ಪಂಚಾಯತಿ ಚುನಾವಣೆ: ನಗೆಪಾಟಿಲಿಗೆ ಗುರಿಯಾದ ಬಿಜೆಪಿ

ತ್ರಿಪುರಾದಲ್ಲಿ ಜಲೈ 27ರಂದು ನಡೆಯಲಿರುವ ಮೂರು ಹಂತಗಳ ಪಂಚಾಯತು ಚುನಾವಣೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಒಂದು ಬೃಹತ್ ಮತ್ತು ವ್ಯಾಪಕ ದಾಳಿಗಳನ್ನು ಕಾಣುತ್ತಿವೆ.

ನಾಮಪತ್ರ ಸಲ್ಲಿಸುವ ಜುಲೈ 1 ರಿಂದ 8ರ ಅವಧಿಯಲ್ಲಿ ಬಿಜೆಪಿಯ ಶಸ್ತ್ರಸಜ್ಜಿತ ಪಡೆಗಳು ಸಿಪಿಐ(ಎಂ) ಮತ್ತು ಇತರ ಪ್ರತಿಪಕ್ಷಗಳ ಅಭ್ಯರ್ಥಿಗಳು ನಾಮಪತ್ರಗಳನ್ನು ಪಡೆಯದಂತೆ ಮತ್ತು ಪಡೆದರೂ ಸಲ್ಲಿಸದಂತೆ ತಡೆದಿವೆ. ಚುನಾವಣಾ ಕಚೇರಿಗಳ ಮುಂದೆ ಬೈಕ್-ಸವಾರ ಬಿಜೆಪಿ ಗಲಭೆಕೋರರನ್ನು ನಿಲ್ಲಿಸಲಾಗಿತ್ತು. ಈ ಮೂಲಕ ಯಾವ ಪ್ರತಿಪಕ್ಷದ ಅಭ್ಯರ್ಥಿಯೂ ನಾಪತ್ರ ಪಡೆಯದಂತೆ ಮತು ಪಡೆದರೂ ಸಲ್ಲಿಸದಂತೆ ಮಾಡಲಾಗಿದೆ. ಬಹಳಷ್ಟು ಕಡೆ ಪೋಲೀಸರು ಮೂಕ ಪ್ರೇಕ್ಷಕರಾಗಿದ್ದರು.

ಭಯ ಮತ್ತು ಬೆದರಿಕೆಯ ವಾತಾವರಣ ಸೃಷ್ಟಿಸಲು ಸಿಪಿಐ(ಎಂ)ನ ಅಭ್ಯರ್ಥಿಗಳಾಗಬಹುದಾದವರ ಮೇಲೆ ದೈಹಿಕ ಹಲ್ಲೆಗಳನ್ನು ಮತ್ತು ಪಕ್ಷದ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಉದಾ: ಸಿಪಿಐ(ಎಂ)ನ ಉತ್ತರ ತ್ರಿಪುರಾ ಜಿಲ್ಲಾಸಮಿತಿ ಮತ್ತು ಧರ್ಮನಗರ ಉಪ-ವಿಭಾಗ ಕಚೇರಿಯ ಮೇಲ ದಾಳಿ ನಡೆಸಲಾಗಿದೆ.

ಈ ಬೆದರಿಕೆಗಳನ್ನು ಎದುರಿಸಿ ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿಯಾಗಿರುವ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳನ್ನು ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಬೆದರಿಸಲಾಗುತ್ತಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಜುಲೈ ೧೧ರಂದು, ಇದರಿಂದಾಗಿ 121 ಸಿಪಿಐ(ಎಂ) ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿದೆ.

ಈ ಭಯೋತ್ಪಾದಕ ಪ್ರಚಾರದಿಂದಾಗಿ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ನಂತರ ಪಂಚಾಯತು ಸಮಿತಿಗಳಲ್ಲಿ ಮತ್ತು ಗ್ರಾಮ ಪಂಚಾಯತುಗಳಲ್ಲಿ 90ಶೇ. ಸ್ಥಾನಗಳು ಸ್ಪರ್ಧೆಯಿಲ್ಲದೇ ಬಿಜೆಪಿಗೆ ಹೋಗಿವೆ. ಜುಲೈ 27ರಂದು ನಡೆಯಲಿರುವ ಪಂಚಾಯತು ಚುನಾವಣೆಗಳಲ್ಲಿ ಈಗ 6111 ಗ್ರಾಮ ಪಂಚಾಯತು ಸ್ಥಾನಗಳಲ್ಲಿ ಎಡರಂಗದ 306 ಅಭ್ಯರ್ಥಿಗಳು ಮತ್ತು ೪೧೯ ಪಂಚಾಯತು ಸಮಿತಿ ಸೀಟುಗಳಲ್ಲಿ ೫೬ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಜಿಲ್ಲಾ ಪರಿಷದ್‌ನ 116 ಸೀಟುಗಳಲ್ಲಿ 69 ಎಡರಂಗ ಅಭ್ಯರ್ಥಿಗಳು ಇದ್ದಾರೆ.

ಈ ಎಲ್ಲ ಸೀಟುಗಳಲ್ಲಿ ಎಲ್ಲ ದಾಳಿಗಳನ್ನೂ ಎದುರಿಸಿ ಸ್ಪರ್ಧಿಸಿಯೇ ತೀರುತ್ತೇವೆ, ಆಳುವ ಪಕ್ಷದ ಪ್ರಜಾಪ್ರಭುತ್ವ-ವಿರೋಧಿ ಮತ್ತು ಫ್ಯಾಸಿಸ್ಟ್ ಮಾದರಿ ವಿಧಾನಗಳನ್ನು ಬಯಲಿಗೆಳೆಯುತ್ತೇವೆ ಎಂದು ಸಿಪಿಐ(ಎಂ) ಮತ್ತು ಎಡರಂಗ ದೃಢ ನಿರ್ಧಾರ ಮಾಡಿವೆ.

ಬಿಜೆಪಿ, ಈ ಹಿಂದೆ ಸಪ್ಟಂಬರ್ 2018ರಲ್ಲಿ ಮೂರು ಹಂತಗಳ ಪಂಚಾಯತು ಸಂಸ್ಥೆಗಳಿಗೆ ಉಪಚುನಾವಣೆಗಳ ಸಂದರ್ಭದಲ್ಲಿ ಮಾಡಿದ್ದನ್ನೇ ಈಗ ಇನ್ನೂ ದೊಡ್ಡ ಪ್ರಮಾಣದಲ್ಲಿ ಪುನರಾವರ್ತಿಸುತ್ತಿದೆ. ಆಗ 96 ಶೇ. ಸ್ಥಾನಗಳಲ್ಲಿ ಪ್ರತಿಪಕ್ಷಗಳಿಗೆ ನಾಮಪತ್ರಗಳನ್ನೂ ಸಲ್ಲಿಸಲಾಗದಂತೆ ಮಾಡಿ ಅದು ಸ್ಪರ್ಧೆಯಿಲ್ಲದೇ ಗೆದ್ದು ಕೊಂಡಿತ್ತು.

ಇದೇ ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಪಂಚಾಯತು ಚುನಾವಣೆಗಳಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಈ ವಿಷಯದಲ್ಲಿ ಸುಪ್ರಿಂ ಕೋರ್ಟಿಗೂ ಹೋಗಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ತ್ರಿಪುರಾದಲ್ಲಿ ಅದು ತನ್ನ ರಾಜ್ಯ ಸರಕಾರದ ಅಡಿಯಲ್ಲಿ ಅದನ್ನೇ ಮಾಡುತ್ತಿದೆ.

ತ್ರಿಪುರಾದಲ್ಲಿ ಬಿಜೆಪಿಯ ಈ ಸರ್ವಾಧಿಕಾರಶಾಹಿ ಮತ್ತು ಪ್ರಜಾಪ್ರಭುತ್ವ-ವಿರೋಧಿ ತಂತ್ರಗಳನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಇದು ಪಂಚಾಯತು ಚುನಾವಣೆಗಳಲ್ಲಿ ಪ್ರಜಾಪ್ರಭುತ್ವ ಹಕ್ಕಿನ ಚಲಾವಣೆಯನ್ನು ನಗೆಪಾಟಲು ಮಾಡಿದೆ ಎಂದಿರುವ ಅದು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಈ ಕೊಲೆಯ ವಿರುದ್ಧ ಪ್ರತಿಭಟನೆಯ ದನಿಯೆತ್ತಬೇಕು ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *