ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಕಾಣಬೇಕು ಎಂಬ ಕೇಂದ್ರ ಗೃಹಮಂತ್ರಿಗಳ ಪ್ರಕಟಣೆ ಭಾರತೀಯ ಸಂವಿಧಾನದ ಭಾವನೆಗೆ ಮತ್ತು ನಮ್ಮ ದೇಶದ ಭಾಷಾ ವೈವಿಧ್ಯತೆಗೆ ತದ್ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಪಟ್ಟಿ ಮಾಡಿರುವ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳು, ಅವೆಲ್ಲವನ್ನೂ ಸಮಾನವಾಗಿ ಕಾಣಬೇಕು. ಯಾವುದೇ ಒಂದು ಭಾಷೆಯನ್ನು ಹೇರುವ ಯಾವುದೇ ಪ್ರಯತ್ನ ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಛಿದ್ರಗೊಳಿಸುವುದಕ್ಕೆ ದಾರಿಯಾಗುತ್ತದೆ ಎಂದು ಅದು ಎಚ್ಚರಿಸಿದೆ.
ಇಂತಹ ಪ್ರಯತ್ನಗಳನ್ನು ಬಲವಾಗಿ ವಿರೋಧಿಸುತ್ತೇವೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಪ್ರಯತ್ನಗಳು ಆರೆಸ್ಸೆಸ್ ನ “ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಭಾಷೆ” ಎಂಬ ಪರಿಕಲ್ಪನೆಯಿಂದ ಹೊಮ್ಮಿರುವಂತದ್ದು.