ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡಬಳ್ಳಾಪುರದಲ್ಲಿ ಏಪ್ರಿಲ್ ೧೪ರಂದು ಸಿಪಿಐಎಂ ಅಭ್ಯರ್ಥಿ ಎಸ್.ವರಲಕ್ಷ್ಮಿಯವರ ಪರ ಪ್ರಚಾರದ ಬಹಿರಂಗ ಸಭೆ ನಡೆಯಿತು.
ಬಹಿರಂಗ ಸಭೆಯ ಮುಂಚಿತವಾಗಿ ಬೈಕ್ ರ್ಯಾಲಿ, ರೋಡ್ ಶೋ ಮೂಲಕ ಸಿಪಿಐಎಂ ಅಭ್ಯರ್ಥಿ ಎಸ್.ವರಲಕ್ಷ್ಮಿಯವರ ಪರ ಮತ ಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಸುಭಾಷಿಣಿ ಅಲಿಯವರು ಮತ್ತು ಮುಖಂಡರಾದ ಚಂದ್ರತೇಜಸ್ವಿ, ಮೀನಾಕ್ಷಿ ಸುಂದರಂ, ಕೆ.ಎನ್ ಉಮೇಶ್ ಮುಂತಾದವರು ಇದ್ದರು.