ಜಮ್ಮು ಕಾಶ್ಮೀರದ ಸಿಪಿಐ(ಎಂ) ಶಾಸಕರಾದ ಯುಸೂಫ್ ತರಿಗಾಮಿ ಮತ್ತಿತರ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸಲು ಶ್ರೀನಗರಕ್ಕೆ ಭೇಟಿ ನೀಡಿದ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಂ||ಸೀತಾರಾಂ ಯೆಚೂರಿಯವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿಯೇ ಸ್ಥಾನ ಬದ್ಧತೆಯಲ್ಲಿಡಲಾಗಿದೆ.
ಕೇಂದ್ರ ಸರಕಾರದ ಈ ಸರ್ವಾಧಿಕಾರಿ ನೀತಿಯನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ಈ ಭೇಟಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯೆಚೂರಿರವರು ಎಲ್ಲೂ ಹೋಗದಂತೆ ದಿಗ್ಬಂಧಿನ ವಿಧಿಸಿರುವ ಕ್ತಮ ಅತಿರೇಕದಿಂದ ಕೂಡಿದೆ. ತಕ್ಷಣವೇ ಅವರ ದಿಗ್ಬಂಧನ ವಾಪಾಸು ಪಡೆದು ಕಾಶ್ಮೀರದ ಸಂಗಾತಿಗಳನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.
ಯು. ಬಸವರಾಜ, ಕಾರ್ಯದರ್ಶಿ