈತರು ಸಾಲಗಾರರಾಗದಂತೆ ತಡೆಯಲು ಅಗತ್ಯವಾದ ಗಂಭೀರ ಕ್ರಮಗಳಾದ ಡಾ.ಎಂ.ಎಸ್ ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಒಂದೂವರೆಯಷ್ಠು ಬೆಲೆ ನೀಡುವ ಮತ್ತು ಅದನ್ನು ಖಾತರಿಯಾಗಿ ದೊರೆಯುವಂತೆ ಮಾಡಲು ಶಾಸನವನ್ನಾಗಿಸುವ ಕ್ರಮ ಮತ್ತು ಅದಕ್ಕೆ ತಕ್ಕನಾದ ಪರಿಣಾಮಕಾರಿ ನೆರವುಗಳು ಬಜೆಟ್ ನಲ್ಲಿ ಕಂಡು ಬರುತ್ತಿಲ್ಕ.

ಕಳೆದ ವರ್ಷವು ಮುಂಗಾರು ಮತ್ತು ಹಿಂಗಾರು ವಿಫಲವಾಗಿದ್ದು, ಅದರ ಪರಿಹಾರವು ಗ್ರಾಮೀಣ ಜನತೆಗೆ ಪರಿಣಾಮಕಾರಿಯಾಗಿ ದೊರೆಯುವಂತಹ ಕ್ರಮಗಳಿಲ್ಲ.

ಹೀಗಾಗಿ ಕೃಷಿ ರಂಗದ ಮತ್ತು ರೈತ ಹಾಗೂ ಕೂಲಿಕಾರರ ಕುಟುಂಬಗಳ ಸಂಕಷ್ಠ ಮುಂದುವರೆಯುವುದನ್ನು ತಡೆಯುವ ಪರಿಣಾಮಕಾರಿ ಕ್ರಮಗಳ ಸೂಚನೆಗಳು ಇಲ್ಲಾ !

ಕೃಷಿ ಕೂಲಿಕಾರರ ಸಂರಕ್ಷಣೆಯ ಸಮಗ್ರ ಕಾಯ್ದೆ ಹಾಗೂ ಅವರ ಉದ್ಯೋಗ ಭದ್ರತೆಯ ಕುರಿತಾಗಲೀ ಮಾತನಾಡುತ್ತಿಲ್ಲ ಈಚೆಗೆ ರಾಜ್ಯದ ಕಾರ್ಮಿಕ ವರ್ಗ ಎರಡು ದಿನಗಳ ಮುಷ್ಕರ ಮಾಡಿ ಪ್ರತಿಭಟನೆ ನಡೆಸಿದರೂ ಅವರ ಕನಿಷ್ಠ ವೇತನದಲ್ಲಿ ಹೆಚ್ಚಳದ ಕ್ರಮಗಳಾಗಲೀ ಮತ್ತು ಗುತ್ತಿಗೆ ಪದ್ದತಿಯನ್ನು ತೆಗೆದು ಹಾಕಿ ಖಾಯಂ ಉದ್ಯೋಗ ಒದಗಿಸುವ ವಿಚಾರದ ಕುರಿತು ಬಜೆಟ್ ಮಾತನಾಡಿಲ್ಲ.

ಎಸ್.ಸಿ. ಎಸ್.ಟಿ ಗಳಿಗೆ ೩೬,೦೦೦ ಕೋಟಿ ರೂ ನಿಗದಿಸಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿ ದಲಿತ ಕುಟುಂಬಗಳನ್ನು ಪುನರ್ವಸತಿಗೆ ಒಳಪಡಿಸುವ ಯೋಜನೆಗಳು ಇಲ್ಲ. ಎಸ್ ಸಿ, ಎಸ್.ಟಿ, ಬಿ.ಸಿ.ಎಂ ವಿದ್ಯಾರ್ಥಿಗಳಿಗಾಗಿ   ವಸತಿ ಶಾಲೆಗಳ ನಿರ್ಮಾಣಕ್ಕೆ ೧೦೦ ಕೋಟಿ ರೂಗೂ ಹೆಚ್ಚು ಅನುದಾನ ಒದಗಿಸಿರುವುದು ಸ್ವಾಗತಾರ್ಹವಾದರೂ, ಅಲ್ಲಿ ದುಡಿಯುವ ಜನತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಪ್ರಸ್ತಾಪಗಳಿಲ್ಲ

ನಿರುದ್ಯೋಗಿ ಯುವಜನರಿಗೆ ಅಗತ್ಯದಷ್ಠು ಉದ್ಯೋಗ ನೀಡಲಾಗದಾದಾಗ ನಿರುದ್ಯೋಗ ಭತ್ಯೆಯನ್ನು ನೀಡುವ ಬಗ್ಗೆ ಪ್ರಸ್ತಾಪವಾಗಿಲ್ಲ.

ಕರ್ನಾಟಕದ ಕೃಷಿ ರಂಗ ಹಾಗೂ ಕೈಗಾರಿಕಾ ರಂಗದ ಬಿಕ್ಕಟ್ಟನ್ನು ಮತ್ತು ಅದರಿಂದ ತೀವ್ರ ಸಂಕಷ್ಠವನ್ನೆದುರಿಸುವ ಅಲ್ಲಿನ ರೈತರು, ಕೂಲಿಕಾರರು, ಕಸುಬುದಾರರು,ಮತ್ತು ಕಾರ್ಮಿಕರ ಸಂಕಷ್ಠವನ್ನು ನಿವಾರಿಸುವ ಅವರ ಕೇಳಿಕೆಯ ಪರ್ಯಾಯಕ್ಕೆ ವೇದಿಕೆಯಾಗಿಸುವ ಬದಲು,  ಕೃಷಿ ಮತ್ತು ಕೈಗಾರಿಕಾ ವಲಯವನ್ನು ಬಹುರಾಷ್ಠ್ರೀಯ ಸಂಸ್ಥೆಗಳ ಲೂಟಿಗೆ ತೆರೆಯುವ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಜಾಡನ್ನೇ ಈ ಬಜೆಟ್ ಹಿಡಿದಿದೆ.

2020 ರಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಏರ್ಪಡಿಸಲು ಬಂಡವಾಳದಾರರಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನಾಡಿದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *