ಟ್ರಂಪ್ ಆಡಳಿತದ ದಬಾವಣೆಗಳಿಗೆ ಪ್ರತಿಕ್ರಮಗಳೇಕೆ ಇಲ್ಲ ?

ಅಮೆರಿಕಾದ ಆಣತಿ ಎದುರು ಇಳಿದು ಹೋಯಿತೇ ಮೋದಿ ಸರಕಾರದ ’ರಾಷ್ಟ್ರವಾದ’ದ ಅಬ್ಬರ ?

ಅಮೆರಿಕ ಸಂಯುಕ್ತ ಸಂಸ್ಥಾನ ’ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್’(ಸಾಮಾನ್ಯೀಕರಿಸಿದ ಆದ್ಯತೆಯ ವ್ಯವಸ್ಥೆ) ಅಢಿಯಲ್ಲಿ ಭಾರತಕ್ಕೆ ಇದ್ದ ಆದ್ಯತೆಯ ಅವಕಾಶಗಳನ್ನು ಕೊನೆಗೊಳಿಸಲು ನಿರ್ಧರಿಸಿದೆ. ಇದು ಅಕಾರಣ ಮತ್ತು ಅನಗತ್ಯ ಕ್ರಮ. ಇದು ಅಮೆರಿಕಾಕ್ಕೆ ಅನುಕೂಲಕರವಾಗುವಂತಹ ವ್ಯಾಪಾರ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಭಾರತವನ್ನು ಬಲವಂತ ಮಾಡಲು ಟ್ರಂಪ್ ಆಡಳಿತ ಆರಂಭಿಸಿರುವ ಅಮೆರಿಕ-ಭಾರತ ವ್ಯಾಪಾರ ಕುರಿತ ಕ್ರಮಗಳ ಸರಣಿಯ ಒಂದು ಭಾಗವಾಗಿದೆ. ಈ ಹಿಂದೆ ಅದು ಭಾರತದಿಂದ ಆಮದು ಮಾಡುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಸುಂಕಗಳನ್ನು ಹೆಚ್ಚಿಸಿತ್ತು.

ಮಾರ್ಚ್ ತಿಂಗಳ ಆರಂಭದಲ್ಲೇ ಟ್ರಂಪ್ ಆಡಳಿತ ಈ ಕ್ರಮವನ್ನು ಕೈಗೊಳ್ಳುವ ಬಗ್ಗೆ ಪ್ರಕಟಿಸಿದ್ದರೂ ಇದನ್ನು ತಡೆಯಲು ಅಥವ ಇದನ್ನು ಎದುರಿಸಲು ಏನೂ ಮಾಡಲಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖೇದ ವ್ಯಕ್ತಪಡಿಸಿದೆ. ಇರಾನಿನಿಂದ ತೈಲ ಖರೀದಿಯನ್ನು ಅಮೆರಿಕಾ ನಿಷೇಧಿಸಿದಾಗ ತಳೆದಂತೆಈಗಲೂ ಶರಣಾಗುವ ನಿಲುವನ್ನು ತಳೆಯುತ್ತಿದೆ.

ಇದು ನರೇಂದ್ರ ಮೋದಿ ಮತ್ತು ಬಿಜೆಪಿ ಅಬ್ಬರಿಸುತ್ತಿದ್ದ ’ರಾಷ್ಟ್ರವಾದ’ವನ್ನು ನಗೆಪಾಟಲು ಮಾಡುತ್ತಿದೆಅವರ ಈ ’ರಾಷ್ಟ್ರವಾದ’ ಅಮೆರಿಕಾದ ಆಣತಿಗಳು ಬಂದಾಗ ಕೆಲಸವನ್ನೇ ಮಾಡುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.

Leave a Reply

Your email address will not be published. Required fields are marked *