ಗುಡ್ ರಿಚ್ ಕಂಪನಿಗೆ ಭೂ ಮಂಜೂರಾತಿ ರದ್ದುಪಡಿಸಲು ಒತ್ತಾಯ

ಅಮೇರಿಕಾ ಮೂಲದ ಬಹುರಾಷ್ಟ್ರೀಯ ವೈಮಾನಿಕ ಗುಡ್ ರಿಚ್ ಕಂಪನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ SEZ ಏರೊಸ್ಪೇಸ್ ಪ್ರದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು 25 ಎಕರೆ 1 ಗುಂಟೆ ಜಮೀನನ್ನು ನಿಯಮಾವಳಿಗಳನ್ನು ಅನುಸರಿಸದೇ ಮತ್ತು ಮಂತ್ರಿಮಂಡಲ ರಚನೆಯ ಪೂರ್ವದಲ್ಲಿಯೇ ತರಾತುರಿಯಲ್ಲಿ ಮುಂಜೂರು ಮಾಡಿರುವುದನ್ನು ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ತಲಾ ಎಕರೆಗೆ 10 ಕೋಟಿ ರೂಗಳಿಗೂ ಅಧಿಕ ಮೌಲ್ಯವಿರುವ ಜಮೀನನ್ನು ಕೇವಲ 2.5 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ.

ಇದೊಂದು ನೂರಾರು ಕೋಟಿ ರೂ. ಗಳ ಹಗರಣವಾಗಿದ್ದು ಇದರಲ್ಲಿ ಭ್ರಷ್ಠಾಚಾರದ ವಾಸನೆ ಹೊಡೆಯುತ್ತಿದೆ.

ತಕ್ಷಣವೇ, ಮುಖ್ಯಮಂತ್ರಿ ಯಡಿಯೂರಪ್ಪನವರು ನಿಯಮ ಮೀರಿ ಮತ್ತು ಅತ್ಯಂತ ಕಡಿಮೆ ಬೆಲೆಗೆ ಮುಂಜೂರು ಮಾಡಿದ ಆದೇಶವನ್ನು ರದ್ದು ಪಡಿಸುವಂತೆ ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ಈ ಹಿಂದಿನ ಸರಕಾರವೂ ಇದೇ ರೀತಿ, ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು  ಎಕರೆಗೆ 30-40 ಲಕ್ಷ ರೂ ಬೆಲೆ ಬಾಳುವ ಭೂಮಿಯನ್ನು ಕೇವಲ ಸರಾಸರಿ 1.30 ಲಕ್ಷ ರೂ. ಗಳಿಗೆ ಮಾರಾಟ ಮಾಡಲು ಮುಂದಾಗಿತ್ತು. ಅದನ್ನು ರಾಜ್ಯದ ಜನತೆಯ ಪ್ರತಿಭಟನೆಯ ನಂತರ ತಡೆಹಿಡಿಯಲಾಗಿತ್ತು.

ಆಗ ಪ್ರತಿಭಟನೆ ನಡೆಸಿದ್ದ ಯಡಿಯೂರಪ್ಪನವರು ತಾವೇ ಇದೀಗ ಈ ರೀತಿ ಕ್ರಮವಹಿಸಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಇದು ಹೇಳುವುದೊಂದು ಮತ್ತು ಮಾಡುವುದೊಂದು ಎಂಬ ಅವರ ದ್ವಿಮುಖ ನೀತಿಯನ್ನು ಎತ್ತಿ ತೋರಿದೆ

ರೈತರನ್ನು ವಂಚಿಸಿ ಅತ್ಯಂತ ಕಡಿಮೆ ಬೆಲೆಗೆ ಬಲವಂತವಾಗಿ ಸ್ವಾದೀನ ಪಡಿಸಿಕೊಂಡ ಕೃಷಿ ಜಮೀನುಗಳನ್ನು, ಮರಳಿ ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟು ಮಾಡಿ ಭ್ರಷ್ಟಾಚಾರದಲ್ಲಿ ತೊಡಗುವ ಇಂತಹ ದುರ್ನೀತಿಯನ್ನು ಕೂಡಲೇ ನಿಲ್ಲಿಸುವಂತೆ ಸಿಪಿಐ(ಎಂ) ಒತ್ತಾಯಿಸಿದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *