ಚಂಡಮಾರುತ ಫೊನಿಯಿಂದ ಒಡಿಶ ಮತ್ತು ಆಂದ್ರಪ್ರದೇಶದ ಉತ್ತರ ಭಾಗಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಜೀವ, ಜಾನುವಾರು ಮತ್ತು ಆಸ್ತಿಗಳಿಗೆ ಉಂಟಾಗಿರುವ ಭಾರೀ ಹಾನಿಯ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ.
ಈ ತೀವ್ರ ಚಂಡಮಾರುತ ಈಗ ಪಶ್ಚಿಮ ಬಂಗಾಲದತ್ತ ಸಾಗುತ್ತಿದ್ದು ಇನ್ನಷ್ಟು ಹಾನಿ ಉಂಟು ಮಾಡಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರಕಾರಗಳು ಜನಗಳಿಗೆ ಪರಿಹಾರ ಒದಗಿಸಲು ಮತ್ತು ಅವರನ್ನು ಇನ್ನಷ್ಟು ಕಷ್ಟ-ಕಾರ್ಪಣ್ಯಗಳಿಂದ ರಕ್ಷಿಸಲು ಅತ್ಯಂತ ತುರ್ತಿನಿಂದ ಕೆಲಸ ಮಾಡಬೇಕಾಗಿದೆ.
ಸಂಪನ್ಮೂಲಗಳ ಕೊರತೆ ಯುದ್ಧಸ್ತರದಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಲು ಅಡ್ಡಿಯಾಗಬಾರದು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಸಂಕಟಗ್ರಸ್ತ ಪ್ರದೇಶಗಳಲ್ಲಿ ಪರಿಹಾರಗಳನ್ನು ಒದಗಿಸಲು ಮತ್ತು ಸಂಕಟಕ್ಕೆ ಗುರಿಯಾಗುವವರ ನೆರವಿಗೆ ಧಾವಿಸುವಂತೆ ಪಕ್ಷದ ಎಲ್ಲ ಘಟಕಗಳನ್ನು ಜಾಗೃತಗೊಳಿಸಲಾಗಿದೆ ಎಂದು ಹೇಳಿದೆ.