ಸೀತಾರಾಂ ಯೆಚೂರಿ ಸ್ಥಾನ ಬದ್ಧತೆ – ಸಿಪಿಐ(ಎಂ) ಖಂಡನೆ

ಜಮ್ಮು ಕಾಶ್ಮೀರದ ಸಿಪಿಐ(ಎಂ) ಶಾಸಕರಾದ ಯುಸೂಫ್ ತರಿಗಾಮಿ ಮತ್ತಿತರ ಕಾರ್ಯಕರ್ತರ  ಯೋಗ ಕ್ಷೇಮ ವಿಚಾರಿಸಲು ಶ್ರೀನಗರಕ್ಕೆ ಭೇಟಿ ನೀಡಿದ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಂ||ಸೀತಾರಾಂ ಯೆಚೂರಿಯವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿಯೇ ಸ್ಥಾನ ಬದ್ಧತೆಯಲ್ಲಿಡಲಾಗಿದೆ.

ಕೇಂದ್ರ ಸರಕಾರದ ಈ ಸರ್ವಾಧಿಕಾರಿ ನೀತಿಯನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಭೇಟಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯೆಚೂರಿರವರು ಎಲ್ಲೂ ಹೋಗದಂತೆ ದಿಗ್ಬಂಧಿನ ವಿಧಿಸಿರುವ ಕ್ತಮ ಅತಿರೇಕದಿಂದ ಕೂಡಿದೆ. ತಕ್ಷಣವೇ ಅವರ ದಿಗ್ಬಂಧನ ವಾಪಾಸು ಪಡೆದು ಕಾಶ್ಮೀರದ ಸಂಗಾತಿಗಳನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *